LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Davanagere

ಅಣಕು ಕಾರ್ಯಾಚರಣೆ: ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್‍ಗಳಿಂದ ಭಯದ ವಾತಾವರಣ

ದಾವಣಗೆರೆ: ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಸಿ ಅನುಮಾನಾಸ್ಪದವಾದ ಬ್ಯಾಗ್‍ನಲ್ಲಿ ಇದ್ದ ಮಾರಕ ವಸ್ತುಗಳನ್ನು ವಶಕ್ಕೆ ಪಡೆದು ನಿಷ್ಕ್ರಿಯೆಗೊಳಿಸಿದ ಬಗೆಯ ಪ್ರದರ್ಶನ ಮಾಡಲಾಗಿರುತ್ತದೆ.ಸೆ.18 ರಂದು ರಾತ್ರಿ 12 ಗಂಟೆಗೆ  ಆರ್‍ಪಿಎಫ್ ಮತ್ತು ಜಿಆರ್‍ಪಿ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ವಿಶ್ರಾಂತಿ ಕೊಠಡಿ ಹತ್ತಿರ ಅನುಮಾನಸ್ಪದವಾಗಿ ಇಟ್ಟಿದ್ದ ಬ್ಯಾಗ್‍ಗಳನ್ನು ನೋಡಿ, ಆರ್‍ಪಿಎಫ್ ಪೋಸ್ಟ್ ಕಮಾಂಡರ್ ಗೆ ತಿಳಿಸಲಾಗಿರುತ್ತದೆ.

ತಕ್ಷಣ ಆರ್‍ಪಿಎಫ್ ಪೋಸ್ಟ್ ಕಮಾಂಡರ್ ಬಿ.ಎನ್ ಕುಬೇರಪ್ಪ, ನಿರೀಕ್ಷಕರಾದ ಸಂತೋಷ್ ಪಾಟೀಲ್, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದು ಮತ್ತು ಬ್ಯಾಗ್‍ಗಳ ಸುತ್ತಲಿನ ಪ್ರದೇಶವನ್ನು  ಪ್ಲೋರೆಸೆಂಟ್ ಟೇಪ್‍ಗಳ ಮೂಲಕ ಸುತ್ತುವರೆದು, ಎಲ್ಲಾ ಪ್ರಯಾಣಿಕರನ್ನು  ಹತ್ತಿರದ ಪ್ರದೇಶದಿಂದ ತೆರವುಗೊಳಿಸಿ  ಬಂದೋಬಸ್ತ್ ಮೂಲಕ ಪ್ರಯಾಣಿಕರ ಚಲನೆಯನ್ನು ನಿಬರ್ಂಧಿಸುತ್ತಾರೆ.

ಆ ಹೊತ್ತಿಗೆ ಅಗ್ನಿಶಾಮಕ ಅಧಿಕಾರಿ ನಾಗೇಶ್ ಸ್ಥಳಕ್ಕೆ ಆಗಮಿಸಿ ವಿಧಿವಿಜ್ಞಾನ ಅಪರಾಧ ಅಧಿಕಾರಿಗಳು, ಸ್ಥಳೀಯ ಜಿಲ್ಲಾ ಪೊಲೀಸ್ ಶ್ವಾನದಳ ಮತ್ತು ವಿಧ್ವಂಸಕ ತಡೆ ತಪಾಸಣಾ ತಂಡ ಮತ್ತು ಆರ್‍ಪಿಎಫ್ ಡಾಗ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿ   ಎಆರ್‍ಎಸ್‍ಐ  ವೀರಭದ್ರಪ್ಪ ಮತ್ತು  ಪ್ರಕಾಶ್ ಡಾಗ್ ಸ್ಕ್ವಾಡ್ ತಂಡವು ಶ್ವಾನ “ದೃತಿ” ಮತ್ತು  ಶ್ವಾನ “ವಾರಿಯರ್”  ಸಹಾಯದಿಂದ ಬ್ಯಾಗ್‍ಗಳನ್ನು ಪರೀಕ್ಷಿಸಿ ಸ್ಫೋಟಕ ವಸ್ತುಗಳಿದ್ದ ಚೀಲವನ್ನು ಗುರುತಿಸಿ ಬ್ಯಾಗ್‍ನ್ನು ತೆರೆದಾಗ  ಒಂದು ಪಿಸ್ತೂಲ್ ಮತ್ತು  ಮದ್ದುಗುಂಡುಗಳು ಇರುವುದು ಕಂಡುಬರುತ್ತದೆ.

ನಂತರ ಅಪರಾಧ  ದೃಶ್ಯ ತನಿಖಾಧಿಕಾರಿಗಳಾದ   ದೇವರಾಜ್ ಮತ್ತು  ರಘುನಾಥ್ ಅವರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಪರಿಶೀಲನೆ ನಡೆಸಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿ ಬ್ಯಾಗ್‍ನಲ್ಲಿರುವ ವಸ್ತುಗಳ ಅಗತ್ಯ ಮಾದರಿಗಳನ್ನು ಎಸ್‍ಒಸಿ ಕಿಟ್ ಬಳಸಿ ಎಚ್ಚರಿಕೆಯಿಂದ ಸಂಗ್ರಹಿಸಿ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಬೇರ್ಪಡಿಸಿ ಆರ್‍ಪಿಎಫ್ ನಿರೀಕ್ಷಕರಿಗೆ ಹಸ್ತಾಂತರಿಸಿದರು.ಇದು ಅಣಕು ಪ್ರದರ್ಶನವಾಗಿದ್ದು ಸಾರ್ವಜನಿಕರು ಅನುಮಾನಾಸ್ಪದ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ ಮಾಹಿತಿ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಮಾಡಿರುವ ಕಾರ್ಯಾಚರಣೆ ಇದಾಗಿರುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು