LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

`ಗಳಗನಾಥರು ಮತ್ತು ಅವರ ಕಾದಂಬರಿಗಳು' ಪುಸ್ತಕ ನಾಳೆ ಬಿಡುಗಡೆ

ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಎಲ್ಲ ಕಾದಂಬರಿಗಳನ್ನು ಹಾಗೆಯೇ ಅವರ ಜೀವನವನ್ನು ಕುರಿತು `ಗಳಗನಾಥರು ಮತ್ತು ಅವರ ಕಾದಂಬರಿಗಳು' ಎಂಬ ಡಾ. ಕೃಷ್ಣಮೂರ್ತಿ ಕಿತ್ತೂರ ಅವರು ಬರೆದ ಪುಸ್ತಕ ಇದೇ ಶನಿವಾರ 14-12-2024ರಂದು ಮುಂಜಾನೆ 10-30ಕ್ಕೆ ಧಾರವಾಡ ರಂಗಾಯಣ ಆವರಣದಲ್ಲಿಯ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಬಿಡುಗಡೆಯಾಗಲಿದೆ.

ಖ್ಯಾತ ಕಾದಂಬರಿಕಾರ   ಪ್ರೊ . ರಾಘವೇಂದ್ರ ಪಾಟೀಲರು ಪುಸ್ತಕ ಬಿಡುಗಡೆ ಮಾಡಲಿದ್ದು, ಸಾಹಿತಿ ಪ್ರೊ ಹರ್ಷ ಡಂಬಳ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿಯ ಶ್ರೀ ಗಳಗನಾಥ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ ದುಷ್ಯಂತ ನಾಡಗೌಡರು ವಹಿಸಲಿದ್ದಾರೆ.

ಬಿಡುಗಡೆ ಸಮಾರಂಭದಲ್ಲಿ ಈ ಗ್ರಂಥದ ಮುಖ್ಯಪ್ರೇರಣೆಯಾದ ಶ್ರೀ ಬಿ. ವಿ. ಕುಲಕರ್ಣಿ ಇವರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಗಳಗನಾಥ ಕುಟುಂಬದ ಶ್ರೀ ವೆಂಕಟೇಶ ಗಳಗನಾಥ ಹಾಗೂ ಕುಟುಂಬದವರು ಮತ್ತು ಡಾ. ಕೃಷ್ಣಮೂರ್ತಿ ಕಿತ್ತೂರ ಕುಟುಂಬದವರಾದ ಅವರ ಮಗ ಶ್ರೀ ಆನಂದತೀರ್ಥ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ಗ್ರಂಥ ಮಾಲೆಯ ಹಿರಿಯ ಪ್ರಕಾಶಕರಾದ ಡಾ. ರಮಾಕಾಂತ ಜೋಶಿ ವೇದಿಯಲ್ಲಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಳಗನಾಥರ ಜನ್ಮಶತಮಾನೋತ್ಸವವನ್ನು 1969ರಲ್ಲಿ ಆಚರಿಸಿಲಾಗುತ್ತಿದ್ದ ಅವಧಿಯಲ್ಲಿ ಪ್ರೊ ಕೃಷ್ಣಮೂರ್ತಿಯವರು ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಅವರಿಗೆ ಗಳಗನಾಥ ಕಾದಂಬರಿಗಳಷ್ಟೇ ಅಲ್ಲದೆ ಗಳಗನಾಥರ ಜೀವನದ ಬಗ್ಗೆ ಆಸಕ್ತಿ ಹುಟ್ಟಿತು. ಕಾದಂಬರಿಗಳನೆಲ್ಲ ಓದಿದ್ದಲ್ಲದೆ ಗಳಗನಾಥರನ್ನು ಬಲ್ಲ ವ್ಯಕ್ತಿಗಳಿಂದ ಅವರ ಜೀವನದ ಬಗೆಗೆ ಮಾಹಿತಿ ದೊರಕಿಸಿಕೊಂಡರು.

ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸಿ ವಿವೇಚಿಸಿ ಸಂಶೋಧನೆ ಮಾಡುವಲ್ಲಿ 5-6 ವರ್ಷ ಕಳೆದವು. 1979ರಲ್ಲಿ ಗುಣಗ್ರಾಹಿ ಶಿಕ್ಷಕ ಪ್ರೊ ಆರ್. ಸಿ. ಹಿರೇಮಠರು ಈ ಪುಸ್ತಕವನ್ನು ಪಿಹೆಚ್. ಡಿ. ಗಾಗಿ ಬರೆದ ಪ್ರಬಂಧವೆಂದು ಪರಿಗಣಿಸಿ ಕೃಷ್ಣಮೂರ್ತಿ ಕಿತ್ತೂರ ಇವರಿಗೆ ಡಾಕ್ಟರೇಟ್ ಪದವಿ ದೊರೆಯಿತು. ಹೀಗೆ ಪ್ರೊ ಕೃಷ್ಣಮೂರ್ತಿ ಕಿತ್ತೂರ ಅವರ ಪ್ರಬಂಧ ಕನ್ನಡ ಕಾದಂಬರಿ ಓದುಗರಿಗೆ ಒಂದು ಮಾರ್ಗದರ್ಶಿ ಪುಸ್ತಕವಾಗಿ ಸಿಕ್ಕಿತು.

