ಬೆಂಗಳೂರು: ಕರ್ನಾಟಕದ ಪ್ರತೀತಿ ಬೊರ್ಡೊಲಾಯಿ, ಕಜಕಸ್ತಾನದ ಅಲ್ಮಾಟಿಯಲ್ಲಿ ಮಂಗಳವಾರ ಮುಕ್ತಾಯಗೊಂಡ 26ನೇ ಯೂತ್ ಚೆಸ್ ಚಾಂಪಿಯನ್ಷಿಪ್ನ (ರ್ಯಾಪಿಡ್ ವಿಭಾಗ) ಬಾಲಕಿಯರ 12 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾಳೆ.
ಈಕೆ ಏಳು ಸುತ್ತುಗಳಿಂದ 6.5 ಪಾಯಿಂಟ್ಸ್ ಸಂಗ್ರಹಿಸಿ ಅಜೇಯರಾಗುಳಿದಳು.12 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಕರ್ನಾಟಕದ ಸಿದ್ಧಾರ್ಥ ಪೂಂಜಾ ಏಳು ಸುತ್ತುಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ ಬೆಳ್ಳಿಯ ಪದಕ ಗೆದ್ದುಕೊಂಡನು.
ಬುಧವಾರ ಕ್ಲಾಸಿಕಲ್ ವಿಭಾಗದ ಟೂರ್ನಿ ಆರಂಭವಾಗಲಿದೆ. ಭಾರತ ರ್ಯಾಪಿಡ್ ವಿಭಾಗದಲ್ಲಿ ಇನ್ನೂ ಎರಡು ಪದಕಗಳನ್ನು ಗಳಿಸಿತು. ನಾರಾಯಣಿ ಮರಾಠೆ (8 ವರ್ಷದೊಳಗಿನವರ ವಿಭಾಗ) ಚಿನ್ನದ ಪದಕ ಗಳಿಸಿದರೆ, ಪೂಜಾಶ್ರೀ ಆರ್. 10 ವರ್ಷದೊಳಗಿನವರ ವಿಭಾಗದಲ್ಲಿ ಸ್ವರ್ಣ ಗೆದ್ದುಕೊಂಡಳು.