ಕನಕಪುರ: ಕಳ್ಳತನ ಮಾಡಲು ನಡೆಸಿದ ಯತ್ನ ವಿಫಲ ವಾಗಿ ಖದೀಮ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರರಿಯಾಗಿರುವ ಘಟನೆ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ನಡೆದಿದೆ.ನಗರದ ವಿವೇಕಾನಂದ ನಗರದ ನಾಲ್ಕನೇ ರಸ್ತೆಯ ನಿವಾಸಿ ಕಲೀಲ್ ಎಂಬುವರ ಮನೆಯಲ್ಲಿ ಬುಧವಾರ ಕಳ್ಳತನ ಯತ್ನ ನಡೆದಿದೆ,
ರಾತ್ರಿ ಸುಮಾರು12 ರ ಸಮಯ ದಲ್ಲಿ ಖದೀಮ ಕಲೀಲ್ ಅವರ ಮನೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ನಿಲುಗಡೆ ಮಾಡಿ ಮೊದಲನೇ ಮಹಡಿ ಮೇಲಿರುವ ಕಲೀಲ್ ಅವರ ಮನೆಗೆ ಕಳ್ಳತನ ಮಾಡಲು ಎಂಟ್ರಿ ಕೊಡುವಾಗಲೇ ಅದೇ ಸಮಯಕ್ಕೆ ಕಲೀಲ್ ಅವರ ತಾಯಿ ಹೊರಗಡೆ ಬಂದಾಗ ಕಳ್ಳತನ ಮಾಡಲು ಬಂದಿದ್ದ ಖದೀಮ ಮೊದಲನೇ ಮಹಡಿ ಯಿಂದ ರಸ್ತೆಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ 8 ತಿಂಗಳ ಹಿಂದೆ ಇದೇ ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಳ್ಳತನ ನಡೆದಿತ್ತು ಕಲೀಲ್ ಅವರು ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು ಆದರೆ ಪೊಲೀಸರು ಕಳ್ಳತನ ಮಾಡಿದ ಖದೀಮನನ್ನು ಪತ್ತೆ ಹಚ್ಚಿರಲಿಲ್ಲ ಈಗ ಮತ್ತೆ ಅದೇ ಮನೆಯಲ್ಲಿ ಕಳ್ಳತನ ಯತ್ನ ನಡೆದಿದ್ದು ಈ ಹಿಂದೆ 8 ತಿಂಗಳ ಹಿಂದೆ ಕಳ್ಳತನ ಮಾಡಿದ್ದ ಖದೀಮನೆ ಈಗಲೂ ಕಳ್ಳತನ ಮಾಡಲು ಯತ್ನ ನಡೆಸಿರ ಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಬುಧವಾರ ರಾತ್ರಿ ಕಳ್ಳನೊಬ್ಬ ನಮ್ಮ ಮನೆಯಲ್ಲಿ ಕಳ್ಳತನ ಮಾಡಲು ಬಂದಿದ್ದ ರಾತ್ರಿ 12 ರ ಸಮಯದಲ್ಲಿ ಮೊದಲನೇ ಮಹಡಿಯಲ್ಲಿರುವ ನಮ್ಮ ಮನೆಯ ಒಳಗೆ ಪ್ರವೇಶ ಮಾಡಲು ಬಂದಾಗ ನಮ್ಮ ತಾಯಿ ಅದೇ ಸಮಯಕ್ಕೆ ಹೊರಗೆ ಬಂದಾಗ ಕಳ್ಳತನ ಮಾಡಲು ಬಂದಿದ್ದ ಖದೀಮ ಮೊದಲನೇ ಮಹಡಿಯಿಂದ ಕೆಳಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದರೂ ಸಹ ಪೊಲೀಸರು ಬಂದು ಏನಾಗಿದೆ ಸ್ಥಳದಲ್ಲಿ ಬಿಟ್ಟು ಹೋಗಿ ರುವ ದ್ವಿಚಕ್ರವಾಹನ ಯಾವುದು ಎಂದು ಪರಿಶೀಲನೆ ಯನ್ನು ಮಾಡಿಲ್ಲ ಎಂದು ಕಲೀಲ್ ತಿಳಿಸಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ಕಳ್ಳತನ ನಡೆದಿತ್ತು ನಾವು ಠಾಣೆಗೆ ದೂರು ಕೊಟ್ಟಿದ್ದೇವೆ ಆದರೆ ಖದೀಮನನ್ನು ಪತ್ತೆ ಹಚ್ಚುವ ಕೆಲಸ ಇದುವರೆಗೂ ಆಗಿಲ್ಲ,ಈಗ ಮತ್ತೆ ನಮ್ಮ ಮನೆಯಲ್ಲಿ ಕಳ್ಳತನ ಮಾಡುವ ಯತ್ನ ನಡೆದಿದೆ ಮಾಹಿತಿ ನೀಡಿದರು ಪೊಲೀಸರು ಸ್ಥಳಕ್ಕೆ ಬಂದಿಲ್ಲ ನಾವು ಆಗಾಗ ಮನೆಯಲ್ಲಿ ಇರುವುದಿಲ್ಲ ನಮ್ಮ ಮನೆಯಲ್ಲಿ ಮತ್ತೆ ಕಳ್ಳತನದ ಯತ್ನ ನಡೆದಿದೆ ನಾವು ಮನೆ ಯಿಂದ ಹೋರಗೆ ಹೊದರೆ ಯಾರು ಬಂದು ಯಾವಾಗ ಕಳ್ಳತನ ಮಾಡುತ್ತಾರೋ ಎಂದು ಭಯವಾಗುತ್ತಿದೆ ಎಂದು ಕಲೀಲ್ ಆತಂಕ ವ್ಯಕ್ತಪಡಿಸಿದ್ದಾರೆ.