LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅದ್ಧೂರಿಯಾಗಿ ಮುಗಿದ ಗ್ರ್ಯಾಂಡ್ ಫಿನಾಲೆ


`ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ  ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಜೀ ಕನ್ನಡದ ಜನಪ್ರಿಯ ಶೋ `ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಇದೀಗ ಅಂತಿಮ ಘಟ್ಟ ತಲುಪಿದ್ದು, ಅದ್ಧೂರಿ ಗ್ರ್ಯಾಂ ಡ್ ಫಿನಾಲೆ ಮುಗಿಸಿದೆ.`ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಿದ್ದಾರೆ. 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ   ಗ್ರ್ಯಾಂಡ್   ಫಿನಾಲೆ ನಡೆಯಿತು.
ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಪುಟ್ಟ ಪ್ರತಿಭೆಗಳನ್ನು ಪ್ರೋತ್ಸಾಹಿಸಿ  ಸ್ಪರ್ಧಿಗಳ ಅದ್ಭುತ ಧ್ವನಿ, ಮುಗ್ಧತೆ, ಆತ್ಮವಿಶ್ವಾಸ ಹಾಗೂ ಸಂಗೀತದ ಮೇಲಿನ ಆಸಕ್ತಿಯಿಂದ ಪ್ರೇಕ್ಷಕರ ಮನ ಗೆದ್ದಿದೆ. ಈ ಸುಂದರ ಪಯಣದಲ್ಲಿ ಪುಟ್ಟ ಗಾಯಕರಿಗೆ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮಾರ್ಗದರ್ಶನ ನೀಡಿದ್ದಾರೆ. ಮೊದಲ ಆಡಿಷನ್‌ನಿಂದ ಹಿಡಿದು ಅಂತಿಮ ಘಟ್ಟದವರೆಗೆ ಸ್ಪರ್ಧಿಗಳು ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಾ, ಅವರ ಮನ ಗೆಲ್ಲುತ್ತಾ ಬಂದಿದ್ದಾರೆ. ಬಹು ನಿರೀಕ್ಷಿತ ಗ್ರ್ಯಾಂ ಡ್ ಫಿನಾಲೆ ವೇದಿಕೆ ಸಾರ್ಥಕ ಆಗಿದೆ. ಅಶ್ಮಿತ್, ಅಚಿಂತ್ಯ, ಮಹನ್ಯಾ, ಹರುಷ್, ಜಯಲಕ್ಷ್ಮೀ ಮತ್ತು ಅವುö್ಯಕ್ತ್ ಅವರು ಚಾಂಪಿಯನ್ ಪಟ್ಟಕ್ಕಾಗಿ ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗಿದ್ದಾರೆ. ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ಆರು ಪ್ರತಿಭೆಗಳು, ಫಿನಾಲೆಯಲ್ಲಿ ಮತ್ತೊಮ್ಮೆ ವಿಶೇಷ ಪ್ರದರ್ಶನಗಳ ಮೂಲಕ ಮೋಡಿ ಮಾಡಿದರು. ಅದ್ಧೂರಿ ಪ್ರದರ್ಶನಗಳು, ಭಾವನಾತ್ಮಕ ಕ್ಷಣಗಳು, ವಿಶೇಷ ಸರ್‌ಪ್ರೈ ಸ್‌ಗಳು ಮತ್ತು ಸಂಭ್ರಮದಿಂದ ಕೂಡಿರುವ ಈ ಗ್ರ್ಯಾಂಡ್ ಫಿನಾಲೆ, ಸ್ಪರ್ಧಿಗಳ ಪಯಣಕ್ಕೆ ಅದ್ಧೂರಿ ಹಾಗೂ ಮರೆಯಲಾಗದ ಅಂತ್ಯವನ್ನುನೀಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST