LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಗೆಲುವು: ನಿರಾಸೆ ಮೂಡಿಸಿದ ರೋಹಿತ್ ಶರ್ಮಾ

ಬಲಗೈ ವೇಗಿ ಹರ್ಷಿತ್ ರಾಣಾ (44ಕ್ಕೆ 4) ಅವರ ಮಾರಕ ಬೌಲಿಂಗ್ ಬಳಿಕ ಯಶಸ್ವಿ ಜೈಸ್ವಾಲ್, ಶುಬ್‍ಮನ್ ಗಿಲ್, ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿಯತ ಬ್ಯಾಟಿಂಗ್ ಬಲದಿಂದ ಭಾರತ ತಂಡ ಇಲ್ಲಿ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಆಸ್ಪ್ರೇಲಿಯಾದ ಪ್ರಧಾನಮಂತ್ರಿ ಇಲೆವೆನ್ ತಂಡದ ವಿರುದ್ಧ 6 ವಿಕೆಟ್‍ಗಳ ಜಯ ದಾಖಲಿಸಿದೆ.

ಇದರೊಂದಿಗೆ ಡಿಸೆಂಬರ್ 6ರಂದು ಅಡಿಲೇಡ್‍ನಲ್ಲಿ ಆರಂಭವಾಗಲಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.ಮನುಕಾ ಓವಲ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಅಭ್ಯಾಸ ಪಂದ್ಯ ಆಯೋಜಿಸಲಾಗಿತ್ತು. ಆದರೆ ಮೊದಲ ದಿನವಾದ ಶನಿವಾರದ ಆಟ ಸಂಪೂರ್ಣ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಅಂತಿಮ ದಿನವಾದ ಭಾನುವಾರ 46 ಓವರ್‍ಗಳ ಪಂದ್ಯ ನಡೆಸಲಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಪ್ರಧಾನಮಂತ್ರಿ ಇಲೆವೆನ್, 43.2 ಓವರ್‍ಗಳಲ್ಲಿ 240 ರನ್‍ಗಳಿಗೆ ಸರ್ವಪತನ ಕಂಡಿತು. ಪಿಎಂ ಇಲೆವೆನ್ ಪರ ಆರಂಭಿಕ ದಾಂಡಿಗ, 19 ವರ್ಷದ ಸ್ಯಾಮ್ ಕಾನ್‍ಸ್ಟಾಸ್ ಕೇವಲ 97 ಎಸೆತಗಳಲ್ಲಿ 107 ರನ್ ಚಚ್ಚಿ ಗಮನ ಸೆಳೆದರು. ಆದರೆ ಅವರಿಗೆ ಜ್ಯಾಕ್ ಕ್ಲೇಟನ್ ಮತ್ತು ಹನ್ನೋ ಜಾಕೋಬ್ಸ್ ಹೊರತಾಗಿ ಬೇರೆ ಯಾವುದೇ ಬ್ಯಾಟರ್ ಬೆಂಬಲ ಸಿಗಲಿಲ್ಲ.

ಒಂದು ಹಂತದಲ್ಲಿ ಕಾನ್‍ಸ್ಟಾಸ್ ಮತ್ತು ಕ್ಲೇಟನ್ ನಡುವೆ ಮೂರನೇ ವಿಕೆಟ್‍ಗೆ ನೂರು ರನ್‍ಗಳ ಜತೆಯಾಟ ನಡೆದಿತ್ತು. ಇದನ್ನು ಬ್ರೇಕ್ ಮಾಡಿದ ವೇಗಿ ಹರ್ಷಿತ್ ರಾಣಾ, ಪಟಪಟನೆ ನಾಲ್ಕು ವಿಕೆಟ್‍ಗಳನ್ನು ಕಬಳಿಸಿದರು. ಇವರಿಗೆ ಒಂದು ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ ಜತೆಯಾದರು. ಕೊನೆಯಲ್ಲಿ ಜಾಕೋಬ್ಸ್ ಹೋರಾಟದೊಂದಿಗೆ ಪಿಎಂ ಇಲೆವೆನ್ 240 ರನ್ ಕಲೆಹಾಕಿತು.

240 ರನ್ ಗುರಿ ಬೆನ್ನಟ್ಟಿದ ಭಾರತ ತಂಡ 46 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ಪರ್ತ್ ಟೆಸ್ಟ್‍ನಲ್ಲಿ ಯಶಸ್ವಿಯಾಗಿದ್ದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ (45) ಮತ್ತು ಕೆ.ಎಲ್. ರಾಹುಲ್(27) ತಂಡಕ್ಕೆ ಉತ್ತಮ ಆರಂಭ ಕಲ್ಪಿಸಿದರು. ನಂತರ ಗಾಯದಿಂದ ಸಮಸ್ಯೆಯಿಂದ ಮೊದಲ ಟೆಸ್ಟ್‍ನಿಂದ ಹೊರಗುಳಿದಿದ್ದ ಶುಬ್‍ಮನ್ ಗಿಲ್(50) ಅರ್ಧ ಶತಕ ಗಳಿಸಿ ಗಮನ ಸೆಳೆದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ನಾಯಕ ರೋಹಿತ್ ಶರ್ಮ (3) ನಿರಾಸೆ ಮೂಡಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು