LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್ ಘೋಷಣೆ

ದೊಡ್ಡ ಸಿನಿಮಾಗಳ ಥ್ರಿಯೇಟ್ರಿಕಲ್ ರಿಲೀಸ್ ಮಾತ್ರವಲ್ಲ ಓಟಿಟಿ ಸ್ಟ್ರೀಮಿಂಗ್ ಕೂಡ ಬಹಳ ಕುತೂಹಲ ಮೂಡಿಸುತ್ತದೆ. ಕಾರಣ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದ ಬಹುತೇಕ ಮಂದಿ ಡಿಜಿಟಲ್ ಪ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ನೋಡಲು ಕಾದು ಕೂತಿರುತ್ತಾರೆ. ತಮಿಳಿನ 'ದಿ ಗ್ರೇಟೆಸ್ಟ್ ಆಫ್ ಆಲ್‍ಟೈಮ್' ಸಿನಿಮಾ ಓಟಿಟಿ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ದಳಪತಿ ವಿಜಯ್ ನಟನೆಯ 'ಗೋಟ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು.

ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಅದನ್ನೆಲ್ಲಾ ಮೀರಿ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸಿತ್ತು. ವೆಂಕಟ್ ಪ್ರಭು ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಪ್ರಶಾಂತ್, ಪ್ರಭುದೇವ, ಸ್ನೇಹಾ, ಕೋಕಿಲ ಮೋಹನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 3ನೇ ವಾರ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಡಲ್ ಆಗಿದೆ. ಈಗಾಗಲೇ 'ಗೋಟ್' ಸಿನಿಮಾ ವಿಶ್ವದಾದ್ಯಂತ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಕಾಲಿವುಡ್‍ನಲ್ಲಿ ವಿಜಯ್ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ.

ಬೆಂಗಳೂರಿನಲ್ಲಿ ಕೂಡ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಅದೇನೋ ಗೊತ್ತಿಲ್ಲ ಇತ್ತೀಚೆಗೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ದಳಪತಿ ಚಿತ್ರಗಳು ಮುಗ್ಗರಿಸುತ್ತಿವೆ. The GOAT Trailer: ವಯಸ್ಸಾದ ಸಿಂಹದ ಘರ್ಜನೆಗೆ ದಾಖಲೆಗಳು ಧೂಳ್; ಕೊನೆ ಚಿತ್ರದಲ್ಲಿ ದಳಪತಿ ಡಬಲ್ ಧಮಾಕ 'ಗೋಟ್' ಸಿನಿಮಾ ಕೂಡ ದಳಪತಿ ಅಭಿಮಾನಿಗಳಿಗೆ ಇಷ್ಟವಾದರೆ ಉಳಿದವರಿಗೆ ರುಚಿಸಲಿಲ್ಲ.

ಇನ್ನು ತಂದೆ-ಮಗನಾಗಿ ಒಂದರ್ಥದಲ್ಲಿ ದ್ವಿಪಾತ್ರದಲ್ಲಿ ವಿಜಯ್ ತೆರೆಮೇಲೆ ಬಂದಿದ್ದರು. ಸಿದ್ದಾರ್ಥ್ ನುನಿ ಛಾಯಾಗ್ರಹಣ ಹಾಗೂ ಯುವನ್ ಶಂಕರ್‍ರಾಜಾ ಸಂಗೀತ ಚಿತ್ರಕ್ಕಿದೆ. ನಿವೃತ್ತಿ ಬಳಿಕ ಸಾಮಾನ್ಯ ಜೀವನ ನಡೆಸಲು ಆತ ನಿರ್ಧರಿಸಿರುತ್ತಾರೆ. 'ಗೋಟ್' ಸಿನಿಮಾ ಕಾಲಾವಧಿ 3 ಗಂಟೆ ದಾಟಿತ್ತು. ಇನ್ನು 18 ನಿಮಿಷ ಹೆಚ್ಚು ಸನ್ನಿವೇಶವನ್ನು ಚಿತ್ರತಂಡ ಸೆರೆ ಹಿಡಿದಿತ್ತು. ಕಾಲಾವಧಿ ಜಾಸ್ತಿ ಆಯ್ತು ಎನ್ನುವ ಕಾರಣಕ್ಕೆ ಕಟ್ ಮಾಡಿ 3 ಗಂಟೆ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು