ಬೆಂಗಳೂರು: ಆನ್ಲೈನ್ನಲ್ಲಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಇಂದು ರಾಷ್ಟ್ರಾದ್ಯಂತ ಮೆಡಿಕಲ್ ಶಾಪ್ಗೆ ಬಂದ್ ಕರೆ ನೀಡಲಾಗಿದೆ. ಕಳೆದ ಮಧ್ಯರಾತ್ರಿಯಿಂದಲೇ ಇಂದು ರಾತ್ರಿ ಮಧ್ಯರಾತ್ರಿವರೆಗೂ ರಾಜ್ಯಾದ್ಯಂತ ಔಷಧಿ ಅಂಗಡಿಗಳು ಬಂದ್ ಆಗಲಿವೆ. ರಾಜ್ಯದಲ್ಲಿ ಸುಮಾರು 26000 ಔಷಧಿ ಮಳಿಗೆಗಳಿದ್ದು, ಬೆಂಗಳೂರಿನಲ್ಲಿರುವ 6000 ಅಂಗಡಿಗಳ ಪೈಕಿ 5000ಕ್ಕೂ ಹೆಚ್ಚು ಅಂಗಡಿಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ.



