LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

“ಜಕ್ಕನ್ನಕ್ಕ” ಸಂಗೀತ ಸುಗ್ಗಿ ವಿಶೇಷ ರಸಮಂಜರಿ ಕಾರ್ಯಕ್ರಮ ಜ.2ಕ್ಕೆ

ದೇವನಹಳ್ಳಿ: ಶುಕ್ರವಾರ ಮಧ್ಯಾಹ್ನ ಪಟ್ಟಣದ 1.30ರಿಂದ ದೇವನಹಳ್ಳಿ ಪಟ್ಟಣದ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಬೇಕಿದ್ದ “ಜಕ್ಕನ್ನಕ್ಕ” ವಿಶೇಷ ರಸಮಂಜರಿ ಜಾನಪದ ಗಾಯನ ಕಾರ್ಯಕ್ರಮವನ್ನು ನಿನ್ನೆಯಷ್ಠ ನಿಧನರಾದ ಮಾಜಿ ಪ್ರಧಾನಮಂತ್ರಿಗಳಾದ ಮನಮೋಹನಸಿಂಗ್ ಗೌರವಾರ್ಥ ಜನವರಿ 2 ಕ್ಕೆ ಮುಂದೂಡಲಾಗಿದೆ ಮತ್ತು ದಿವಂಗತ ಪ್ರಧಾನಿಗಳಿಗೆ ನಮ್ಮ ಜನಮನದ ಜನಪದ ಕಲಾತಂಡ ತಂಡ ಹಾಗೂ ಜನಪದ ಕಲಾ ತಂಡದಿಂದ ಗೌರವಪೂರ್ವಕ ಶ್ರದ್ದಾಂಜಲಿ ಸಲ್ಲಿಸಲಾಗಿದೆ ಎಂದು ನಿರೂಪಕ ಗಾಯಕ, ಗೋನಾ ಸ್ವಾಮಿ ತಿಳಿಸಿದರು.

ಅವರು ಜನಮನದ ಜನಪದ ಕಲಾತಂಡ ಹಾಗೂ ಖಾಸಗಿ ವಾಹಿನಿಯ ಸಹಬಾಗಿತ್ವದಲ್ಲಿ ಜ.2 ರಂದು ಆಯೋಜಿಸಲಾಗಿರುವ ಈ ಜಗ್ಗಣ್ಣಕ್ಕ ಸಂಗೀತ ಸುಗ್ಗಿ ರಸಮಂಜರಿ ಜಾನಪದ ಗಾಯನ ಸಂಗೀತ ಕಾರ್ಯಕ್ರಮವನ್ನು ಅಂದು ಮದ್ಯಾಹ್ನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ. ಬಿಕೆ ವಿನೋದಕುಮಾರಗೌಡ ಉದ್ಘಾಟಿಸಲಿದ್ದು, ಕನ್ನಡ ಸಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ. ಜಿಲ್ಲಾ ಕೊಶಾಧ್ಯಕ್ಷ ಡಾ. ಮುನಿರಾಜು ಅಪ್ಪಯ್ಯ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಾ. ಎನ್.ಚಂದ್ರಶೇಖರ್ ಮುಂತಾದವರು ಮುಖ್ಯ ಅಥಿಗಳಾಗಿ ಭಾಗವಹಿಸಲಿದ್ದು ಖ್ಯಾತ ಸಂಗೀತ ನಿದೆರ್ಶಕ ವಿ. ಮನೋಹರ್ ಹಾಗೂ ಮಿಮಿಕ್ರಿ ಗೋಪಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಭಾಗದ ಜಾನಪದ ಸಾಹಿತ್ಯ ಸಂಗೀತ ಕಲೆ ನಶಿಸುತ್ತಿರುವ ಉದ್ದೇಶದಿಂದ ಅದನ್ನು ಉಳಿಸಿ ಬೆಳೆಸುವದೃಷ್ಠಿಯಿಂದ ಜನಮನದ ಜನಪದ ಕಲಾತಂಡದ ಸಹಯೋಗದಲ್ಲಿ 62 ವಿವಿಧ ದೇಶಗಳಲ್ಲಿ ಕಾರ್ಯ ಕ್ರಮಗಳನ್ನು ಮಾಡಲಾಗಿದ್ದು, ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಜಾನಪದ ರಸಮಂಜರಿ ಕಾರ್ಯಕ್ರಮ ಮಾಡಲಾಗುತ್ತಿದೆ.
ಕೋಲಾರ ಚಿಕ್ಕಬಳ್ಳಾಪುರದಲ್ಲಿ ಆಯೋಜನೆ ಮಾಡಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಯೋಜಿಸಲಾಗಿದೆ, ವಿದೇಶಗಳಲ್ಲಿ ಅಲ್ಲಿನ ಸಾಂಪ್ರದಾಯಿಕ ಸಂಗೀತಕ್ಕೆ ಬೆಲೆ ನೀಡುತ್ತಾರೆ.

ಆದರೆ ನಮ್ಮ ದೇಶದಲ್ಲಿ ಸಾಂಪ್ರ ದಾಯಿಕ ಸಂಗೀತ ಬಿಟ್ಟು, ವಿದೇಶಿ ಸಂಗೀತಕ್ಕೆ ಮಾರುಹೋಗುತ್ತಿದ್ದೇವೆ, ನಮ್ಮ ಸರ್ಕಾರಗಳು ಕೂಡ ನಮ್ಮ ಸಂಸ್ಕøತಿಯ ಜಾನಪದ ಉಳಿಸುವಲ್ಲಿ ವಿಫಲ ವಾಗಿವೆ, ನಾವು ಗ್ರಾಮೀಣ ಸೊಗಡಿನ ಜನಪದ ಸಂಗೀತ ಉಳಿಸುವ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು