LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಕುಂದಾಣ ಗ್ರಾಮಪಂಚಾಯ್ತಿ ವತಿಯಿಂದ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಹಾಯಧನದ ಚೆಕ್

ದೇವನಹಳ್ಳಿ : ಸರ್ಕಾರಿ ಪ್ರೌಢಶಾಲೆ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಹಾಯಧನದ ಚೆಕ್ ನಮ್ಮ ಕುಂದಾಣ ಗ್ರಾಮ ಪಂಚಾಯ್ತಿ ವತಿಯಿಂದ ನೀಡಲಾಗುತ್ತಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.ಅವರು ಕುಂದಾಣ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಸಹಾಯ
ಧನದ ಚೆಕ್ ವಿತರಿಸಿ ಮಾತನಾಡಿ ಎಸ್.ಸಿ., ಎಸ್.ಟಿ ಮಕ್ಕಳ ಶೈಕ್ಷಣಿಕ ಪ್ರವಾಸ ಮುಗಿಸಿ ಬಂದಿದ್ದು, ಸಹಾಯಧನದ ರೂಪದಲ್ಲಿ ಪಂಚಾಯ್ತಿಯಿಂದ 25 ಸಾವಿರ ರೂಗಳ ಚೆಕ್ ನೀಡಲಾಗುತ್ತಿದೆ ಸುಮಾರು 33 ಮಕ್ಕಳು ಪ್ರವಾಸಕ್ಕೆ ತೆರಳಿದ್ದರು ಎಂದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನೇತ್ರಾವತಿ ನಾಗೇಶ್ ಮಾತನಾಡಿ ಈ ಪ್ರೌಡಶಾಲೆಯಲ್ಲಿ ಬಹುತೇಕ ಮಕ್ಕಳು ಪರಿಶಿಷ್ಠ ಜಾತಿಗೆ ಸೇರಿದವ
ರಾಗಿದ್ದಾರೆ, ಅವರ ಶೈಕ್ಷಣಿಕ ಪ್ರವಾಸಕ್ಕೆಸಹಾಯಧನವಾಗಿ ಚೆಕ್ ವಿತರಿಸಲಾಗುತ್ತಿದೆ, ಈ ಪ್ರವಾಸ ಮಕ್ಕಳಿಗೆ ಹೊಸ ಅನುಭವ ನೀಡಲಿದ್ದು ಶಿಕ್ಷಣಕ್ಕೆ
ಸಹಕಾರಿಯಾಗಲಿದೆ, ಮಕ್ಕಳು ಸಹಶ್ರಮಪಟ್ಟು ಓದಿ ಉನ್ನತ ವ್ಯಾಸಂಗ ಮಾಡಿ ನಮ್ಮ ಶಾಲೆಗೆ ಹಾಗೂ ಗ್ರಾಮಕ್ಕೆ ಹೆಸರು ತನ್ನಿ, ಪೋಷಕರು ಸಹ ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ, ಸರ್ಕಾರದಿಂದ ಅನೇಕ ಸವಲತ್ತುಗಳು ದೊರೆಯ
ಲಿವೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಈ ಸಮಯದಲ್ಲಿ ಗ್ರಾ.ಪಂ. ಸದಸ್ಯ ಹಾಗೂ ಕುಂದಾಣ ಸರಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ವಿ.ಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನೇತ್ರಾವತಿ ನಾಗೇಶ್ ಗ್ರಾ.ಪಂ. ಉಪಾಧ್ಯಕ್ಷೆ ನೀಲಮ್ಮ, ಮಾಜಿ ಅಧ್ಯಕ್ಷೆ ವಿಜಯ ಬಿ.ವಿ. ಸ್ವಾಮಿ, ಗ್ರಾಪಂ.ಸದಸ್ಯ ಕ್ಯಾತೇಗೌಡ, ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ದ್ಯಾವರಹಳ್ಳಿ ವಿ.ನಾರಾಯಣಸ್ವಾಮಿ, ಕ್ಯಾತೇಗೌಡ, ವಿಜಯ ಬಿ.ವಿ.ಸ್ವಾಮಿ, ಶೋಭಾ, ವರಲಕ್ಷ್ಮಮ್ಮ, ಸುಬ್ರಮಣಿ, ಮುನಿಯಪ್ಪ, ರಾಮಚಂದ್ರ, ಡಿ.ಆರ್.ಮಾಲ, ಪ್ರವೀಣ್‍ಕುಮಾರ್, ಗ್ರಾ.ಪಂ ಕಾರ್ಯದರ್ಶಿ ಉಷಾ, ಬಿಲ್ ಕಲೆಕ್ಟರ್‍ಗಳಾದ ಶಾಂತಕುಮಾರ, ಸುರೇಶ್, ರೂಪಶ್ರೀ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು