LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

"ಕನ್ನಡ ಸಾಹಿತ್ಯ ಲೋಕದ ಮುಡಿ ಸೇರಿದ ಸೇವಂತಿಗೆ"

"ಕನ್ನಡ ಸಾಹಿತ್ಯ ಲೋಕದ ಮುಡಿ ಸೇರಿದ ಸೇವಂತಿಗೆ"
"ಸೇವಂತಿಗೆ"ನನ್ನ ಪ್ರೀತಿಯ ಸಹೋದರಿ ಶ್ರೀಲತಾ ಭಾರ್ಗವ್ ರವರ ಚೊಚ್ಚಲ ಕವನ ಸಂಕಲನ..
ಈ ಕವನ ಸಂಕಲನ ಅಕ್ಟೋಬರ್ ೨೦ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯುಗಾದಿ" ಸ್ನೇಹ ಪರ್ವ" ಕಾರ್ಯಕ್ರಮದಲ್ಲಿ ಅದ್ದೂರಿಯಿಂದ ಬಿಡುಗಡೆಗೊಂಡಿದೆ. ಮೊದಲಿಗೆ ಈ ಕೃತಿಯ ಲೇಖಕಿಯಾದ ಶ್ರೀಲತಾ ಅಕ್ಕನವರಿಗೆ ನನ್ನ ಮನಪೂರ್ವಕವಾದ ಅಭಿನಂದನೆಗಳು.
ಈಕೆ ವೃತ್ತಿಯಲ್ಲಿ ಶಿಕ್ಷಕಿ.ಜೊತೆಗೆ ಕವಯಿತ್ರಿ, ನಿರೂಪಕಿ,ನೃತ್ಯ ಹೀಗೆ ಹಲವಾರು ಕಲೆಗಳನ್ನು ಕರಗತ ಮಾಡಿಕೊಂಡ ಬಹುಮುಖ ಪ್ರತಿಭೆಯಿವರು.
ಹಿರಿಯ ಕವಿ ಸಹೃದಯಿ ಹಾಗೂ ನನಗೆ ಬಹಳ ಆತ್ಮೀಯರೆ ಆದ ಶ್ರೀಯುತ ಪದ್ಮನಾಭ.ಡಿ ಸರ್ ರವರ ಮುನ್ನುಡಿ ಹಾಗೂ ನನ್ನ ಪ್ರೀತಿಯ ಅಣ್ಣ ಶ್ರೀ ಶ್ರೀನಾಗ್ ಪಿ.ಎಸ್ ರವರ ಚಂದದ ಸಾಲುಗಳು ಬೆನ್ನುಡಿಯಾಗಿ ಈ ಪುಸ್ತಕವನ್ನು ಆವರಿಸಿದೆ.ಹಾಗೆಯೇ ಹಲವಾರು ಕವಿಗಳ ಶುಭಹಾರೈಕೆಯಿದೆ.
"ಹಲವು ಪಕಳೆಗಳು ಸೇರಿ ಒಂದು ಸೇವಂತಿಗೆ ಹಲವು ಕವನಗಳು ಸೇರಿ ಒಂದು ಹೊತ್ತಿಗೆ" ವಾವ್ ...ಈಗಿನ ಟ್ರೆಂಡ್ ಪ್ರಕಾರ ಹೇಳೋದಾದರೆ ತುಂಬಾ ಕ್ಯಾಚಿ ಲೈನ್.ಶೀರ್ಷಿಕೆಗೆ ಹೋಲುವ ಹಾಗೂ ಇಡೀ ಪುಸ್ತಕದ ಸಾರವನ್ನು ಹಿಡಿದಿಟ್ಟುಕೊಂಡಿರುವ ಸಾಲುಗಳು..
ಸೇವಂತಿಗೆ ಸುಮಾರು ಎಪ್ಪತ್ತು ಕವನಗಳ ಹೊತ್ತಿಗೆ.ಇಡಗುಂಜಿ ಗಣಪನ ಸ್ಮರಣೆಯೊಂದಿಗೆ ಶುರು ಮಾಡಿ ,ಮನಸ್ಸು ಬದುಕು ,ಭಾಷೆ,ವ್ಯಕ್ತಿ ,ವ್ಯಕ್ತಿತ್ವ ಮೊದಲಾದ ವಿಚಾರಗಳನ್ನು ಒಳಗೊಂಡಿವೆ. ಬಹಳಷ್ಟು ಕವನಗಳು ನಿಸರ್ಗಕ್ಕೆ ನೆಲ ಜಲ ಹಾಗೂ ಸಂಬಂಧಪಟ್ಟವುಗಳಾಗಿವೆ.
ಇನ್ನೂ ಕವನಗಳ ಬಗ್ಗೆ ಹೇಳೋದಾದರೆ ಇವರ ಕವನಗಳು ಬಹಳ ಅರ್ಥಪೂರ್ಣವಾಗಿ ಕ್ರಮಬದ್ದವಾಗಿವೆ. ಹಾಗಯೇ ಹಲವು ಸುಂದರ ವಿಚಾರಗಳನ್ನು ಒಳಗೊಂಡ ಸರಳ ಸುಂದರ ಸಾಲುಗಳು ಒಮ್ಮೆ ಓದಿದರೆ ಮನದಾಳದಲ್ಲಿ ಹಾಗೆಯೇ ಉಳಿಯುತ್ತದೆ.
ಒಬ್ಬ ಬರಹಗಾರ ಬರೆಯುವಾಗ ಅವನು ಯಾವ ದೃಷ್ಟಿಕೋನದಿಂದ ವಿಚಾರಗಳನ್ನು ವಿವರಿಸುತ್ತಾನೆ ಎಂಬುದು ಬಹಳ ಮುಖ್ಯ.ಶ್ರೀಲತಾ ಅಕ್ಕನ ಕವನಗಳ ಸಾರ ಬಹಳ ಧನಾತ್ಮಕವಾದ ಯೋಚನೆಗಳನ್ನು ವಿವರಿಸುತ್ತದೆ.ಸಾಮಾನ್ಯವಾಗಿ ಮನುಷ್ಯ ಒಳ್ಳೆಯ ವಿಷಯಗಳಿಂದ ಕೆಟ್ಟ ವಿಚಾರಗಳಿಗೆ ಬಹಳ ಬೇಗ ಆಕರ್ಷಿತನಾಗುತ್ತಾನೆ.ಆದರೆ ಯಾರು ಕೆಡುಕಲ್ಲೂ ಒಳ್ಳೆಯ ವಿಚಾರಗಳನ್ನ ಹುಡುಕಿ ಅದನ್ನು ಬದುಕಿಗೆ ಆರಿಸಿಕೊಳ್ಳುವರೋ ಅವರು ಸಂಸ್ಕಾರಿಗಳಾಗುತ್ತಾರೆ.ಈ ತರ ಒಬ್ಬ ವ್ಯಕ್ತಿಯು ಇರಬೇಕೆಂದರೆ ಅವರಿಗೆ ಪ್ರತಿ ವಿಚಾರಗಳ ಆಳ ಅರಿಯುವ ತಾಳ್ಮೆ ಬಹಳ ಮುಖ್ಯ.ಈ ವೇಗದ ಪ್ರಪಂಚದಲ್ಲಿ ಬರಿ ಅಸಹನೆ ಕೋಪ,ಮತ್ಸರದಿಂದ ಮೆರೆಯುವವರ ನಡುವೆ ಇಂತಹ ಒಂದು ವ್ಯಕ್ತಿತ್ವ ನೋಡೋದಕ್ಕೆ ಬಹಳ ಖುಷಿಯಾಗುತ್ತದೆ.ಹಾಗೆಯೇ ಅವರ ಸುಸಂಸ್ಕöÈತ ವ್ಯಕ್ತಿತ್ವದ ಸಾರ ಅವರ ಕವನಗಳಲ್ಲೂ ನಾವು ನೋಡಬಹುದು.ಇರುವೆಯ ದಾರಿ ಎಂಬ ಕವನದಲ್ಲಿ ಶ್ರದ್ದೆ ಸಮರ್ಪಣೆ ಶ್ರಮಕ್ಕೆ ಹೆಸರೀ ಜೀವಿ ಇರುವೆಯ ದಾರಿ ಸವೆಸುವಕೆಯಲ್ಲಿದೆ ಠೀವಿದರ್ಪವಲ್ಲ ,ಛಲದಿ ಬದುಕುವ ಅನುಭವಿ ಕಾರ್ಯಕ್ಷಮತೆಯಿಂದಾಗಿದೆ ಚಿರಂಜೀವಿ
ಇರುವೆಯ ಬದುಕಿನ ಸಾರವನ್ನು ಅಳೆದು ತೂಗಿ ಈ ಕವನದಲ್ಲಿ ವಿವರಿಸಿದ್ದಾರೆ.ಈ ಕವನದ ಇನ್ನುಳಿದ ಸಾಲುಗಳು ಬಹಳ ಸುಂದರವಾಗಿದೆ.ಇನ್ನೂದು ಕವನ ಹತ್ತಿಯ ಚರಿತ್ರೆಯು ಬಹಳ ಸೊಗಸಾಗಿದೆ.
ನೇಕಾರ ಜೋಡಿಸಿದ ನೂಲು ಚಂದದಿ ಕುಣಿಯಿತು ಮಗ್ಗದ ಕೋಲುಹತ್ತಿ ತಂದಿತು ಹರ್ಷದ ಹೊನಲುಕೇವಲ ಮೂರೆ ಸಾಲುಗಳಲ್ಲಿ ನೂಲು ಬಟ್ಟೆಯಾಗೋದನ್ನು ಸರಳವಾಗಿ ಚಂದವಾಗಿ ವಿವರಿಸಿದ್ದಾರೆ.
ಸತತವಾಗಿದ್ದರೂ ಹಾಲಿನ ಅಸ್ತಿತ್ವದಲ್ಲೂ ಬದಲುಮಾಡಲು ಸಾಧ್ಯವಿಲ್ಲ ರುಚಿಯನ್ನು ನಕಲುಹಂತ ಹಂತವಾಗಿ ಹೇಳುತಿದೆ ಭದ್ರತೆ ರೂಪಿಸಲುಅನುಸರಿಸಬೇಕು ಹಾಲಿನ ಪಥವನ್ನು ಬದುಕಲು ಹಾಲು ಒಡೆದು ಹೋದಾಗ ಅದನ್ನು ಕಸಕ್ಕೆ ಸುರಿಯುವ ಬದಲು ಅದರಲ್ಲೂ ವಿವಿಧ ರುಚಿಯಾದ ತಿನಿಸುಗಳನ್ನು ಮಾಡಿ ಬಡಿಬಹುದು.ಇದು ಹಾಲಿನ ವಿಶೇಷತೆ.ಹಾಗೆ ನಾವು ಬದುಕಬೇಕು ಎಂಬುದನ್ನು ಕವನದ ಮೂಲಕ ಬಹಳ ಸುಂದರವಾಗಿ ವಿವರಿಸಿದ್ದಾರೆ.ಇನ್ನೂ ನಿಸರ್ಗದ ಬಗೆಗಿನ ಸಾಲುಗಳು ಬಹಳ ರಸವತ್ತಾಗಿದೆ.
ಹೀಗೆ ಹೇಳುತ್ತಾ ಹೋದರೆ ಎಪ್ಪತ್ತು ಕವನಗಳ ಎಲ್ಲ ಸಾಲುಗಳು ಬಹಳ ಸುಂದರವಾಗಿವೆ.ಇದು ಅವರ ಚೊಚ್ಚಲ ಕವನ ಸಂಕಲನ. ಹಾಗಂತ ಎಲ್ಲೂ ಸುಳಿವು ನೀಡದಷ್ಟು ಅಚ್ಚುಕಟ್ಟಾಗಿ ತಮ್ಮ ಬರಹಗಳನ್ನು ಮಾಗಿಸಿ ಈ ಕವನ ಸಂಕಲನವನ್ನು ಸಿದ್ದಪಡಿಸಿದ್ದಾರೆ ಕವಯಿತ್ರಿಯವರು.ಕವಯಿತ್ರಿ ಹಾಗೂ ಇವರ ಕವನಗಳು ಇಬ್ಬರೂ ನನಗೆ ಬಹಳ ಆತ್ಮೀಯರು.ಹಾಗಂತ ಈ ಪುಸ್ತಕವನ್ನು ನಾನು ಅತಿಶಯವಾಗಿ ವರ್ಣಿಸಿಲ್ಲ.ಈ ಪುಸ್ತಕ ಬಹಳ ಸುಂದರ ಹಾಗೂ ಅರ್ಥಪೂರ್ಣವಾದ ಕವನಗಳ ಸಂಕಲನ. ಹಾಗಾಗಿ ಈ ಕವನ ಸಂಕಲನವನ್ನು ಕೊಂಡುಕೊಂಡು ಓದಿ ಎಂದು ನಿಮ್ಮೊಡನೆ ವಿನಂತಿಸಿಕೊಳ್ಳಲು ನನಗ್ಯಾವ ಸಂಕೋಚವೂ ಇಲ್ಲ.
ಅಕ್ಷರಗಳ ರೂಪದಲ್ಲಿ ಘಮಿಸುವ ಸೇವಂತಿಗೆಯನ್ನು ಹರಸಿ ಹಾರೈಸಿ ಗೆಲ್ಲಿಸಿ ಎಂದು ಕೇಳಿಕೊಂಡು ಮನದಾಳದಿಂದ ಶುಭ ಹಾರೈಸುವ ಪ್ರಶ್ನಾ ನಾರಾಯಣ ರೈ
ಉದಯೋನ್ಮಖ ಕವಯತ್ರಿ.
ಪುಸ್ತಕ ಸಂಪರ್ಕ: ಶ್ರೀಮತಿ ಶ್ರೀಲತಾ ಭಾರ್ಗವ್

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು