ಹಣಕಾಸು ಸೇವೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆಗಾಗಿ ಮಹಿಳಾ ಸಾಧಕಿಯರಿಗಾಗಿ ನೀಡುವ ಐಎಮ್ಸಿ ಲೇಡಿಸ್ ವಿಂಗ್ ಪ್ರಶಸ್ತಿಯು ಈ ಬಾರಿ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಮಣಿಮೇಖಲೈ ರವರಿಗೆ ಲಭಿಸಿದೆ.
ಐಎಂಸಿ ಛೇಂಬರ್ ಅಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಮಹಿಳಾ ವಿಭಾಗದವರು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಪ್ರತಿವರುಷವೂ ಹಣಕಾಸು, ಬ್ಯಾಂಕಿಂಗ್ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಗಣನೀಯ ಸಾಧನಗೈದ ಮಹಿಳಾ ಸಾಧಕಿಗೆ ನೀಡಲಾಗುತ್ತಿದೆ.ಗೋಡ್ರೆಜ್ ಇಂಡಸ್ಟ್ರೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಾದಿರ್ ಗೋಡ್ರೇಜ್ ರವರು ಶ್ರೀಮತಿ ಮಣಿಮೇಖಲೈ ರವರಿಗೆ ಈ ಪ್ರಶಸ್ತಿಯನ್ನು ಮುಂಬೈ ನಲ್ಲಿ ಪ್ರದಾನ ಮಾಡಿದರು.
ಮೂರು ದಶಕಕ್ಕೂ ಹೆಚ್ಚು ಅನುಭವ ಮತ್ತು ಪಾಂಡಿತ್ಯವಿರುವ ಶ್ರೀಮತಿ ಮಣಿಮೇಖಲೈ ರವರು ವಿಜಯಾ ಬ್ಯಾಂಕ್ ನಲ್ಲಿ ತಮ್ಮ ಬ್ಯಾಂಕಿಂಗ್ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 2012 ಜೂನ್ ನಲ್ಲಿ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ನಿಯುಕ್ತಿಗೊಂಡರು. ಇದಕ್ಕೂಮುನ್ನ ಶ್ರೀಮತಿ ಮಣಿಮೇಖಲೈ ರವರು ಕೆನರಾ ಬ್ಯಾಂಕ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.