LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಗಾಂಧಿ ತತ್ವಗಳಿಂದ ಸಮಾಜ ದೂರ ಸರಿಯುತ್ತಿದೆ: ಶ್ರೀಕಂಠು

ಕನಕಪುರ: ಇತ್ತೀಚಿನ ದಿನಗಳಲ್ಲಿ ಗಾಂಧಿ ತತ್ವಗಳಿಂದ ಸಮಾಜ ದೂರ ಸರಿಯುತ್ತಿದೆ. ಅಧಿಕಾರ ಮತ್ತು ಹಣದ ಹಿಂದೆ ಓಡುತ್ತಿರುವ ಸಮಾಜದಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತಿದೆ.ಎಂದು ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠು ತಿಳಿಸಿದರು.

ನಗರದ ಆರ್‍ಇಎಸ್ ಶಿಕ್ಷಣ ಸಂಸ್ಥೆ ಆವರಣದ ಎಸ್.ಕೆ.ಮೆಮೋರಿಯಲ್ ಹಾಲ್‍ನಲ್ಲಿ ರೂರಲ್ ಎಜುಕೇಶನ್ ಸೊಸೈಟಿಯಿಂದ ನಡೆದ ಗಾಂಧಿಜಿ ಮತ್ತು ಲಾಲ್ ಬಹದ್ದೂರ್‍ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಗಾಂಧಿಜೀಯವರ ಜಯಂತಿ ಆಚರಣೆಯಿಂದ ಮಾತ್ರ ಆ ಪುಣ್ಯಾತ್ಮನಿಗೆ ತೃಪ್ತಿ ದೊರಕದು ಅವರ ಮಾರ್ಗವಾದ ಸತ್ಯ, ಅಹಿಂಸೆ, ಪ್ರಾಮಾಣಿಕತೆ ದಾರಿಯತ್ತ ಸಮಾಜ ಸಾಗಬೇಕಿದೆ. ರೂರಲ್ ಎಜುಕೇಶನ್ ಸೊಸೈಟಿ ಸಂಸ್ಥಾಪಕರಾದ ಎಸ್. ಕರಿಯಪ್ಪನವರು ಕೂಡ ಗಾಂಧಿ ಅನುಯಾಯಿ. ನಮ್ಮ ಸಂಸ್ಥೆ ಆರ್ಥಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರು ಅಭಿವೃದ್ಧಿ ಪಥದೆಡೆ ನಡೆದರೂ ಕರಿಯಪ್ಪನವರ ಆಶಯಗಳನ್ನು ತತ್ವಗಳನ್ನು ಪಾಲಿಸದಿದ್ದರೆ ಎಲ್ಲವೂ ವ್ಯರ್ಥ ಎಂದರು.

ಉಪನ್ಯಾಸಕ ಜಗದೀಶ್ ಮಾತನಾಡಿ ಗಾಂಧೀಜಿಯವ ರಿಂದ ನಾವು ಕಲಿಯಬೇಕಾದದ್ದು ಅಪಾರ,ಸತ್ಯ- ಅಹಿಂಸೆ ಮಾರ್ಗಗಳನ್ನು ಬ್ರಿಟಿಷರ ಕಾಲದಲ್ಲೇ ಅಸ್ತ್ರಗಳನ್ನಾಗಿ ಹೂಡಿ ಅವರನ್ನು ಹಿಮ್ಮೆಟ್ಟಿಸಲು ಸಲರಾದರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಯ ಮೂಲಕ ಹೋರಾಟದಲ್ಲಿ ಸಕ್ರಿಯರಾದರು. ಉಪ್ಪಿನ ತೆರಿಗೆಯನ್ನ ವಿರೋಧಿಸಿ ಉಪ್ಪಿನ ಸತ್ಯಾಗ್ರಹ ಕೈಗೊಂಡು ಯಶಸ್ವಿ ಯಾದರು,ಮಹಾತ್ಮ ಗಾಂಧಿ ಮರಣದ ದಿನ ವಿಶ್ವಸಂಸ್ಥೆ ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳ ಧ್ವಜವನ್ನು ಅರ್ಧಕ್ಕೆ ಇಳಿಸಿ ಮೌನ ಆಚರಣೆ ಮಾಡುವ ಮೂಲಕ ಇಂದು ಜಗತ್ತಿನಲ್ಲಿ ಮಾನವೀಯತೆ ಸತ್ತಿದೆ ಎಂದು ಘೋಷಿಸಿತು. ಇದು ಆ ಮಹಾತ್ಮನಿಗೆ ಸಲ್ಲಿದ ಗೌರವ ಎಂದರು.

ಪುಟ್ಟ ಪುಟ್ಟ ಮಕ್ಕಳು ಸ್ವತಂತ್ರ್ಯ ಹೋರಾಟಗಾರರ ವೇಷ ಭೂಷಣ ತೋಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಹಾತ್ಮ ಗಾಂಧಿ, ಕಸ್ತೂರಬಾ, ಲಾಲ್ ಬಹದ್ದೂರ್ ಶಾಸ್ತ್ರಿ ವೇಷಭೂಷಣ ಎಲ್ಲರ ಗಮನ ಸೆಳೆಯಿತು. ಮಕ್ಕಳಿಗೆ ಆರ್‍ಇಎಸ್ ಅಧ್ಯಕ್ಷ ಶ್ರೀಕಂಠು ಅವರು ನಗದು ಬಹುಮಾನ ನೀಡುವುದರ ಮೂಲಕ ಪ್ರೋತ್ಸಾಹಿಸಿದರು. ಎನ್ ಎಸ್ ಎಸ್ ವತಿಯಿಂದ ಸಂಗ್ರಹಿಸಿದ್ದ ನಿಧಿಯಲ್ಲಿ ರೂರಲ್ ಕಾಲೇಜಿನ ಕಟ್ಟಡ ನಿರ್ಮಾಣದ ಕಾರ್ಮಿಕರ ಮಕ್ಕಳಿಗೆ ವಸ್ತ್ರಗಳನ್ನು ನೀಡಲಾಯಿತು. ಕಳೆದ ಒಂದು ವಾರದಿಂದ ಎನ್ ಸಿ ಸಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಗಾಂಧಿ ಆಶಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಆರ್‍ಇಎಸ್ ಸಂಸ್ಥೆ ಕಾರ್ಯದರ್ಶಿ ಪುಟ್ಟಸ್ವಾಮಿ, ಕೆ. ಬಿ. ನಾಗರಾಜು, ಮಂಜುನಾಥ್, ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ದೇವರಾಜು, ಸೇರಿದಂತೆ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು ಬೋಧಕ ಬೋ?ಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು