LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಕಾಣದ ಕೈಗಳಿಂದ ಸಂಸ್ಥೆಗೆ ಕೆಟ್ಟ ಹೆಸರು ತರಲು ಪ್ರಯತ್ನ: ಅಧ್ಯಕ್ಷ ಶ್ರೀಕಂಠು

ಕನಕಪುರ: ಸಂಸ್ಥೆಗೆ ಕೆಟ್ಟ ಹೆಸರು ತರುವ ಏಕೈಕ ಉದ್ದೇಶದಿಂದ ಈ ಪ್ರಕರಣವನ್ನು ಕೆಲವರು ಬಳಸಿ ಕೊಂಡಿದ್ದಾರೆ ಎಂದುರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಹೆಚ್. ಕೆ. ಶ್ರೀಕಂಠು ತಿಳಿಸಿದರು.

ಸಂಸ್ಥೆಯಲ್ಲಿನ ಪದವಿ ಪೂರ್ವ ವಿದ್ಯಾರ್ಥಿ ಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ನಡೆದಿದೆ ಎನ್ನಲಾದ ಅಸಹ್ಯಕರ ಘಟನೆಯ ಹಿಂದೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಉಪನ್ಯಾಸಕರ ಕೈವಾಡವಿರುವುದು ಕಂಡು ಬಂದಿದ್ದು ಅಂತಹವರ ವಿರುದ್ಧ ಆಡಳಿತ ಮಂಡಳಿಶಿಸ್ತುಕ್ರಮ ಕೈ ಗೊಳ್ಳಲಿದೆ,ಪ್ರವಾಸದ ವೇಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮಧ್ಯಪಾನ ಮಾಡುವ ಮೂಲಕ ಅನುಚಿತ ವರ್ತನೆ ತೋರಿರುವ ಉಪನ್ಯಾಸಕರಾದ ವಿಶ್ವನಾಥ್, ನಾಗೇಶ್ ಹಾಗೂ ಲಕ್ಷ್ಮಿಶ್‍ರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದ್ದು ಘಟನೆಯ ಬಗ್ಗೆ ಕೂಲಂಕಷವಾಗಿ ಪರೀಶೀಲನೆ ನಡೆಸಿದ ನಂತರ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿರುವ ಈ ಸಂಸ್ಥೆಗೆ ಹೇಗಾದರೂ ಮಾಡಿ ಸಾರ್ವಜನಿಕ ವಲಯದಲ್ಲಿ ಕೆಟ್ಟ ಹೆಸರು ತರಬೇಕೆಂಬ ಆಶಯದಿಂದ ನಮ್ಮಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅರುಣ್ ,ಮಂಜು ಹಾಗೂ ಇನ್ನಿತರು ಸೇರಿ ಮೊದಲೇ ಯೋಜನೆ ಯನ್ನು ರೂಪಿಸಿ ಪ್ರವಾಸದ ವೇಳೆ ವಿದ್ಯಾರ್ಥಿಗಳು ಮನರಂಜನೆಗಾಗಿ ನೃತ್ಯ ಮಾಡುತ್ತಿದ್ದನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿಕೊಂಡು ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕೆ ತರದೇ ಬೇನಾಮಿ ಹೆಸರಿನಲ್ಲಿ ಮಕ್ಕಳ ಆಯೋಗಕ್ಕೆ ದೂರು ಕೊಟ್ಟಿರುವುದು ನೋಡಿದಾಗ ಅವರ ದುರುದ್ದೇಶ ಅರ್ಥವಾಗುತ್ತದೆ,

ಈ ಪ್ರಕರಣದ ರೂವಾರಿಗಳ ವಿರುದ್ಧ ಈಗಾಗಲೇ ಹಲವು ದೂರು ಗಳಿದ್ದರೂ ಸಹ ನಾವು ಮಾನವೀಯತೆಯಿಂದ ಕಂಡು ಅವರನ್ನು ಸಾತನೂರು ಶಿಕ್ಷಣ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದರೂ ಅಲ್ಲೂ ಸಹ ಕೆಲಸವನ್ನು ಮಾಡದೇ ಸಹೋದ್ಯೋಗಿಗಳ ಜೊತೆ ಅನುಚಿತವಾಗಿ ನಡೆದು ಕೊಂಡಿರುವದನ್ನು ಗಮನಿಸಿ ಅವರನ್ನು ಈ ಕೂಡಲೇ ಕೆಲಸ ದಿಂದ ವಜಾ ಮಾಡಿರುವುದಾಗಿ ತಿಳಿಸಿದರು.

ಘಟನೆಯ ಬಗ್ಗೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯ ರಿಂದ ವಿವರಣೆಯನ್ನು ಪಡೆಯಲಾಗಿದ್ದು ಸಾಮಾಜಿಕ ಜಾಲ ಹಾಗೂ ಮಾಧ್ಯಮಗಳಲ್ಲಿ ಬಂದಂತಹ ಸುದ್ದಿಗಳಲ್ಲಿ ತಪ್ಪು ಮಾಹಿತಿ ಇದ್ದು ನಮ್ಮ ಜೊತೆ ಯಾವ ಶಿಕ್ಷಕರಾಗಲೀ, ಸಹಪಾಠಿಗಳಾಗ ಲೀ ಅಸಬ್ಯವಾಗಿ ವರ್ತನೆ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದು ಆದರೂ ಸಹ ಸಂಸ್ಥೆಯ ಆಡಳಿತ ಮಂಡಳಿಯು ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಈಗ ಆಗಿರುವ ಘಟನೆಗೆ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ತಾಲ್ಲೂಕಿನ ಸಾರ್ವಜನಿಕರಲ್ಲಿ ಕ್ಷಮೆ ಕೋರಿ ಮುಂದೆ ಈ ರೀತಿಯ ಘಟನೆಗಳು ಮರುಕಳಿಸ ದಂತೆ ಎಚ್ಚರ ವಹಿಸಿ ಪೂಜ್ಯ ಕರಿಯಪ್ಪ ನವರ ಹೆಸರಿಗೆ ಕಳಂಕ ತರುವ ಯಾವುದೇ ಕೆಲಸಕ್ಕೆ ಆಸ್ಪ ದ ನೀಡುವುದಿ ಲ್ಲವೆಂದು ಭರವಸೆ ನೀಡಿದರು.ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಬಿ. ನಾಗರಾಜು, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ಪ್ರಾಂಶುಪಾಲರಾದ ರುದ್ರೇಶ್,ದೇವರಾಜು, ಬಾಲಕೃಷ್ಣ, ಶಿಕ್ಷಕರಾದ ಪ್ರಸಾದ್, ಮಧು, ಮೋಹನ್, ಕೆಂಪೇಗೌಡ ಸೇರಿದಂತೆ ಉಪನ್ಯಾಸಕಿಯರು ಈ ವೇಳೆ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು