LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಆಧ್ಯಾತ್ಮಿಕತೆಯಿಂದ ಯಶಸ್ಸು ಗಳಿಸಲು ಗುರುಗಳ ಮಾರ್ಗದರ್ಶನ ಅಗತ್ಯ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ

ಹೊಸಕೋಟೆ: ಜನರು ಆದ್ಯಾತ್ಮಿಕತೆಯಿಂದ ಯಶಸ್ಸು ಗಳಿಸಲು ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಶ್ರೀಮದ್ ರಾಜಾಪುರ ಸಂಸ್ಥಾನದ ಮಠಾಧ್ಯಕ್ಷರಾದ ಡಾ: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರ ನಗರದ ವೀರಮ್ಮನವರ ಮಠದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಪ್ರಯುಕ್ತ ಮಹಾಶರಣೆ ವೀರಮ್ಮನವರ ಹಾಗೂ ಶರಣೆ ಕಾತ್ಯಾಯಿನಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರೊಂದಿಗೆ ಶಾಂತಿ, ನೆಮ್ಮದಿಯ ಜೀವನ ನಡೆಸಲು ಮಾರ್ಗದರ್ಶಕರಾಗಿ ಶ್ರಮಿಸಿದ ಮಹಾನ್ ಶರಣೆ ವೀರಮ್ಮನವರು ಇಂದಿಗೂ ನಗರದ ಬಹಳಷ್ಟು ಭಕ್ತಾಧಿಗಳ ಮನಸ್ಸಿನಲ್ಲಿ ಉಳಿದಿದ್ದು ಅವಿಸ್ಮರಣೀಯರಾಗಿದ್ದಾರೆ. ಇದೇ ರೀತಿ ಇವರ ಆದರ್ಶಗಳನ್ನೆ ಅಳವಡಿಸಿಕೊಂಡಿದ್ದ ಶರಣೆ ಕಾತ್ಯಾಯಿನಿ ಸಹ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊದಲ್ಲಿ ಇವರಿಗೆ ಗೌರವ ಸಲ್ಲಿಸಿದಂತಾಗಲಿದ್ದು ಆಚರಣೆಯು ಸಹ ಸಾರ್ಥಕಗೊಳ್ಳಲಿದೆ.

ಇಂದು ಯುವಕರಲ್ಲಿ ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆಯ ಹೆಚ್ಚಳ ಹಾಗೂ ಸಮೂಹ ಮಾಧ್ಯಮಗಳ ಅತಿಯಾದ ವ್ಯಾಮೋಹದಿಂದಾಗಿ ಸಂಸ್ಕøತಿಗೆ ತೀವ್ರವಾದ ಧಕ್ಕೆಯಾಗುತ್ತಿದೆ. ಇಷ್ಟೇ ಅಲ್ಲದೆ ಬಹಳಷ್ಟು ಮಹಿಳೆಯರು ಸಹ ಇಂದು ಮೊಬೈಲ್‍ನಲ್ಲಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸು ವುದರಲ್ಲಿ ಸಮಯ ವ್ಯರ್ಥ ಮಾಡುತ್ತಿರುವುದು ವಿಷಾದನೀಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಠ ಮಾನ್ಯಗಳು ಆಧ್ಯಾತ್ಮಿಕತೆಯನ್ನು ಉಳಿಸಿ ಬೆಳೆಸಲು ಪ್ರಥಮ ಅಧ್ಯತೆ ನೀಡಬೇಕಾದ್ದು ಅತ್ಯವಶ್ಯವಾಗಿದೆ ಎಂದರು.

ವೀರಮ್ಮನವರ ಮಠದ ಉಮಾ, ನಾಗೇಂದ್ರ,ತಾಲೂಕು ವೀರಶೈವ ಆಗಮಿಕರ ಸಂಘದ ಅಧ್ಯಕ್ಷ ನಟರಾಜಶಾಸ್ತ್ರಿ, ವಿಶ್ವನಾಥ ಶಾಸ್ತ್ರಿ, ರವಿಚಂದ್ರ ಶಾಸ್ತ್ರಿ, ಉದ್ಯಮಿ ಜೆ.ವಿ.ಜ್ಞಾನಮೂರ್ತಿ ಇನ್ನಿತರರು ಭಾಗವಹಿಸಿದ್ದರು. ಮಠಕ್ಕೆ ನೂರಾರು ಭಕ್ತಾಧಿಗಳು ಭೇಟಿ ನೀಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು