LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಐರ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ ಮಹಿಳಾ ತಂಡ

ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್(89), ಮಧ್ಯಮ ಕ್ರಮಾಂಕದ ತೇಜಲ್ ಹಸಬ್ನಿಸ್(53) ಮತ್ತು ನಾಯಕಿ ಸ್ಮೃತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ಮಹಿಳೆಯರ ತಂಡ ಐರ್ಲೆಂಡ್ ತಂಡದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸ್ಮೃತಿ ಮಂದಾನ ಏಕದಿನ ಕ್ರಿಕೆಟ್ ನಲ್ಲಿ 4000 ರನ್ ಗಡಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಗೆಲ್ಲಲು 239 ರನ್ ಗಳ ಗುರಿ ಪಡೆದಿದ್ದ ಭಾರತ ತಂಡಕ್ಕೆ ಸ್ಮೃತಿ ಮಂದಾನ ಮತ್ತು ಪ್ರತೀಕಾ ರಾವಲ್ ಸ್ಫೋಟಕ ಆರಂಭ ನೀಡಿದರು. ಸ್ಮೃತಿ ಮಂದಾನ ಅವರು ಕೇವಲ 29 ಎಸೆತಗಳಲ್ಲಿ ವೇಗದ 41 ರನ್ ಗಳಿಸಿ ಔಟಾದರು.ಅವರು ಈ ಸಂದರ್ಭದಲ್ಲಿ ಏಕದಿನ ಕ್ರಿಕೆಟ್ ನಲ್ಲಿ 4000 ರನ್ ಪೂರೈಸಿದ ಎರಡನೇ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಮಹಿಳಾ ಕ್ರಿಕೆಟ್ ನ ದಂತಕತೆ ಮಿತಾಲಿ ರಾಜ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ. ಮಿತಾಲಿ ರಾಜ್ ಅವರು ಈ ಸಾಧನೆಗೆ 112 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರೆ, ಸ್ಮೃತಿ ಮಂದಾನ ಅವರು ಕೇವಲ 95 ಇನ್ನಿಂಗ್ಸ್ ಗಳಲ್ಲೇ ಈ ಗಡಿ ತಲುಪಿದರು.

ಇನ್ನು ಸ್ಮೃತಿ ಮಂದಾನ ಅವರು ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ 4000 ರನ್ ಗಡಿ ದಾಟಿದ ವಿಶ್ವದ 3ನೇ ಆಟಗಾರ್ತಿಯಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ 86 ಇನ್ನಿಂಗ್ಸ್ ಗಳಲ್ಲಿ ಮತ್ತು ಮೆಗ್ ಲ್ಯಾನಿಂಗ್ 87 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಸ್ಮೃತಿ ಮಂದಾನ ಅವರೊಂದಿಗೆ ಯುವ ಆಟಗಾರ್ತಿ ಪ್ರತೀಕಾ ರಾವಲ್ (89) ಅವರು ಮೊದಲ ವಿಕೆಟ್ ಗೆ 70 ರನ್ ಗಳ ಜೊತೆಯಾಟವಾಡಿದರು.

ಸ್ಮೃತಿ ಮಂದಾನ ಔಟಾದ ಬಳಿಕ ಹರ್ಲಿನ್ ಡಿಯೋಲ್ (20), ಜೆಮಿಮಾ ರೋಡ್ರಿಗಸ್(9) ಮತ್ತು ಜೇಜಲ್ ಹಸಬ್ನಿಸ್ (ಅಜೇಯ 53) ಅವರೊಂದಿಗೆ ವಿವಿಧ ಜೊತೆಯಾಟಗಳಲ್ಲಿ ಪಾಲ್ಗೊಂಡ ಪ್ರತೀಕಾ ತಂಡದ ಮೊತ್ತ 232 ಆಗಿದ್ದಾಗ ವಿಕೆಟ್ ಒಪ್ಪಿಸಿದರು. ಆದರೆ ಆಗಲೇ ಭಾರತ ತಂಡದ ಜಯ ಖಚಿತವಾಗಿತ್ತು. ನಾಯಕಿಯಾಟ ಆಡಿದ ಲೆವಿಲ್: ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್ ತಂಡದ ನಾಯಕಿ ಗ್ಯಾಬಿ ಲೆವಿಲ್ ಅವರ 92 ರನ್ ಗಳ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 238 ರನ್ ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು