LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಗಂಗಾಧರಪ್ಪ ಆಯ್ಕೆ

ದೇವನಹಳ್ಳಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಪಿ.ಗಂಗಾಧರಪ್ಪ 49 ಮತಗಳನ್ನು ಪಡೆದು ವಿಜೇತರಾದರೆ ಪರಾಭವಗೊಂಡ ದಿಲೀಪ್‍ಕುಮಾರ್ 12 ಮತಗಳನ್ನು ಪಡೆದರು, ಜಿಲ್ಲಾ ಖಜಾಂಚಿಯಾಗಿ ಉಮಾಶಂಕರ್ ಎಂ. 53 ಮತ ಪಡೆದು ವಿಜೇತರಾದರೆ ಪರಾಭವ ಅಭ್ಯರ್ಥಿ ಶಿವಣ್ಣ 8ಮತಗಳನ್ನು ಪಡೆದರು ರಾಜ್ಯಪರಿಷತ್ ಸದಸ್ಯರಾಗಿ ನಾರಾಯಣಗೌಡ 50 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಪರಾಭವ ಅಭ್ಯರ್ಥಿ ಹರ್ಷ 11 ಮತಗಳನ್ನು ಪಡೆದಿದ್ದಾರೆ ಎಂದು ಎಂದು ಚುನಾವಣಾ ಅಧಿಕಾರಿ ರಾಜು ಸಭಾಸ್ಟಿಯನ್ ಘೋಷಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಗಂಗಾಧರ್.ಪಿ ಮಾತನಾಡಿ ಎಲ್ಲಾ ಇಲಾಖೆಯ ನಿರ್ದೇಶಕರ ಸಹಕಾರದಿಂದ ಈ ಅಭೂತಪೂರ್ವ ಗೆಲವು ಸಾಧಿಸಲು ಸಾಧ್ಯವಾಯಿತು, ನಮ್ಮ ಸರ್ಕಾರಿ ನೌಕರರ ಹಿತ ಕಾಪಾಡಲು ಮತ್ತು ಆಶೋತ್ತರಗಳನ್ನು ಈಡೇರಿಸಲು ಸದಾ ಸಿದ್ಧ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಎಚ್.ಆರ್.ಎ ಮತ್ತು ಸಿ.ಸಿ ಗ್ರಾಮಾಂತರ ಜಿಲ್ಲೆಗೂ ವಿಸ್ತರಿಸಬೇಕು, ಓಪಿಎಸ್ ಮರುಸ್ಥಾಪನೆ, ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು, ಸೇರಿದಂತೆ ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿ ಮಾಡಲು ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಇಲಾಖೆಯ ನಿರ್ದೇಶಕರುಗಳು ಎಷ್ಟೇ ಅಡೆತಡೆ ಬಂದರೂ ಹಗಲು ರಾತ್ರಿನನ್ನೂಂದಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಗಳು ಹಾಗೂ ಈ ಗೆಲುವನ್ನು ನಮ್ಮ ಎಲ್ಲಾ ಸರ್ಕಾರಿ ನೌಕರರಿಗೆ ಅರ್ಪಿಸುತ್ತೇನೆ ಎಂದರು.ದೇವನಹಳ್ಳಿ ತಹಸೀಲ್ದಾರ್ ಹೆಚ್. ಬಾಲಕೃಷ್ಣ ಮಾತನಾಡಿ ನೂತನವಾಗಿ ಅಧ್ಯಕ್ಷರಾಗಿ ಪಿ.ಗಂಗಾಧರ್, ಖಜಾಂಚಿಯಾಗಿ ಆಯ್ಕೆಯಾಗಿರುವ ಉಮಾಶಂಕರ್, ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾದ ನಾರಾಯಣಗೌಡರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ, ಸಂಘದ ಶ್ರೇಯೋಭಿವೃದ್ಧಿಗೆ ತಮ್ಮ ಅಧಿಕಾರವನ್ನು ಬಳಸಿ, ಸರ್ಕಾರಿ ನೌಕರರ ಒಳಿತಿಗಾಗಿ ಸಮುದಾಯ ಭವನವನ್ನು ನಿರ್ಮಿಸಿ ನಾನು ಯಾವುದೇ ಸಹಕಾರವಿದ್ದರೂ ಮಾಡಲು ಸಿದ್ದ, ನೌಕರರ ಹಿತಾಸಕ್ತಿಯೇ ನನ್ನ ಮೂಲ ಮಂತ್ರ ಎಂದರು.

ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ತಹಸೀಲ್ದಾರ್ ಎಚ್ .ಬಾಲಕೃಷ್ಣ, ನಿವೃತ್ತ ತಹಸೀಲ್ದಾರ್ ವಿಜಯ್‍ಕುಮಾರ್, ನೂತನ ಜಿಲ್ಲಾ ನಿರ್ದೇಶಕರಾದ ಆದರ್ಶ್, ನಾಗೇಶ್, ಮಂಜುನಾಥ್, ಶಾರದಾ ಗಂಗಾಧರಪ್ಪ, ಪುರಸಭಾ ಸದಸ್ಯ ಮುನಿಕೃಷ್ಣ, ಪುರಸಭಾ ಮಾಜಿ ಸದಸ್ಯ ಜಯರಾಮ್, ಎಸ್.ಆರ್. ರವಿಕುಮಾರ್, ಮುನಿರಾಜು, ಬಸ್. ರಾಜು, ಗೋಪಾಲ್, ಉಪ ತಹಸೀಲ್ದಾರ್, ಚೈತ್ರಾ, ರಾಜಸ್ವ ನಿರೀಕ್ಷಕ ಹನುಮಂತರಾಯಪ್ಪ, ಸುದೀಪ್, ಸಂತೋಷ್, ಅಬಕಾರಿ ಸುನೀಲ್, ಮಣಿ, ಗೀತಾ, ದಿಲೀಪ್ ಕುಮಾರ್, ಚೇತನ್, ನಿವೃತ್ತ ಶಿಕ್ಷಕ ಶ್ರೀರಾಮಯ್ಯ, ಸೊಸೈಟಿ ಕುಮಾರ್, ಮುತ್ತುರಾಜ್, ಸೇರಿದಂತೆ ಹಲವಾರು ನಾಮನಿರ್ದೇಶಕರು ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು