LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಅಕ್ಲೆ-ಮಲ್ಲೇನಹಳ್ಳಿ ಗ್ರಾಮಸ್ಥರ ಒಕ್ಕಲೆಬ್ಬಿಸುವ ಹುನ್ನಾರ ನಮ್ಮ ಹಳೆ ಗ್ರಾಮದ ಜಾಗ ನಮಗೆ ಬಿಟ್ಟುಕೊಡಿ ಗ್ರಾಮಸ್ಥರ ಮನವಿ | ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ್

ದೇವನಹಳ್ಳಿ : ದೇವನಹಳ್ಳಿ ತಾಲೂಕು ಅಣ್ಣೇಶ್ವರ ಗ್ರಾ.ಪಂ. ವ್ಯಾಪ್ತಿಯ ಅಕ್ಲೆಮಲ್ಲೇನಹಳ್ಳಿ ಗ್ರಾಮದಸುಮಾರು 50 ಕುಟುಂಬಗಳ ಜನರನ್ನು ಎಂ.ಎಸ್. ರಾಮಯ್ಯನವರ ಕುಟುಂಬಸ್ಥರು ತಮ್ಮ ಹಣ-ಅಧಿಕಾರ ಬಳಸಿ ಮೂಲ ಹಳ್ಳಿಯಿಂದ ಒಕ್ಕಲೆಬ್ಬಿಸಿ ಬಂಡೆಬಳಿ ಮನೆ ಕಟ್ಟಿಕೊಳ್ಳಿ ಎಂದು ತಿಳಿಸಿದ್ದು, ನಾವು ಬಂಡೆ ಪಕ್ಕದಲ್ಲಿದ್ದ ಗೋಮಾಳದಲ್ಲಿ ಮನೆಗಳನ್ನು ಕಟ್ಟಿ ವಾಸ ಮಾಡುತ್ತಿದ್ದೇವೆ, ಎಂದು ಗ್ರಾಮದ ಮುಖಂಡ ತಿಮ್ಮರಾಯಪ್ಪ ತಿಳಿಸಿದರು.

ಅವರು ಅಕ್ಲೆಮಲ್ಲೇನಹಳ್ಳಿ ಗ್ರಾಮದ ಮೂಲ ಜಾಗದ ಬಳಿ ತಮಗಾದ ಅನ್ಯಾಯದ ಬಗ್ಗೆ ತಿಳಿಸಿ ಮಾತನಾಡಿ ಸುಮಾರು ವರ್ಷಗಳಿಂದ ವಾಸವಾಗಿದ್ದ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿ ಸುತ್ತಲೂ ಇದ್ದ ಖರಾಬು ಜಾಗ ನುಂಗಲು ನಮ್ಮ ಗ್ರಾಮಕ್ಕೆ ನೀರು ಹರಿಸಿ ರಸ್ತೆ, ದೇವಾಲಯ ಸೇರಿದಂತೆ ಗ್ರಾಮದ ಕುರುಹುಗಳನ್ನು ನಾಶ ಮಾಡಿ ನಮ್ಮನ್ನು ಬಂಡೆಯ ಬಳಿ ಮನೆಗಳನ್ನು ನಿರ್ಮಿಸಿಕೊಳ್ಳಿ ಎಂದು ದರ್ಪದಿಂದ ನಮ್ಮನ್ನು ಒಕ್ಕಲೆಬ್ಬಿಸಿದರು ಎಂದು ತಿಳಿಸಿದರು.

ಎಸ್.ಟಿ ನಾಯಕ ಸಂಘದ ಮುಖಂಡ ನಾಗರಾಜು ಮಾತನಾಡಿ ಎಂ.ಆರ್.ಜಯರಾಮ್ ಶಾಸಕನಾದ ಮೇಲೆ ಉಳುಮೆ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ದೌರ್ಜನ್ಯ ನಡೆಸಿ 375 ಎಕರೆ ಗೋಮಾಳ ಜಾಗವಿದ್ದು ಅದನ್ನು ನುಂಗು ಸಂಚು ನಡೆಸಿ ನಾವು ಸಾಗುವಳಿ ಮಾಡಬೇಕೆಂದಿದ್ದ ಜಮೀನನ್ನು ಕಬಳಿಸಿದ್ದಲ್ಲದೆ, ನಾವು ವಾಸವಿದ್ದ ಮನೆಗಳಿಗೆ ನೀರು ಹಾಯಿಸಿ ಬೀಳುವಂತೆ ಮಾಡಿ ನಮ್ಮನ್ನು ಬಂಡೆಯ ಬಳಿ ಕಳುಹಿಸಿದರು, ನಂತರ ಇಲ್ಲಿದ್ದ ಬಾವಿ ಮುಚ್ಚಿಸಿ ಆಲದ ಮರಗಳನ್ನೆಲ್ಲಾ ಕಡಿಸಿ ನಮ್ಮ ಮೇಲೆ ಪೋಲೀಸ್ ಪ್ರಭಾವ ಬಳಿಸಿ ಬಂದಿಸಲು ಪ್ರಯತ್ನಿಸಿದರು,

ನಂತರ ನಾವು ಕೋರ್ಟ್‍ಗೆ ದಾವೆ ಹೂಡಿ ನಮ್ಮ ಪರವಾಗಿ ಕೋರ್ಟ್ ತೀರ್ಪು ಕೂಡ ನೀಡಿದೆ, ಇಲ್ಲಿ ಟಾಟ, ಬ್ರಿಗೇಡ್ ಕಂಪನಿಗಳಿಗೆ ಜಮೀನು ಪರಬಾರೆ ಮಾಡಲು ಬದಲಿ ನಿವೇಶನ ನೀಡಲು ಬಂದಿದ್ದಾರೆ, ಪಂಚಾಯ್ತಿಯಿಂದಲೂ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಪ್ರಯತ್ನಿಸಿದರು, ಆದರೂ ಗ್ರಾಮಸ್ಥರೆಲ್ಲಾ ಒಂದಾಗಿ ಯಾವುದೇ ಕಾರಣಕ್ಕೂ ಮೂಲ ನಿವಾಸಿಗಳಾದ ನಮ್ಮ ಜಮೀನನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರುಇದು ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ನೀಡಲಾಗಿದ್ದು ಇಂದು ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ್, ಇಓ ಶ್ರೀನಾಥ್‍ಗೌಡ, ಪಿಡಿಓ ಗಂಗರಾಜು, ಭೂಮಾಪನ ಇಲಾಖೆ ಪೋಲಿಸ್ ಇಲಾಖೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಮಯದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ ಗ್ರಾಮಸ್ಥರು ತಮ್ಮ ನಿವೇದನೆ ಸಲ್ಲಿಸಿದ್ದಾರೆ ಹಾಗೂ ಸ್ಥಳ ಪರಿಶೀಲನೆ ಮಾಡಲಾಗಿದೆ ಗ್ರಾಮಸ್ಥರು ತಮ್ಮ ತೊಂದರೆಯನ್ನು ನಮಗೆ ತಿಳಿಸಿ ನಾವು ಅದನ್ನು ಕಾನೂನು ರಿತ್ಯ ಸರಿಪಡಿಸಲಾಗುವುದು, ಸರ್ವೇ ಮಾಡಿ ನಿಮ್ಮ ಗ್ರಾಮದ ಜಮೀನನ್ನು ಮರಳಿಸಲಾಗುವುದು ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು