ಬೆಂಗಳೂರು: ಪ್ರತಿವರ್ಷ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲ ವಿಧಾನಮಂಡಲದ ಅಧಿವೇಶನ ಈ ಬಾರಿ ಜುಲೈನಲ್ಲಿ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ.
ಡಿಸೆಂಬರ್ ಬದಲಿಗೆ ಮುಂಚಿತವಾಗಿ ಮುಂಗಾರು ಅಧಿವೇಶನ ನಡೆಸಲು ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಸಾಧಕ ಬಾದಕಗಳ ಬಗ್ಗೆ ಚರ್ಚಿಸಲು ಇಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮೊದ್ ರೋಷನ್ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆದಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳಳ ಬರುವ ಸಚಿವರು, ಶಾಸಕರು ಮತ್ತುಅಧಿಕಾರಿಗಳಿಗೆ ವಸತಿ ಸೌಕರ್ಯ ಕಲ್ಪಿಸುವುದು ಸೇರಿದಂತೆ ಅಧಿವೇಶನಕ್ಕೆ ಪೂರಕವಾಗಿ ನಡೆಸಬೇಕಾದ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ಬೆಳಗಾವಿಯ ಕನ್ನಡಪರ ಸಂಘಟನೆಗಳವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಬಗ್ಗೆಯೂ ಕನ್ನಡ ಸಂಘಟನೆಗಳವರು ಸಭೆ ನಡೆಸಿ ಚಳಿಗಾಲದ ಬದಲಿಗೆ ಮುಂಗಾರಿನಲ್ಲಿಯೇ ಅಧಿವೇಶನ ನಡೆಸುವುದಕ್ಕೆ ತಮ್ಮ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಜುಲೈ ತಿಂಗಳಲ್ಲಿ ಮಳೆ ಹಾಗೂ ನೆರೆ ಉಂಟಾಗುತ್ತದೆ. ಇದರಿಂದಾಗಿ ಅಧಿಕಾರಿಗಳು ಮಳೆ ಅಥವಾ ನೆರೆ ನೋಟೋತ್ತಾರೋ, ಅಧಿವೇಶನ ನೋಡೊತ್ತಾರೋ ಎಂಬ ಗೊಂದಲ ಎದುರಾಗುತ್ತದೆ. ಹಾಗಾಗಿ ಮುಂಗಾರು ಬದಲಿಗೆ ಚಳಿಗಾಲದ ಅಧಿವೇಶನ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಬದಲಿಗೆ ಮುಂಗಾರು ಅಧಿವೇಶನ



