LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟ ಪ್ರತಿಭಟನೆ

ದೇವನಹಳ್ಳಿ: ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟ ದಿಂದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮುಂಭಾಗ ದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ವೈಜ್ಞಾನಿಕ ದತ್ತಾಂಶಗಳ ಆಧಾರದಲ್ಲಿ ರಚಿತವಾಗಿ ರುವ ನ್ಯಾ. ಸದಾಶಿವ ಆಯೋಗದ ವರದಿಯನ್ನು ಆಧಾರ ವಾಗಿಟ್ಟುಕೊಂಡು ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಒಳಮೀಸಲಾತಿ “ಸರ್ವರಿಗೂ ಸಮಪಾಲು ಸಮಬಾಳು” ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಎಸಗುತ್ತಿದೆ. ಬಿಜೆಪಿಗರು ಸಹ ಒಳ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಡಾ. ಅಂಬೇ ಡ್ಕರ್ ರೂಪಿಸಿದ ಸಂವಿಧಾನವನ್ನೇ ಕಿತ್ತುಹಾಕಿ ಮನು ಶಾಸ್ತ್ರವನ್ನು ಅನುಷ್ಠಾನಕ್ಕೆ ತರುವ ಗುಪ್ತ ಗುರಿ ಹೊಂದಿ ರುವ ಇವರ ಒಳಮೀಸಲಾತಿ ಪ್ರೇಮವನ್ನು ಯಾರಾ ದರೂ ನಂಬಬಹುದೇ?. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅಂದರೆ ಸವರ್ಣೀಯರಿಗೆ 10% ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿರುವ ಮೋದಿ ಮಾಡುತ್ತಿರುವ ಮತಬೇಟೆ ಅಲ್ಲವೇ? ಇವರು ಬಾಯಿ ಮಾತಿನಲ್ಲೇ ಮೀಸಲಾತಿ ಪರವಾಗಿರುವುದು ರಹಸ್ಯವೇನಿಲ್ಲ. ಮೀಸಲಾತಿ ಪ್ರಶ್ನೆಯನ್ನು ಒಂದು ಏಣಿಯಾಗಿ ಬಳಸಲು ಬಿಜೆಪಿಗರು ನಿಪುಣರು.

ಚುನಾವಣೆ ಬಂದಾಗಲಷ್ಟೇ ಇವರಿಗೆ ಮೀಸಲಾತಿ, ಸದಾಶಿವ ಆಯೋಗದ ವರದಿ ನೆನಪಾಗುತ್ತದೆ. ನರೇಂದ್ರ ಮೋದಿಯ ವರು ದೇಶವನ್ನೇ ಕಾಪೆರ್Çರೇಟ್ ಕಂಪನಿಗಳಿಗೆ ಹಸ್ತಾಂತರಿ ಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇವರು ಸಂಚು ಹೂಡಿರುವಂತೆ ಖಾಸಗೀಕರಣದ ಅನುಷ್ಠಾನ ಯಶಸ್ವಿ ಯಾಗಿದೆ ಯಾವ ಮೀಸಲಾತಿಯೂ ಉಳಿಯುತ್ತದೆ. ಖಾಸಗಿ ಕೈಗಾರಿಕೆಗ ಳಲ್ಲಿ ಹಾಗೂ ಖಾಸಗೀಕರಣಗೊಂಡ ಸಾರ್ವ ಜನಿಕ ಉದ್ದಿಮೆಗಳಲ್ಲಿ ಮೀಸಲಾತಿಗೆ ಅವಕಾಶ ಇರಲಾರದು. ಆದ್ದರಿಂದ ಮೋದಿ ಸರ್ಕಾರದ ದಲಿತ ವಿರೋಧಿ ನಡೆಯ ವಿರುದ್ಧ, ಮೀಸಲಾತಿಯ ಉಳಿಯುವಿಕೆಗಾಗಿ ನಾವು ಎಲ್ಲರೂ ಒಂದಾಗಿ ಹೋರಾಡಬೇಕಾಗಿದೆ.

ನಮ್ಮ ನಡುವೆ ಭೇದಭಾವ, ಮತ್ಸರ ಇರಬಾರದು. ನಾವು ಸ್ಪೃಶ್ಯರು ಮತ್ತು ಅಸ್ಪೃಶ್ಯರು ಎಂಬ ಬೇಧವಿಲ್ಲದೆ ಒಂದಾಗಿ ಹೋರಾಡಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನಕಾರ್ಯ ದರ್ಶಿ ನಂದಿಗುಂದ ವೆಂಕಟೇಶ್ ಸರ್ಕಾರಗಳ ವಿರುದ್ದ ಕಿಡಿಕಾರಿದರು.ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷರ ಆದ ಪಿ. ಮಹದೇವ್, ಉಪಾಧ್ಯ ಕ್ಷರು ನಾಗರಾಜ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಕಾರ್ಯದರ್ಶಿ ಧ್ಯಾವಪ್ಪ, ಹರಳೂರು ನರಸಿಂಹಪ್ಪ, ಚಿಕ್ಕ ರಂಗಣ್ಣ,ಗೋವಿಂದರಾಜ್, ಮಹಿಳಾ ಘಟಕದ ಅಧ್ಯಕ್ಷೆ ರಾಮದೇವಿ,ಡಿ ಎಸ್ ಎಸ್ ಜಿಲ್ಲಾಧ್ಯಕ್ಷರು ರಾಮಮೂರ್ತಿ, ನೆಲಮಂಗಲ ತಾಲ್ಲೂಕು ಸಂಯೋಜಕ ಮರೇಗೌಡ,ಅಧ್ಯಕ್ಷರು ಶ್ರೀನಿವಾಸ್, ಉಪಾಧ್ಯಕ್ಷರು ಬಾಬು, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷರು ನಾಗರಾಜ್, ಪ್ರಧಾನಕಾರ್ಯದರ್ಶಿ ವೇಣು ಗೋಪಾಲ್, ವಿಜಯಪುರ ಹೋಬಳಿ ಉಸ್ತುವಾರಿ ಜಗದೀಶ್, ದೊಡ್ಡಬಳ್ಳಾಪುರ ಅಧ್ಯಕ್ಷ ನಂಜೇಶ್, ತೊಬಗೆರೆ ಮುಖಂಡರಾದ ರಂಗಪ್ಪ, ನಂಜುಂಡಪ್ಪ, ಮೈಲಾರಪ್ಪ, ನರಸಿಂಹಮೂರ್ತಿ, ಕೃಷ್ಣಪ್ಪ, ನಾಗರತ್ನಮ್ಮ ಮಾರಪ್ಪ ಮಹೇಂದ್ರ, ನರಸಮ್ಮ ಸೇರಿದಂತೆ ಇನ್ನೂ ಅನೇಕ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು