ಸಂಕೀರ್ಣ ಮೆದುಳು ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳಲ್ಲಿ ಹೆಚ್ಚಿನ ನಿಖರತೆ, ಸುರಕ್ಷತೆ ಮತ್ತು ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ಸಾಧಿಸುವತ್ತ ಮಹತ್ವದ ಹೆಜ್ಜೆ
ಬೆಂಗಳೂರು: ಆಸ್ಟರ್ ಸಿಎಂಐ ಆಸ್ಪತ್ರೆ ಅತ್ಯಾಧುನಿಕ ನರವಿಜ್ಞಾನ ಚಿಕಿತ್ಸೆಯಲ್ಲಿ ತನ್ನ ಮೇಲುಗೈಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಆಸ್ಪತ್ರೆ, ನ್ಯೂರೋಸರ್ಜರಿ ವಿಭಾಗದ ಅಡಿಯಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಮಝೋರ್ ಎಕ್ಸ್ ಮತ್ತು ಮೆದುಳು ಹಾಗೂ ತಲೆ ಸಂಬಂಧಿತ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಆರ್ಒಎಸ್ಎ ಎಂಬ ಎರಡು ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಈ ಹೊಸ ರೋಬೋಟಿಕ್ ವ್ಯವಸ್ಥೆಗಳು ವೈದ್ಯರಿಗೆ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ನಿಖರತೆ ಮತ್ತು ಸುರಕ್ಷತೆಯೊಂದಿಗೆ ನಡೆಸಲು ಸಹಾಯ ಮಾಡುತ್ತವೆ. ಆ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶಗಳ ಜೊತೆಗೆ ವೇಗವಾದ ಚೇತರಿಕೆಯೂ ಸಾಧ್ಯವಾಗುತ್ತದೆ.
ಈ ರೋಬೋಟಿಕ್ ತಂತ್ರಜ್ಞಾನಗಳ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಯ ಅಧ್ಯಕ್ಷರಾದ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯ ಆಡಳಿತಾಧಿಕಾರಿಗಳು ಹಾಗೂ ವೈದ್ಯಕೀಯ ತಜ್ಞರು ಉಪಸ್ಥಿತರಿದ್ದರು.
ಆರ್ಒಎಸ್ಎ ರೋಬೋಟಿಕ್ ವಿಧಾನದ ಮೂಲಕ ಪರಿಚಯಿಸಲಾದ ಮಹತ್ವದ ಹೊಸ ತಂತ್ರಜ್ಞಾನವೆAದರೆ `ಫ್ರೇಮ್ಲೆಸ್ ಬ್ರೇನ್ ಸರ್ಜರಿ. ಇದು ಭಾರತದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನೇ ಬದಲಾಯಿಸುತ್ತಿದೆ. ಹಿಂದೆ, ಮೆದುಳಿಗೆ ಸಂಬAಧಿಸಿದ ಅನೇಕ ಶಸ್ತ್ರಚಿಕಿತ್ಸೆಗಳಲ್ಲಿ ಮಾರ್ಗದರ್ಶನಕ್ಕಾಗಿ ರೋಗಿಯ ತಲೆಗೆ ಗಟ್ಟಿಯಾದ ಫ್ರೇಮ್ ಅಳವಡಿಸಬೇಕಾಗುತ್ತಿತ್ತು. ಈಗ ಆರ್ಒಎಸ್ಎ ವ್ಯವಸ್ಥೆಯ ಫ್ರೇಮ್ಲೆಸ್ ರೋಬೋಟಿಕ್ ತಂತ್ರಜ್ಞಾನದಿAದ, ವೈದ್ಯರು ಯಾವುದೇ ತೊಂದರೆ ಅಥವಾ ಹೆಚ್ಚುವರಿ ನೋವು ಉಂಟಾಗದAತೆ ಅತ್ಯಂತ ನಿಖರತೆಯಿಂದ ಶಸ್ತ್ರಚಿಕಿತ್ಸೆ ನಡೆಸಬಹುದು.
ಈ ತಂತ್ರಜ್ಞಾನವು, ಕಡಿಮೆ ಹಸ್ತಕ್ಷೇಪದ ಮೆದುಳಿನ ಶಸ್ತ್ರಚಿಕಿತ್ಸೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಇದರಿಂದ ರೋಗಿಗಳಿಗೆ ಹೆಚ್ಚಿನ ಆರಾಮ,ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ನಿಖರತೆ, ಕಾರ್ಯಕ್ಷಮತೆ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶಗಳು ದೊರೆಯುತ್ತವೆ. ಆರ್ಒಎಸ್ಎ ವ್ಯವಸ್ಥೆಯು ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆ, ಎಪಿಲೆಪ್ಸಿ ಚಿಕಿತ್ಸೆ, ಸ್ಟೀರಿಯೋಟಾಕ್ಟಿಕ್ ನ್ಯೂರೋ ಶಸ್ತ್ರಚಿಕಿತ್ಸೆ ಹಾಗೂ ಚಲನೆ ಸಂಬಂಧಿತ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುತ್ತದೆ. ಜೊತೆಗೆ, ಮೆದುಳಿನ ಪ್ರಮುಖ ಕಾರ್ಯಗಳನ್ನು ಸುರಕ್ಷಿತವಾಗಿಡಲು ಕೂಡ ಸಹಕಾರಿಯಾಗುತ್ತದೆ.
ಮಝೋರ್ ಎಕ್ಸ್ ರೋಬೋಟಿಕ್ ಗೈಡೆನ್ಸ್ ವ್ಯವಸ್ಥೆಯನ್ನು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಇದು ವೈದ್ಯರಿಗೆ ಸ್ಪೈನ್ಲ್ ಇಂಪ್ಲಾಂಟ್ಗಳನ್ನು ಅತ್ಯಂತ ನಿಖರವಾಗಿ ಯೋಜಿಸಿ ಅಳವಡಿಸಲು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನ,ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸಿ, ಮಾನವ ಸಹಜ ತಪ್ಪುಗಳು ಮತ್ತು ಕಿರಣೋತ್ಪತ್ತಿಯ (ರೇಡಿಯೇಷನ್) ಪರಿಣಾಮವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಕಡಿಮೆ ಹಸ್ತಕ್ಷೇಪದ ಶಸ್ತ್ರಚಿಕಿತ್ಸೆ ಇದರಿಂ ಸಾಧ್ಯವಾಗುವುದರಿಂದ ರೋಗಿಗಳಿಗೆ ಸಣ್ಣ ಗಾಯಗಳು, ಕಡಿಮೆ ರಕ್ತಸ್ರಾವ, ಕಡಿಮೆ ದಿನಗಳ ಆಸ್ಪತ್ರೆ ವಾಸ ಹಾಗೂ ವೇಗವಾದ ಚೇತರಿಕೆ ಸಾಧ್ಯವಾಗುತ್ತದೆ.
ಕರ್ನಾಟಕದ ಆಸ್ಟರ್ ಸಿಎಂಐ ಆಸ್ಪತ್ರೆಯ ಆಸ್ಟರ್ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ನ್ಯೂರೋಸೈನ್ಸ್ ವಿಭಾಗದ ನಿರ್ದೇಶಕರು ಹಾಗೂ ನ್ಯೂರೋಸರ್ಜರಿ ವಿಭಾಗದ ಮುಖ್ಯ ಸಲಹೆಗಾರರಾದ ಡಾ. ರವಿ ಗೋಪಾಲ್ ವರ್ಮಾ, `ಮಝೋರ್ ಎಕ್ಸ್ ಮತ್ತು ಆರ್ಒಎಸ್ಎ ರೋಬೋಟಿಕ್ ತಂತ್ರಜ್ಞಾನಗಳ ಪರಿಚಯವು ಭಾರತದಲ್ಲಿ ನರವಿಜ್ಞಾನ ಚಿಕಿತ್ಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆರ್ಒಎಸ್ಎ ವ್ಯವಸ್ಥೆಯ ಫ್ರೇಮ್ಲೆಸ್ ತಂತ್ರಜ್ಞಾನವು ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರ, ಕಡಿಮೆ ಹಸ್ತಕ್ಷೇಪದ ಹಾಗೂ ರೋಗಿಗಳಿಗೆ ಹೆಚ್ಚು ಆರಾಮದಾಯಕವಾಗಿಸುವ ಮೂಲಕ ಹೊಸ ಬದಲಾವಣೆಯನ್ನು ತಂದಿದೆ. ಈ ತಂತ್ರಜ್ಞಾನಗಳು ಅತ್ಯಂತ ಸಂಕೀರ್ಣವಾದ ಮೆದುಳು ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ನಿಖರತೆಯಿಂದ ನಡೆಸಲು ವೈದ್ಯರಿಗೆ ಸಹಾಯ ಮಾಡುತ್ತವೆ ಎಂದು ಹೇಳಿದರು.
ಆಸ್ಟರ್ ಸಿಎಂಐ ಆಸ್ಪತ್ರೆಯ ನ್ಯೂರೋಸರ್ಜರಿ ಮತ್ತು ಸ್ಪೈನ್ ಸರ್ಜರಿ ವಿಭಾಗದ ಸಲಹೆಗಾರರಾದ ಡಾ. ಅಕ್ಷಯ್ ಹರಿ ಮಾತನಾಡಿ, `ಮಝೋರ್ ಎಕ್ಸ್ ಸಹಾಯಿತ ರೋಬೋಟಿಕ್ ಸ್ಪೈನ್ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಶಸ್ತ್ರಚಿಕಿತ್ಸೆಗೆ ಮುನ್ನವೇ ವಿವರವಾದ ಯೋಜನೆ ರೂಪಿಸಿ, ಇಂಪ್ಲಾಂಟ್ಗಳನ್ನು ಅತ್ಯಂತ ನಿಖರವಾಗಿ ಅಳವಡಿಸಬಹುದು. ಇದು ಸಂಕೀರ್ಣ ಮೆದುಳಿನ ಶಸ್ತ್ರಚಿಕಿತ್ಸೆಗಳಲ್ಲಿ ಬಹಳ ಮುಖ್ಯವಾಗಿದೆ. ಹೆಚ್ಚಿನ ನಿಖರತೆ ಮತ್ತು ಅಂಗಾಂಶಗಳ ಹಾನಿ ಕಡಿಮೆಯಾಗುವುದರಿಂದ, ರೋಗಿಗಳು ಬೇಗ ಚೇತರಿಸಿಕೊಳ್ಳಬಹುದು, ಕಡಿಮೆ ನೋವು ಅನುಭವಿಸಬಹುದು ಹಾಗೂ ದೀರ್ಘಕಾಲಿಕ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು’ ಎಂದರು.
ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಕರ್ನಾಟಕದ ಆಸ್ಟರ್ ಆಸ್ಪತ್ರೆಗಳ ಸಿಇಒ ಡಾ. ಪ್ರಶಾಂತ್ ಎನ್, `ರೋಗಿಗಳ ಚಿಕಿತ್ಸೆಯನ್ನು ಮತ್ತಷ್ಟು ಉತ್ತಮಗೊಳಿಸಲು ಆಸ್ಟರ್ ಸಂಸ್ಥೆ ಸದಾ ಆಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದೆ. ಮಝೋರ್ ಎಕ್ಸ್ ಮತ್ತು ಆರ್ಒಎಸ್ಎ ರೋಬೋಟಿಕ್ ವ್ಯವಸ್ಥೆಗಳ ಸೇರ್ಪಡೆಯಿಂದ ನಮ್ಮ ನರವಿಜ್ಞಾನ ವಿಭಾಗದ ಕಾರ್ಯ ಇನ್ನಷ್ಟು ಬಲವಾಗಿದೆ ಹಾಗೂ ಭಾರತ ಮತ್ತು ವಿದೇಶಗಳಲ್ಲಿಯೂ ರೋಗಿಗಳಿಗೆ ವಿಶ್ವಮಟ್ಟದ ತಂತ್ರಜ್ಞಾನಾಧಾರಿತ ಆರೋಗ್ಯ ಸೇವೆಗಳನ್ನು ನೀಡುವ ನಮ್ಮ ಬದ್ಧತೆಯನ್ನು ಇದು ತೋರಿಸುತ್ತದೆ’ ಎಂದು ಹೇಳಿದರು.
ರೋಬೋಟಿಕ್ ಸಹಾಯಿತ ನರಶಸ್ತ್ರಚಿಕಿತ್ಸೆಯನ್ನು ಅಳವಡಿಸಿಕೊಂಡಿರುವ ಆಸ್ಟರ್ ಸಿಎಂಐ ಆಸ್ಪತ್ರೆ, ಪರಿಣತ ವೈದ್ಯರು ಮತ್ತು ಆಧುನಿಕ ತಂತ್ರಜ್ಞಾನವನ್ನು ಒಟ್ಟುಗೂಡಿಸಿ, ರೋಗಿಗಳಿಗೆ ಇನ್ನಷ್ಟು ಸುರಕ್ಷಿತ ಹಾಗೂ ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸೆ ಸೇವೆಯನ್ನು ನೀಡುವ ಮೂಲಕ ತನ್ನ ಅತ್ಯಾಧುನಿಕ ನರವಿಜ್ಞಾನ ಸೇವೆಗಳನ್ನು ಇನ್ನಷ್ಟು ವಿಸ್ತರಿಸುತ್ತಿದೆ.
`ನರವಿಜ್ಞಾನ ಚಿಕಿತ್ಸೆಯನ್ನು ಮುಂದಿನ ಪೀಳಿಗೆಯ ಸರ್ಜಿಕಲ್ ರೋಬೋಟಿಕ್ಸ್ ಬಳಸಿ’



