LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಗಣಿತ ಕಲಿಕ ಆಂದೋಲನ ಕಾರ್ಯಕ್ರಮ

ದೊಡ್ಡಬಳ್ಳಾಪುರ: ಗಣಿತ ಕಲಿಕಾ ಆಂದೋಲನ ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯನ್ನು ಹಾದ್ರೀಪುರ ಗ್ರಾಪಂ ಮಟ್ಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾದ್ರೀಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಾದ್ರೀಪುರ ಪಂಚಾಯತಿ ವ್ಯಾಪ್ತಿಯ ಚಿಕ್ಕಹೆಜ್ಜಾಜ್ಜಿ, ಮಧುರನಹೊಸಹಳ್ಳಿ, ಚುಂಚೇಗೌಡನಹೊಸಹಳ್ಳಿ, ನಾರನಹಳ್ಳಿ, ಕತ್ತಾಳೆಪಾಳ್ಯ, ರಾಮೇಶ್ವರ ಗ್ರಾಮಗಳಿಂದ ಮಕ್ಕಳು ಆಗಮಿಸಿದ್ದರು. ಪರೀಕ್ಷೆಯಲ್ಲಿ ಒಟ್ಟು 80 ಜನ ವಿಧ್ಯಾರ್ಥಿಗಳು ಭಾಗವಹಿಸಿದ್ದರು. 4ನೇ ತರಗತಿ, 5ನೇ ತರಗತಿ ಹಾಗೂ 6ನೇ ತರಗತಿ ಮಕ್ಕಳಿಗೆ ಪ್ರತ್ಯೇಕವಾಗಿ ಗಣಿತ ಕಲಿಕಾ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬಹುಮಾನಗಳನ್ನು ನಗದು ರೂಪದಲ್ಲಿ, ಪ್ರಥಮ ಬಹುಮಾನ 1,000/-, ದ್ವಿತೀಯ ಬಹುಮಾನ 750/- ತೃತೀಯ ಬಹುಮಾನ 500/- ರೂಪಾಯಿಗಳನ್ನು ತರಗತಿವಾರು ವಿತರಿಸಲಾಯಿತು.

ಈ ವೇಳೆ ಗ್ರಾಮಪಂಚಾಯತಿ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲಿಯೇ ಉತ್ತಮ ವಿಧ್ಯಾಭ್ಯಾಸ ಮಾಡಿ ಗ್ರಾಮಕ್ಕೆ, ದೇಶಕ್ಕೆ ಉತ್ತಮ ಹೆಸರು ತರಬೇಕು. ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನ ತಂದಿದೆ. ಅವುಗಳನ್ನ ಬಳಕೆ ಮಾಡಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಹಾದ್ರೀಪುರ ಶಾಲೆಯಲ್ಲಿ ವ್ಯಾಸಂಗ ಮಾಡಿ ಓರ್ವ ವಿಧ್ಯಾರ್ಥಿ ಯುಪಿಎಸ್ಸಿ ಪಾಸ್ ಆಗಿ ಐಪಿಎಸ್ ಅಧಿಕಾರಿ ಆಗಿ ದೇಶ ಸೇವೆ ಮಾಡುತ್ತಿದ್ದಾರೆ. ಇದೇ ರೀತಿ ಇನ್ನಷ್ಟು ವಿಧ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗೆ ಹೋಗಬೇಕು ಎಂದರು.

ಗಣಿತ ಕಲಿಕಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಆಧ್ಯಕ್ಷರಾದ ಸತೀಶ್ ಕುಮಾರ್ ಹೆಚ್ ಜಿ, ಸದಸ್ಯರಾದ ದೇವರಾಜ್ ಸುಷ್ಮಾ, ಎಸ್ ಡಿ ಎಂ ಸಿ ಆಧ್ಯಕ್ಷರು ಹನುಮಂತರಾಜು, ಉಪಾಧ್ಯಕ್ಷ ಚೆನ್ನಕೃಷ್ಣಯ್ಯ, ಮುಖ್ಯ ಶಿಕ್ಷಕರು ಎಪಿ ವಿರೂಪಾಕ್ಷಯ್ಯ, ಮತ್ತು ಸಹ ಶಿಕ್ಷಕರಾದ ನಟರಾಜ್ ವಿ, ಪಂಚಾಯತಿ ವ್ಯಾಪ್ತಿಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾದ್ರೀಪುರ ಗ್ರಾಮಸ್ಥರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು