LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಆಸ್ಟೆಲಿಯಾ ಸರಣಿಗೆ ವೇಗಿ ಮೊಹಮ್ಮದ್ ಶಮಿ?

ನವದೆಹಲಿ: ರಣಜಿ ಟ್ರೋಫಿ ಮೂಲಕ ಕ್ರಿಕೆಟ್‌ಗೆ ಪುನರಾಗಮನ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪ್ರದರ್ಶನ, ಆಸ್ಟೆçÃಲಿಯಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಆಶಾಕಿರಣ ಮೂಡಿಸಿದೆ.
ಕಳೆದ ವರ್ಷದ ಕೊನೆಯಲ್ಲಿ ಸ್ವದೇಶದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಗಾಯಗೊಂಡಿದ್ದ ಶಮಿ ಅವರು ಇಂದೋರ್‌ನಲ್ಲಿ ರಣಜಿ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.
ಬಂಗಾಳ ತಂಡದ ಪರ ಆಡುತ್ತಿರುವ ಶಮಿ, ಮಧ್ಯಪ್ರದೇಶ ತಂಡದ ನಾಯಕ ಶುಭಂ ಶರ್ಮಾ, ಆಲ್‌ರೌಂಡರ್ ಸಾರಾಂಶ್ ಜೈನ್ ಅವರ ವಿಕೆಟ್ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದರು. ಇವರಲ್ಲಿ ಮೂವರು ಬೌಲ್ಡ್ ಆದರೆ, ಒಬ್ಬರು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಕ್ಯಾಚಿತ್ತರು. ನಾಲ್ಕು ಸ್ಪೆಲ್‌ಗಳಲ್ಲಿ ಒಟ್ಟು ೧೯ ಓವರ್ ಮಾಡಿದ ವೇಗಿ ೫೪ ರನ್ನಿಗೆ ೪ ವಿಕೆಟ್ ಪಡೆದರು.
ಭಾರತ ತಂಡದ ಆಯ್ಕೆಗಾರರು ಶಮಿ ಬೌಲಿಂಗ್ ಮೇಲೆ ಕಣ್ಣಿಟ್ಟಿದ್ದು, ಎರಡನೇ ಇನಿಂಗ್ಸ್ನಲ್ಲಿ ಅವರ ದೇಹ ಹೇಗೆ ಸ್ಪಂದಿಸುತ್ತದೆ ಎಂಬುದನ್ನೂ ಗಮನಿಸಲಿದ್ದಾರೆ. ರಣಜಿ ಪಂದ್ಯ ನವೆಂಬರ್ ೧೬ರಂದು ಮುಗಿಯಲಿದ್ದು, ಆ ಬಳಿಕವಷ್ಟೇ ಅವರು ಭಾರತ ತಂಡಕ್ಕೆ ಮರಳಿ ಸೇರುವರೇ ಎಂಬುದು ತೀರ್ಮಾನವಾಗಲಿದೆ.
ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದರೆ, ಅಸ್ಟೆçÃಲಿಯಾ ವಿರುದ್ಧ ಸರಣಿಯ ಎರಡನೆ ಟೆಸ್ಟ್ನಲ್ಲಿ ಜಸ್‌ಪ್ರೀತ್ ಬೂಮ್ರಾ ಜತೆ ದಾಳಿಗಿ ಳಿಯುವ ಸಾಧ್ಯತೆ ಯಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು