LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಎಚ್‍ಡಿಕೆ ತ್ಯಾಗ ಮಾಡಲಿ! ಚನ್ನಪಟ್ಟಣ ಟಿಕೆಟ್ ಬಗ್ಗೆ ಯತ್ನಾಳ್ ಅಭಿಪ್ರಾಯ

ಹುಬ್ಬಳ್ಳಿ: `ಜೆಡಿಎಸ್'ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಂದಿರೋದ್ರಿಂದ ನಮಗೆ ಲೋಕಸಭೆ ಯಲ್ಲಿ ಅನುಕೂಲ ಆಗಿದೆ. ಜೆಡಿಎಸ್‍ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ.

ಎರಡು ಕಡೆಯವರಿಗೂ ಲಾಭ ಆಗಿದೆ ಎಂದರು.ಶಿಗ್ಗಾಂವಿ ಟಿಕೆಟ್ ಬೊಮ್ಮಾಯಿ ಮಗನಿಗೆ ನೀಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಸವರಾಜ ಬೊಮ್ಮಾಯಿ ಅವರನ್ನು ಯಾಕೆ ಎಳೀತೀರಿ, ಅವರದ್ದೇನು ತಪ್ಪಿಲ್ಲ. ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಇದು ಪಾಲನೆ ಆಗಬೇಕು. ಬೊಮ್ಮಾಯಿ ಅವರನ್ನು ಯಾಕೆ ಬಲಿ ಪಶು ಮಾಡತ್ತೀರಿ? ಎಲ್ಲರಿಗೂ ಕೊಟ್ಟ ಮೇಲೆ ಅವರು ಮಗನಿಗೆ ಕೇಳಿದ್ದಾರೆ. ನಮ್ಮ ಪಕ್ಷದ ಹಿರಿಯರು ನಿರ್ಣಯ ಮಾಡತ್ತಾರೆ ಎಂದರು.

ಸಿ.ಪಿ.ಯೋಗೇಶ್ವರ್‍ಗೆ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ಉಪಚುನಾವಣೆ ಯಲ್ಲಿ ಟಿಕೆಟ್ ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಅನ್ನೋದು ಮುಖ್ಯ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ತಿಳಿಸಿದ್ದಾರೆ.
ಒಂದು ಕಪ್ಪು ಚುಕ್ಕೆ ಇಲ್ಲಾ ಸಿಎಂ ಎಂದಿದ್ದ ಸಿದ್ದರಾಮಯ್ಯ. ಮತ್ತೆ ಈಗ ಮುಡಾ ಹಗರಣ ಯಾಕೆ ಮಾಡಿದ್ರು? ಆವಾಗ್ಲೇ ಕೊಟ್ಟಿದ್ರೆ ಮುಗಿದು ಬಿಡ್ತಿತ್ತು. ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಟ್ಟು ಮುಕ್ತ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಗಂಗಾಜಲದಿಂದ ಬಿಜೆಪಿ ಕಚೇರಿಗಳ ಶುದ್ದಿಕರಣ ವಿಚಾರವಾಗಿ ಮಾತನಾಡಿ, ಯಾರಾದ್ರೂ ಕೃಷ್ಣ ಹುಟ್ಟುತ್ತಾರೆ, ಮಾಡ್ತಾರೆ. ಹಳೇ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರೋದು ದುರಂತ. ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ರು. ದೇಶದಲ್ಲಿ ಯಾವುದೇ ಪಕ್ಷ ಇದ್ರು ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಪೊಲೀಸರ ನೈತಿಕತೆ ಅಡಗಿ ಹೋಗುತ್ತದೆ ಎಂದರು.

ಕೆಜೆ ಹಳ್ಳಿ ಡಿಜೆ ಹಳ್ಳಿ ನಂತರ ಹುಬ್ಬಳ್ಳಿ ಗಲಭೆ ಬಹಳ ಗಂಭೀರವಾದದ್ದು ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ತೆಗೆದುಕೊಳ್ಳಬಾರದು.
ಹಾಗೇನಾದ್ರೂ ಮಾಡಿದ್ರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ. ಬಿಜೆಪಿ ಅವರು ಇದ್ದಾಗ ಅಮಾಯಕರ ಮೇಲೆ ಪ್ರಕರಣ ಹಾಕಿದ್ರು. ರೈತರನ್ನು ದನಕ್ಕೆ ಹೊಡೆದಂತೆ ಹೊಡೆದು, ದೇಶದ್ರೋಹಿಗಳನ್ನು ಗುಂಡು ಹಾರಿಸಿ ಕೊಲ್ಲಬೇಕು. ಮುಸ್ಲಿಂರ ತುಷ್ಟಿಕರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಹರಿಹಾಯ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು