ಬೆಂಗಳೂರು: ಪಕ್ಷದಲ್ಲಿರುವ ಗೊಂದಲವನ್ನು ಬಗೆ ಹರಿಸಿ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದಲ್ಲಿ ಮುಖಂಡರು ಹಾಗೂಕಾರ್ಯಕರ್ತರು ಸಕ್ರಿಯವಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕೆಂದರೆ ಆದಷ್ಟೂ ಶೀಘ್ರ ಗೊಂದಲ ಬಗೆಹರಿಸಿ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮೊಂದಿಗೆ ಮಾತನಾಡಿದಾಗ ಅಧಿಕಾರದಲ್ಲಿ ಮುಂದುವರಿಯಲು ಹಾಗೂ ವರಿಷ್ಠರು ಹೇಳಿದರೆ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ. ಅವರು ಮುಕ್ತ ಮನಸ್ಸಿನಲ್ಲಿದ್ದಾರೆ. ರಾಹುಲ್ಗಾಂಧಿ ಹೇಳಿದರೆ ತಾವು ಎಲ್ಲದಕ್ಕೂ ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.
ಈಗಿರುವಾಗ ಯಾವುದೇ ಗೊಂದಲವಿಲ್ಲದೆ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಬೇಕು ಎಂದಿದ್ದಾರೆ.
ಪಕ್ಷದಲ್ಲಿನ ಗೊಂದಲ ಬಗೆಹರಿಸಿ ಕೆ.ಎನ್.ರಾಜಣ್ಣ



