ಬಾಲಿವುಡ್ ಚೆಲುವೆ ಕಿಯಾರಾ ಅಡ್ವಾಣಿ ದಕ್ಷಿಣದ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ನಟ ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣದ ನಡುವೆಯೇ ಆಕೆ ಗರ್ಭಿಣಿ ಆಗಿರುವ ಸುದ್ದಿ ಹಂಚಿಕೊಂಡಿದ್ದರು. ಇದೇ ಕಾರಣಕ್ಕೆ ಸಿನಿಮಾ ಚಿತ್ರೀಕರಣ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಕಳೆದ ವರ್ಷ ಮಗಳಿಗೆ ಜನ್ಮ ನೀಡಿದ್ದ ಕಿಯಾರಾ ಆಕೆಗೆ ಸರಯಾಹ್ ಮಲ್ಹೋತ್ರಾ ಎಂದು ನಾಮಕರಣ ಮಾಡಿದ್ದರು.
ಸದ್ಯ ತಮ್ಮ ಮಗಳ ಭವಿಷ್ಯ ಬಗ್ಗೆ ಕಿಯಾರಾ ಆಡಿರುವ ಮಾತುಗಳು ವೈರಲ್ ಆಗ್ತಿದೆ. Raj Shamani ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ `ಟಾಕ್ಸಿಕ್’ ಬೆಡಗಿ ಮಾತನಾಡಿ ವೈಯಕ್ತಿಕ ಜೀವನ, ಸಿನಿಮಾ ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮಗಳು ‘ಪ್ಲೀಪಲ್ ಪ್ಲೀಸರ್’ ಆಗುವುದು ಬೇಡ, ಅಂದ್ರೆ ಇತರರನ್ನು ಸಂತೋಷಪಡಿಸಲು ತನ್ನ ಸ್ವಂತ ಅಗತ್ಯಗಳನ್ನು ತ್ಯಾಗ ಮಾಡುವವಳಾಗಬಾರದು ಎಂದು ಹೇಳಿದ್ದರು. ಇದೇ ಪಾಡ್ಕಾಸ್ಟ್ನಲ್ಲಿ ನನ್ನ ಮಗಳು ಎಷ್ಟು ಜನರ ಜೊತೆಗೆ ಬೇಕಿದ್ದರೆ ಡೇಟಿಂಗ್ ಮಾಡಲಿ ಅಭ್ಯಂತರವಿಲ್ಲ ಎಂದು ಕಿಯಾರಾ ಹೇಳಿರುವುದು ವೈರಲ್ ಆಗ್ತಿದೆ.
ಭವಿಷ್ಯದಲ್ಲಿ ನಿಮ್ಮ ಮಗಳು ಹೇಗಿರಬೇಕು, ಸಮಾಜದಲ್ಲಿ ಹೇಗೆ ಬೆಳೆಯಬೇಕು ಎನ್ನುವ ಪ್ರಶ್ನೆಗೆ ಕಿಯಾರಾ ಉತ್ತರಿಸಿದ್ದಾರೆ. “ಮಗಳು ಫುಲ್ ಲೈಫ್ ನೋಡಬೇಕು ಎಂದು ಬಯಸುತ್ತೇನೆ. ಅಂದ್ರೆ ಯಾವುದೇ ಅಡೆತಡೆ ಇಲ್ಲದೇ ತನ್ನ ಇಷ್ಟದಂತೆ ಬದುಕಬೇಕು. ಆಕೆ ಒಬ್ಬ ವ್ಯಕ್ತಿ ಜೊತೆ ಡೇಟ್ ಮಾಡಬೇಕು ಅಂತ ಏನಿಲ್ಲ. ಆಕೆಗೆ ಯಾವುದೇ ಕಟ್ಟಲೆ ಇರಲ್ಲ. ಮದುವೆ ಆಗಬೇಕು ಅಂದ್ರೆ ಆಗಲಿ.. ಇಲ್ಲ ಅಂದ್ರೆ ಬೇಡ. ನನ್ನ ಪೋಷಕರು ಪ್ರೀತಿಸಿ ಮದುವೆ ಆದ್ರು, ಕೊನೆಗೆ ನಾನು ಪ್ರೀತಿಸಿದವನನ್ನೇ ಮದುವೆ ಆಗಿದ್ದು. ಡೇಟ್ ಮಾಡಿದ ಪ್ರತಿಯೊಬ್ಬರನ್ನು ಮಗಳು ಮದುವೆ ಆಗಬೇಕು ಅಂತ ಇಲ್ಲ. ಅವಳದ್ದೇ ಎಲ್ಲಾ ಆಯ್ಕೆ.. ನನ್ನ ಪೋಷಕರು ನನ್ನ ಅದೇ ರೀತಿ ಬೆಳೆಸಿದ್ರು.” ಎಂದಿದ್ದಾರೆ. ಜೀವನದಲ್ಲಿ ಎಲ್ಲರೂ ತಪ್ಪುಗಳನ್ನು ಮಾಡ್ತಾರೆ. ಅದರಿಂದ ಕಲಿಯುವ ಪಾಠಗಳು ನನ್ನನ್ನು ಉತ್ತಮವಾಗಿಸುತ್ತವೆ. ರಿಲೇಷನ್ಶಿಪ್ಸ್ ಸಾಕಷ್ಟು ಪಾಠ ಕಲಿಸುತ್ತದೆ. ಏನು ಕಲಿಯುತ್ತೇವೆ ಎನ್ನುವುದು ಮುಖ್ಯ ಎಂದು ಕಿಯಾರಾ ಹೇಳಿದ್ದಾರೆ.
ನನ್ನ ಮಗಳು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡ್ಬೇಕು, ಮದ್ವೆ ಆಗ್ಲೇಬೇಕು ಅಂತೇನಿಲ್ಲ



