LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಚೆಟ್ರಿ ಕಾಲ್ಚಳಕ: ಬೆಂಗಳೂರು ಪಾರಮ್ಯ

ಬೆಂಗಳೂರು: ಸುನಿಲ್ ಚೆಟ್ರಿ ಮತ್ತು ರಾಹುಲ್ ಭೆಕೆ ಅವರ ಭರ್ಜರಿ ಆಟದ ಬಲದಿಂದ ಬೆಂಗಳೂರು ಫುಟ್‍ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಜಯಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 3-0ಯಿಂದ ಹೈದರಾಬಾದ್ ಎಫ್‍ಸಿ ವಿರುದ್ಧ ಜಯಭೇರಿ ಬಾರಿಸಿತು.
ಟೂರ್ನಿಯಲ್ಲಿ ತಂಡಕ್ಕೆ ಇದು ಸತತ ಎರಡನೇ ಜಯವಾಗಿದೆ. ಒಟ್ಟು ಅರು ಅಂಕ ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.ಪಂದ್ಯದ ಆರಂಭದಿಂದಲೂ ಬಿಎಫ್‍ಸಿ ಪಾರಮ್ಯ ಮೆರೆಯಿತು. ತಂಡಕ್ಕೆ ಐದನೇ ನಿಮಿಷದಲ್ಲಿ ರಾಹುಲ್ ಭೆಕೆ ಅವರು ಗೋಲು ಖಾತೆ ತೆರೆದರು.

ಇದರ ನಂತರದ 80 ನಿಮಿಷಗಳಲ್ಲಿ ಉಭಯ ತಂಡಗಳ ರಕ್ಷಣಾ ಆಟಗಾರರ ಸತ್ವಪರೀಕ್ಷೆ ನಡೆಯಿತು. ಎರಡೂ ತಂಡಗಳಿಗೆ ಗೋಲು ಒಲಿಯಲಿಲ್ಲ.
ಆದರೆ ಅನುಭವಿ ನಾಯಕ ಚೆಟ್ರಿ ತಮ್ಮ ಕಾಲ್ಚಳಕ ತೋರಿದರು. ಪೆನಾಲ್ಟಿ ಕಿಕ್ ನಲ್ಲಿ (85ನಿಮಿಷ) ಗೋಲು ಹೊಡೆದರು. ಅಷ್ಟಕ್ಕೇ ಸುಮ್ಮನಾಗದ ಅವರು ಕೊನೆಯ ಹಂತದ ನಿಮಿಷಗಳಲ್ಲಿಯೂ ಚುರುಕಾದ ದಾಳಿ ಸಂಘಟಿಸಿದರು.

ಇದರ ಫಲವಾಗಿ ಮತ್ತೊಂದು ಗೋಲು (90+4ನಿ) ಕೂಡ ಒಲಿಯಿತು.ಬಿಎಫ್‍ಸಿಯ ಆಟಗಾರರು ಚುಟುಕಾದ ಪಾಸ್‍ಗಳ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹಾಕಿದರು. ಬಿಎಫ್‍ಸಿಯಿಂದ 595 ಪಾಸ್‍ಗಳು ದಾಖಲಾದರೆ, ಹೈದರಾಬಾದ್ ತಂಡವು 221 ಪಾಸ್‍ಗಳನ್ನು ಮಾತ್ರ ಮಾಡಿತು. ಪಾಸ್‍ಗಳ ನಿಖರತೆಯಲ್ಲಿ ಬಿಎಫ್‍ಸಿಯು ಶೇ 90ರಷ್ಟು ಸಫಲವಾಗಿತ್ತು. ಆದರೆ ತಂಡದ ಆಟಗಾರರು ಮೂರು ಸಲ ಹಳದಿ ಕಾರ್ಡ್ ದರ್ಶನ ಮಾಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು