ಬೆಂಗಳೂರು: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರದ ಇನ್ಫೋಸಿಸ್ ಲೇಔಟ್ ನಲ್ಲಿ ತಾಯಿ ಮಗುವಿಗೆ ನೇಣು ಹಾಕಿನಂತರ ತಾನು ಸಹ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
ಪ್ರೀತಿ(29) ಎಂಬ ಮಹಿಳೆ ವಿಷ್ಣು ಎಂಬ ಎಂಟು ವರ್ಷದ ಗಂಡು ಮಗುವಿಗೆ ಮೊದಲು ಫ್ಯಾನಿಗೆ ನೇಣು ಹಾಕಿ ನಂತರ ತಾನು ಸಹ ನೇಣು ಬಿಗಿದು ಕೊಂಡು ಮೃತಪಟ್ಟಿರುತ್ತಾಳೆ.ಈಕೆಯ ಗಂಡ ಅನಾರೋಗ್ಯದಿಂದ 10 ತಿಂಗಳ ಹಿಂದೆ ಮೃತಪಟ್ಟಿರುತ್ತಾನೆ.
ಮೂಲತಃ ಈಕೆ ಕನಕಪುರ ತಾಲೂಕಿನವಳು. ಮೃತ ಪ್ರೀತಿ ಕಿಂಡರ್ ಗಾರ್ಡ್ನ್ನಲ್ಲಿ ಕೆಲಸ ಮಾಡುತ್ತಿದ್ದಳು.ಆನೇಕಲ್ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ನಡೆಸಿರುತ್ತಾರೆ.