LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

`ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂಬ ಘೋಷವಾಕ್ಯದ 5 ಕಿ.ಮೀ ಮ್ಯಾರಥಾನ್

ದೊಡ್ಡಬಳ್ಳಾಪುರ: ನಗರದ ಶ್ರೀ ಭುವನೇಶ್ವರಿ ಕನ್ನಡ ಸಂಘದಿಂದ ದೊಡ್ಡಬಳ್ಳಾಪುರ ಅಥ್ಲೆಟಿಕ್ಸ್ ಸಂಸ್ಥೆ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 5 ಕಿ.ಮೀ ಮ್ಯಾರಥಾನ್ ಭಾನುವಾರ ನಡೆಯಿತು.ನಗರದ ಸಿದ್ದಲಿಂಗಯ್ಯ ವೃತ್ತದಿಂದ ಭಗತ್ ಕ್ರೀಡಾಂಗಣದವರೆಗೆ ನಡೆದ ಸ್ಪರ್ಧೆಯಲ್ಲಿ ನೂರಾರು ಮಂದಿ ಕನ್ನಡದ ಸಂದೇಶ ಸಾರುವ ಟೀ ಷರ್ಟ್‍ಗಳನ್ನು ಧರಿಸಿ, ಮ್ಯಾರಾಥಾನ್‍ನಲ್ಲಿ ಭಾಗವಹಿಸಿದ್ದರು.

ಮ್ಯಾರಾಥಾನ್‍ಗೆ ಚಾಲನೆ ನೀಡಿದ ಎನ್‍ಸಿಸಿ ಅಧಿಕಾರಿ ಮೇಜರ್ ಮಹಾಬಲೇಶ್ವರ್ ಮಾತನಾಡಿ, ಕನ್ನಡದ ಉಳಿವಿಗಾಗಿ ಇಂದು ಹೋರಾಟ ನಡೆಸುವ ಅನಿವಾರ್ಯತೆ ಬಂದೊದಗಿದೆ. ಅನ್ಯ ಭಾಷಿಕರು ಇಲ್ಲಿ ನೆಲಸಬೇಕಾದರೆ ಕನ್ನಡ ಕಲಿಯಲೇ ಬೇಕು. ಇಲ್ಲವಾದಲ್ಲಿ ನಿಮ್ಮನ್ನು ಹೊರದೂಡಬೇಕಾಗುತ್ತದೆ. ದೇಶದ ಭವಿಷ್ಯ ರೂಪಿಸುವ ಇಂದಿನ ಯುವ ಜನತೆ ದುಶ್ಚಟಗಳಿಗೆ ದಾಸರಾಗದೇ, ಕ್ರಿಯಾಶೀಲರಾಗಿರಬೇಕು.

ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ನೆಲ, ಜಲ ಸವಲತ್ತುಗಳನ್ನು ಪಡೆದು ಕನ್ನಡ ಭಾಷೆಯನ್ನು ಹಾಗೂ ಸ್ಥಳೀಯರಿಗೆ ಕೆಲಸ ನೀಡದೇ ಇರುವುದು ಅಕ್ಷಮ್ಯ. ಕನ್ನಡ ನಾಡು ನುಡಿಗಳ ಉಳಿವಿಗಾಗಿ ಇಂದಿನ ಜನತೆ ಕಟಬದ್ದರಾಗಬೇಕಿದೆ ಎಂದರು.

ನಗರಸಭೆ ಸದಸ್ಯ ಹಾಗೂ ಶ್ರೀಭುವನೇಶ್ವರಿ ಕನ್ನಡ ಸಂಘದ ಗೌರವ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಭುವನೇಶ್ವರಿ ಕನ್ನಡ ಸಂಘ ಹಲವಾರು ಕನ್ನಡಪರ ಹೋರಾಟಗಳನ್ನು ಮಾಡುತ್ತಾ ಬಂದಿದೆ. ಕನ್ನಡದ ಉಳಿವಿಗಾಗಿ, ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕ್ಕಾಗಿ, ಆಡಳಿತದಲ್ಲಿ ಕನ್ನಡ ಭಾಷೆಗಾಗಿ ಓಡೋಣ ಬನ್ನಿ ಎನ್ನುವ ಧೈಯದೊಂದಿಗೆ ಮ್ಯಾರಾಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು. ಇಲ್ಲಿನ ಜನರ ಬದುಕು ಹಸನಾಗಬೇಕಿದೆ ಎಂದರು.