ಈ ಪುಸ್ತಕ ಮೊದಲ ಮುದ್ರಣ ಕಂಡದ್ದು 1978ರಲ್ಲಿ. ಈಗ ಇದು ಮನೋಹರ ಗ್ರಂಥ ಮಾಲಾ, ಧಾರವಾಡದಿಂದ 2024 ರಲ್ಲಿ ಎರಡನೇ ಮುದ್ರಣ ಕಾಣುತ್ತಿದೆ. ಸುಮಾರು 488 ಪುಟಗಳಷ್ಠಿರುವ ಈ ಪುಸ್ತಕಕ್ಕೆ ರೂ.625/- ಬೆಲೆ?ಯಿಡಲಾಗಿದ್ದು ಬಿಡುಗಡೆಯ ದಿನ ರಿಯಾಯಿತಿ ದರದಲ್ಲಿ ರೂ. 500/-ಕ್ಕೇ ಗ್ರಂಥ ಮಾಲೆಯವರು ನಿಡಲಿದ್ದಾರೆ.

ದಯವಿಟ್ಟು ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಕೋರಲಾಗಿದೆ.
ಗಳಗನಾಥ: ಗಳಗನಾಥರ ನಿಜ ನಾಮ ವೆಂಕಟೇಶ ತಿರಕೋ ಕುಲಕರ್ಣಿ ಎಂದು ಇದ್ದು, ಅವರು ಹಾವೇರಿ ತಾಲೂಕಿನ ಗಳಗನಾಥ ಕುಟುಂಬದಲ್ಲಿ ಶಾನುಭೋಗರ ಮಗನಾಗಿ ಹುಟ್ಟಿದ್ದರು. ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನರೇಂದ್ರ, ಮುಳಮುತ್ತಲ ಹಾಗೂ ಗುತ್ತಲ ಶಾಲೆಗಳಲ್ಲಿ ಕಲಿಸಿದರು.

ಅಂದಿನ ಟ್ರೇನಿಂಗ್ ಕಾಲೇಜಿನ ಪ್ರಾಚರ್ಯರಾಗಿದ್ದ ರಾವಜಿ ಕಾರಂದೀಕರ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಸಂಸ್ಥೆ ಸಂಸ್ಥಾಪಕರಾಗಿದ್ದ ಮಾನ್ಯ ರಾ.ಹ. ದೇಶಪಾಂಡೆಯವರ ಪ್ರೇರಣೆಯಿಂದಾಗಿ ಸಂಘದ ಕಾದಂಬರಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾದರು. 1826-27ನೆ ಇಸ್ವಿಯಲ್ಲಿ ಅಲ್ಲಿಂದ ಸುಮಾರು ನಾಲ್ಕು ದಶಕಗಳಲ್ಲಿ ಅವರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದರು.

ಅಲ್ಲಿಯವರೆಗೆ ಕನ್ನಡದಲ್ಲಿ ಮನರಂಜನೆಗಾಗಿ ಬರೆದ ಕಾದಂಬರಿಗಳೇ ಇಲ್ಲವಾದ್ದರಿಂದ ಕನ್ನಡ ನಾಡಿನ ಈ ಭಾಗದ ಜನರು ಮರಾಠಿ ಕಾದಂಬರಿಗಳನ್ನು ಓದುತ್ತಿದ್ದರು. ಗಳಗನಾಥರು ಬರೆದ ಎಲ್ಲ ಕಾದಂಬರಿಗಳು ಅವುಗಳ ಭಾಷೆ ಶೈಲಿ ಹಾಗೂ ವಸ್ತು ಇವುಗಳಿಂದ ಜನಮನಗೆದ್ದದಲ್ಲದೆ ಓದುಗರಲ್ಲಿ ಸದಬಿರುಚಿಯನ್ನು ಹುಟ್ಟಿಸಿದಂತ ಹವುಗಳಾದವು.

ಗಳಗನಾಥರು ಬಹಳಷ್ಟು ಕಾದಂಬರಿಗಳು ದೇಶಪ್ರೇಮಿ ಶೂರರ ಬಗೆಗೆ ಬರೆದ ಐತಿಹಾಸಿಕ ಕಾದಂಬರಿಗಳು. ಅವುಗಳೆಲ್ಲವೂ ಓದುಗರ ಮನಸೆಳೆದವುಓದುಗಸ್ನೇಹಿ ಆತ್ಮೀಯ ಶೈಲಿಯಲ್ಲಿ ಬರೆಯಲ್ಪಟ್ಟಿವೆ. ಗಳಗನಾಥರ ಜೀವನ ಕಷ್ಟ ನಷ್ಟಗಳನ್ನು ಅನುಭವಿಸಿ ಬದುಕಿನಲ್ಲಿ ಬರಹಗಾರ, ಮುದ್ರಕ, ಪ್ರಕಾಶಕ ಹಾಗೂ ಮಾರಾಟಗಾರನಾಗಿ ಕನ್ನಡ ಸೇವೆ ಮಾಡಿದ ವ್ಯಕ್ತಿಯೊಬ್ಬನಾಗಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು