ಬೆಂಗಳೂರು: ಕಳೆದ ವರ್ಷಕ್ಕಿಂತ ಈ ಬಾರಿ ಚಳಿ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿಕೋವಿಡ್ ಕಾಣಿಸಿಕೊಂಡಿದೆ. ಚಳಿ ಕಡಿಮೆಯಾಗು ತ್ತಿದ್ದಂತೆ ಕೋವಿಡ್ ಮಾಯವಾಗಲಿದೆ ಎಂದು ಹವಾಮಾನ ಇಲಾಖೆ ಹಾಗೂ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಚಳಿ ಇನ್ನು ಕೇವಲ 15-20 ದಿನಗಳು ಮಾತ್ರ ಹೆಚ್ಚಾಗಿದ್ದು, ತದನಂತರ ತಾನೇ ತಾನಾಗಿ ಕಡಿಮೆಯಾಗಲಿದೆ. ಚಳಿ ಕಡಿಮೆಯಾಗುತ್ತಿದ್ದಂತೆ ಬಿಸಿಲು ಕ್ರಮೇಣ ಜಾಸ್ತಿಯಾಗುತ್ತ ಬರುತ್ತಿದ್ದಂತೆ ಕೋವಿಡ್ ಸೋಂಕು ಮಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.ಜನ ಯಾವುದೇ ಕಾರಣಕ್ಕೂ ಆತಂಕ ಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.