ಸಮರೂಪ ಕಾರ್ಯಕ್ರಮ. ದೈಹಿಕ ಸದೃಢತೆಗೆ ಕ್ರೀಡೆಗಳು ಹೆಚ್ಚು ಸಹಕಾರಿಯಾಗಲಿದೆ. ಕನ್ನಡದ ವಿಚಾರಕ್ಕಾಗಿ ಮ್ಯಾರಥಾನ್ ನಡೆಯುತ್ತಿರುವುದು ಸಂತಸದ ವಿಚಾರ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಶ್ರಮಿಸುವ ಪಣ ತೊಡಬೇಕಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮರೂಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಕರ್ನಾಟಕವನ್ನು 1956ರಲ್ಲಿ ಏಕೀಕರಣಗೋಳಿಸಿ ಕನ್ನಡ ನಾಡುನುಡಿ ಉಳಿಯಲು ಹಲವಾರು ಕನ್ನಡ ಹೋರಾಟಗಾರರ ಶ್ರಮದ ಫಲವಾಗಿ ಕರ್ನಾಟಕ ರಾಜ್ಯೊತ್ಸವ ಆಚರಣೆಗೆ ಕಾರಣವಾಯಿತು.

ನಾಡಿನ ರಾಜಧಾನಿ ಬೆಂಗಳೂರಿನಲ್ಲಿ ದೇಶದ ಮೂಲೆ ಮೂಲೆಗಳಿಂದ ಹಾಗೂ ದೇಶ ವಿದೇಶಗಳಿಂದ ಬಂದ ಜನರು ಇಲ್ಲಿ ನೆಲೆಸಿದ್ದಾರೆ, ಇಂತಹ ಜನರಿಗೆ ಕನ್ನಡ ಕಲಿಕೆಯ ಬಗ್ಗೆ ಮನವರಿಕೆ ಮಾಡುವು ನಮ್ಮ ಕರ್ತವ್ಯ, ಕನ್ನಡ ಭಾಷೆಯನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸುವಂತೆ ಮಾಡುವ ಜವಾಬ್ದಾರಿ ಸಹ ನಮ್ಮದು. ಮ್ಯಾರಥಾನ್ ಓಟವು ದೇಹದ ದೃಢತೆ ಮತ್ತು ಕನ್ನಡ ಭಾಷೆಯ ಅರಿವಿನ ಸಂದೇಶ ರವಾನೆ ಮಾಡುವಂತಹ ಮಹತ್ಕಾರ್ಯವಾಗಿದೆ, ಇದು ನಗರಕ್ಕೆ ಮಾತ್ರವೇ ಸೀಮಿತವಾಗಬಾರದು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಭಾಗಗಳಲ್ಲಿ ನಡೆಯಬೇಕಿದೆ ಎಂದರು.

ಬಹುಮಾನ ವಿತರಣೆ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ವಿಜೇತರಾದವರಿಗೆ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ಪ್ರತ್ಯೇಕವಾಗಿ ಬಹುಮಾನ ನೀಡಲಾಯಿತು. ಮ್ಯಾರಥಾನ್‍ನ ಪುರುಷ ವಿಭಾಗದಲ್ಲಿ ಕ್ರಮವಾಗಿ ಎಚ್.ಎ.ದರ್ಶನ್, ನಂದನ್, ಕೆ.ವಿ.ದರ್ಶನ್, ಎ.ಎಂ.ನವೀನ್, ಕೆ.ಎಸ್.ಮನೋಜ್‍ಕುಮಾರ್, ವಿಕಾಸ್ ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಪ್ರಣತಿ, ಜಯಲಕ್ಷ್ಮೀ, ದಿವ್ಯ, ನೀತು, ರುಕ್ಸಾರ್ ಶರೀಫ್, ರಂಜಿಯಾ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಶ್ರೀಭುವನೇಶ್ವರಿ ಕನ್ನಡ ಸಂಘದಅಧ್ಯಕ್ಷ ಪಿ.ನವೀನ್, ನಗರಸಭೆ ಸದಸ್ಯ ಎಚ್.ಎಸ್. ಶಿವಶಂಕರ್, ವಿ.ಎಸ್.ರವಿಕುಮಾರ್ ಎಸ್.ಪದ್ಮನಾಭ್, ಬಂತಿವೆಂಕಟೇಶ್ ಕನ್ನಡ ಪಕ್ಷದ ಹಿರಿಯ ಮುಖಂಡರಾದ ಸಂಜೀವ್ ನಾಯಕ್, ಡಿ.ಪಿ.ಆಂಜನೇಯ, ಮುಖಂಡರಾದ ಕೆ.ಎಲ್.ಶಿವರಾಂ, ರಾಘವ್, ಕುಮಾರ್, ನಾಗರಾಜ್,ನಾರಾಯಣಪ್ಪ ದೊಡ್ಡಬಳ್ಳಾಪುರ ಅಥ್ಲೆಟಿಕ್ಸ್ ಸಂಸ್ಥೆ ಶ್ರೀನಿವಾಸ್ ಕನ್ನಡ ಜಾಗೃತ ಭವನದ ಅಧ್ಯಕ್ಷ ಕೆ, ವೆಂಕಟೇಶ್. ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್, ಮುಖಂಡರಾದ ಕೆ.ಪಿ ಜಗನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು