LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಜನಸ್ನೇಹಿ ದಕ್ಷ ಅಧಿಕಾರಿಗೆ ದಲಿತ ಸಂಘಟನೆಗಳಿಂದ `ದಿವ್ಯ’ ಬೀಳ್ಕೊಡುಗೆ

ನೆಲಮಂಗಲ: ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ ಆದರೆ, ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಅಧಿಕಾರಿ ನಿರ್ವಹಿಸಿದ ಕೆಲಸ ಸ್ಥಳೀಯರಲ್ಲಿ ಶಾಶ್ವತವಾಗಿ ಉಳಿಯುವಂತಾದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್ ಭಾಸ್ಕರ್ ಪ್ರಸಾದ್ ತಿಳಿಸಿದರು.ನಗರದ ಡಾ:ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕಿನ ದಲಿತ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ ನಗರ ಪೊಲೀಸ್ ಠಾಣೆಯಲ್ಲಿ ಆರಕ್ಷಕ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಗೊಂಡ ಎಸ್ ಡಿ ಶಶಿಧರ್ ರವರ ಬೀಳ್ಕೊಡುಗೆ ಸಮಾರಂದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

ಒಬ್ಬ ಅಧಿಕಾರಿ ಸಾರ್ವಜನಿಕರ ಜತೆ ಪ್ರೀತಿಯಿಂದ ಇದ್ದರೆ, ಅವರ ಬೇಕು-ಬೇಡಿಕೆಗಳಿಗೆ ಸಕಾಲಕ್ಕೆ ಸ್ಪಂದಿಸಿ ಅಗತ್ಯ ಸಹಾಯ ಹಸ್ತ ಚಾಚಿದರೆ ಅವರಿಗೆ ಮರಳಿ ಅಂತಹುದೇ ಪ್ರೀತಿ, ಗೌರವ ಸಿಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.ಕಡಿಮೆ ಅವಧಿಯ ತಮ್ಮ ಸೇವೆಯಲ್ಲಿ ಎಲ್ಲರಿಗೂ ಆತ್ಮೀಯರಾಗಿದ್ದ ಈ ಅಧಿಕಾರಿ, ತಮ್ಮ ವರ್ಗಾವಣೆ ಸಂದರ್ಭದಲ್ಲಿ ಅದೇ ರೀತಿಯ ಅತ್ಮೀಯ ಬೀಳ್ಕೊಡುಗೆಯ ಗೌರವಕ್ಕೆ ಪಾತ್ರರಾಗಿರುವುದು ನೆಲಮಂಗಲದಲ್ಲಿ ಇದೆ ಮೊದಲು ಎಂದು ಅಭಿಪ್ರಾಯ ಪಟ್ಟರು.

ನಗರಸಭೆ ಸದಸ್ಯ ನರಸಿಂಹಮೂರ್ತಿ ಮಾತನಾಡಿ ಜನ ಸ್ನೇಹಿ ದಕ್ಷ ಅಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸುವ ಮೂಲಕ ತಾಲ್ಲೂಕಿನ ಜನತೆಯ ಮನದಲ್ಲಿ ಉಳಿದಿದ್ದಾರೆ ಖಾಕಿಯಲೊಬ್ಬ ಸಂತಎನಿಸಿಕೊಂಡ ಅಧಿಕಾರಿ ಶಶಿಧರ್ ರವರು ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿದ್ದು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಹಬಾಳ್ವೆ ಸಾರಿದರೆ ಎಂದರು.

ವಕೀಲರಾದ ಜಿ.ಎನ್. ಕನಕರಾಜು ಮಾತನಾಡಿ ಪೊಲೀಸ್ ಠಾಣೆ ಬಡವನಿಂದ ಶ್ರೀಮಂತರವರೆವಿಗೂ ಎಲ್ಲರಿಗೂ ಒಂದೇ ರೀತಿಯ ಗೌರವ ನೀಡಿ ಸಾಮಾಜಿಕ ನ್ಯಾಯ ಕೊಡುತಿದ್ದ ಎಸ್.ಡಿ. ಶಶಿಧರ್ ರವರ ವರ್ಗಾವಣೆ ತುಂಬಾ ನೋವು ಕೊಟ್ಟಿದೆ ಎಂದರು.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಶಿಧರ್ ರವರು ನಗರ ಪೊಲೀಸ್ ಠಾಣೆಯಲ್ಲಿ ಎರಡು ವರೆ ವರ್ಷ ಎಲ್ಲರ ಸಹಕಾರ ಇದ್ದ ಕಾರಣ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸುಲಭವಾಯಿತು. ಇಷ್ಟು ದಿನಗಳ ಕಾಲ ನನಗೆ ನೀವು ನೀಡಿದ ಸಹಕಾರ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಚಿರಋಣಿ ತಮ್ಮ ಸಹೋದ್ಯೋಗಿಗಳಿಗೆ ಹಾಗೂ ನೆಲಮಂಗಲ ಜನತೆಗೆ ಧನ್ಯವಾದಗಳನ್ನು ತಿಳಿಸುತೇನೆ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ತ್ಯಾಮಗೊಂಡ್ಲು ಶ್ರೀನಿವಾಸ್,ಜಯನಗರ ಗಂಗಾಧರ್, ಬೆಟ್ಟಹಳ್ಳಿ ರುದ್ರೇಶ್,ದೊಡ್ಡರಾಜು, ಸಾಹಿತಿಗಳಾದ ಕಲ್ಯಾಣಿ ನಾಗರಾಜು, ಮಹದೇವ್, ಮಹೇಶ್ ಬಿ ಕೆ, ಗಂಗಮ್ಮ ವಕೀಲರಾದ ದೊಡ್ಡರಿ ಬೈಲಪ್ಪ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಮಾದೇನಹಳ್ಳಿ ಪ್ರಕಾಶ್, ಅಮೃತ್ ಪಿಳ್ಳಪ್ಪ, ಡಾಬಾ ರಂಗಣ್ಣ ಪೂಜಪ್ಪ, ನಂದಕುಮಾರ್, ಮಾಗಡಿ ದ್ರುವ, ಕುಮಾರ್, ಆನಂದ್ ನರಸಿಂಹಮೂರ್ತಿ ರಾಯನ್ ನಗರ, ಶಿವಕುಮಾರ್, ಚೇತನ್, ಸಿದ್ದಯ್ಯ, ಹಸಿರುವಳ್ಳಿ ರಾಮಾ ಅಜಿನಪ್ಪ, ಮುನಿವೆಂಕಟಪ್ಪ, ಪವನ್, ಅರುಣ್ ಕುಮಾರ್, ಹನುಮಂತರಾಜು ಸೇರಿದಂತೆ ದಲಿತ ಮುಖಂಡರು ಸಮುದಾಯದ ಯುವಕರು ಭಾಗಿಯಾಗಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು