LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಕಳವು ಆರೋಪಿಗಳ ಸೆರೆ ಬೆಲೆ ಬಾಳುವ ಚಿನ್ನಾಭರಣ, ವಾಹನ, ಮೊಬೈಲ್ ವಶ

ಬೆಂಗಳೂರು: ಪೀಣ್ಯ ಪೊಲೀಸರು ಕಾನೂನು ಸಂಘರ್ಷ ಕೊಳಗದ ಇಬ್ಬರು ಬಾಲಕರನ್ನು ಬಂಧಿಸಿ ನಾಲ್ಕು ಲಕ್ಷ ರೂ ಬೆಲೆ ಬಾಳುವ ದ್ವಿಚಕ್ರ ವಾಹನ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಸುಮಾರು ಮೂರು ಪ್ರಕರಣಗಳನ್ನು ಭೇದಿಸುವಲ್ಲಿ ಪೀಣ್ಯಾ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಹದೇವಪುರ ಪೊಲೀಸರು ಅಜಯ್ ಎಂಬ ಆರೋಪಿಯನ್ನು ಬಂಧಿಸಿ ಸುಮಾರು ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕುವಿನಿಂದ ಬೆದರಿಸಿ ದರೋಡೆ ಮಾಡಿದ್ದ ೧೩ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ಮಹದೇವಪುರ ಪೊಲೀಸ್ ಠಾಣೆ ಒಂದು ಪ್ರಕರಣ ಹಾಗೂ ಇನ್ನೂ ೧೨ ಪ್ರಕರಣಗಳು ಪತ್ತೆ ಆಗಬೇಕೆಂದು ನಗರ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು, ಸಾರ್ವಜನಿಕರು ದರೋಡೆಗೆ ಒಳಗಾಗಿದ್ದ ಪಕ್ಷದಲ್ಲಿ ಮಹದೇವಪುರ ಪೊಲೀಸರನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.

ವೈಟ್‌ಫೀಲ್ಡ್ ಪೊಲೀಸರು ಅಬ್ದುಲ್ ಎಂಬ ಆರೋಪಿಯನು ಬಂದಿಸಿ ೩೨ ದರೋಡೆ ಮಾಡಿದ್ದ ಮೊಬೈಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ನಾಲ್ಕುವರೆ ಲಕ್ಷ ಬೆಲೆಬಾಳುವ ಈಮೊಬೈಲ್ ಗಳಲ್ಲಿ ಒಂದು ಪ್ರಕರಣ ಪತ್ತೆಯಾಗಿ ಉಳಿದಂತ ಪ್ರಕರಣಗಳು ಪತ್ತೆಯಾಗಿಲ್ಲವೆಂದು ಮತ್ತು ಸಾರ್ವಜನಿಕರು ದರೋಡೆಗೆ
ಒಳಗಾಗಿದ್ದಾರೆ.

ವೈಟ್‌ಫೀಲ್ಡ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಆಯುಕ್ತರು ಕೋರಿಕೊಂಡರು.ಸೋಲದೇವನಹಳ್ಳಿ ಪೊಲೀಸರು ಸೊಹೇಬ್ ಪಾಷಾ ೩೦ ವರ್ಷ ಎಂಬ ಆರೋಪಿಯನ್ನು ಬಂಧಿಸಿ ೮ ಲಕ್ಷ ರೂ ಬೆಲೆ ಬಾಳುವ ೧೦೦ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.ಈತನು ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದನು ಎಂದು ತಿಳಿಸಿರುತ್ತಾರೆ.

ಮಾರತಳ್ಳಿ ಪೊಲೀಸರು ದಿವ್ಯ ಎಂಬ ಮನೆಯ ಕೆಲಸದಾಕೆಯನ್ನು ಬಂಧಿಸಿ ೩೦ ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಮತ್ತು ವಜ್ರಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.ಸುಮಾರು ಒಂದು ವರ್ಷಗಳ ಹಿಂದೆ ವಿಕ್ರಮ ವೈದ್ಯನಾಥ ಎಂಬುವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು ಮಾಲೀಕರಿಗೆ ಗೊತ್ತಿಲ್ಲದ ರೀತಿಯಲ್ಲಿ ಕಳವು ಮಾಡಿದ್ದರೂ ಎಂದು ಮಾರತಳ್ಳಿ ಪೊಲೀಸರು ತಿಳಿಸಿರುತ್ತಾರೆ.

ರಾಮೂರ್ತಿನಗರ ಪೊಲೀಸರು ಶ್ರೀನಿವಾಸ್ ಎಂಬ ಆರೋಪಿಯನ್ನು ಬಂದಿಸಿ ಒಂದುವರೆ ಲಕ್ಷ ರೂಬೆಲೆ ಬಾಳುವ ನಾಲಕ್ಕು ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.ಈತನು ರಾಮಮೂರ್ತಿನಗರದಲ್ಲಿರುವ ಪೈ ಇಂಟರ್ನ್ಯಾಷನಲ್ ಎಂಬ ಅಂಗಡಿಯಲ್ಲಿ ಕಳವು ಮಾಡಿದ್ದನು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು