LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಜಿಲ್ಲಾಧಿಕಾರಿಗಳಿಂದ ಭೂ ಒತ್ತುವರಿ ತೆರವು ಕಾರ್ಯಾಚರಣೆ ಪರಿಶೀಲನೆ

ದೇವನಹಳ್ಳಿ: ತಾಲೂಕಿನ ಅಣ್ಣೇಶ್ವರ ಗ್ರಾ.ಪಂ.ವ್ಯಾಪ್ತಿಯ ಬೈಚಾಪುರ ಗ್ರಾಮದಲ್ಲಿ ರಾಜಕಾಲುವೆಹದ್ದುಗಿಡದಹಳ್ಳ, ಸ್ಮಶಾನ, ಗುಂಡುತೋಪು, ಖರಾಬು ಜಾಗ ಒತ್ತುವರಿ ತೆರವು ಕಾಯಾಚರಣೆಯನ್ನು ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ್ ಪರಿಶೀಲನೆ ನಡೆಸಿದರು.

ಅವರು ತಾಲೂಕಿನ ಬೈಚಾಪುರ ಗ್ರಾಮದಸರ್ವೇ ನಂ.೧೧೨ ಸರ್ಕಾರಿ ಖರಾಬು, ಸರ್ವೇ ನಂ.೨ ಮತ್ತು ೫ ಗುಂಡುತೋಪು, ಸರ್ವೇನಂ. ೧೧ರಿಂದ ೧೮ ಹದ್ದುಗಿಡದ ಹಳ್ಳದ ನೀರು ಕಾಲುವೆ, ಅಣ್ಣೇಶ್ವರ ಸರ್ವೇನಂ.೮೩, ಬೈಚಾಪುರ ಸರ್ವೆನಂ. ೧೧೯ ಸ್ಮಶಾನ ಒತ್ತುವರಿ ತೆರವು ಕಾಯಾಚರಣೆ ವೇಳೆ ಮಾತನಾಡಿ ತಾಲೂಕಿನ ಕಸಬಾ ಹೋಬಳಿ ಬೈಚಾಪುರ ಗ್ರಾಮದ ಸರ್ವಜನಿಕರಿಂದ ಬಹಳಷ್ಟು ದೂರುಗಳು ಬಂದಿದ್ದರಿಂದ ಖುದ್ದು ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತಹಸೀಲ್ದಾರ್‌ಹಾಗೂ ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸ್ಥಳಗಳ ಗಡಿಯನ್ನು ಗುರ್ತಿಸಲು ಸೂಚನೆ ನೀಡಿದ್ದು ಅದರಂತೆ ಅವರು ಸರ್ವೇ ಮಾಡಿ ಹದ್ದುಗಿಡದ ಹಳ್ಳದ ರೈತರು ಒತ್ತುವರಿ ಮಾಡಿದ್ದರಿಂದ ನಕಾಶೆಯಲ್ಲಿ ಈ ಹಿಂದೆ ಕಾಲುವೆಗಳು, ಹಳ್ಳ ಇದ್ದು ಸರಾಗವಾಗಿ ನೀರು ಹರಿಯಲು ಅನುಕೂಲ ಮಾಡುವ ಉದ್ದೇಶದಿಂದ ನಕಾಶೆ ರಿತ್ಯ ಜಾಗ ಗುರ್ತಿಸಲಾಗಿದೆ, ಆದ್ದರಿಂದ ಒತ್ತುವರಿ ಮಾಡಿರುವ ಗ್ರಾಮಸ್ಥರಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಭವನದ ಭೂದಾಖಲೆಗಳ ಉಪನಿರ್ದೇಶಕ ಸಂತೋಷ್ ಮಾತನಾಡಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದರಾಮಪ್ಪ ಹಾಗೂ ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ಸರ್ವೇ ಹಾಗೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಸರ್ವೇ ಮಾಡಿಸಿ ಜಾಗದ ಗಡಿಯನ್ನು ಗುರ್ತಿಸಿರುತ್ತೇವೆ ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ದಂತೆ ಗಡಿಯನ್ನು ನಕ್ಷೆಯನ್ನು ಗುರ್ತಿಸಿ ಕಲ್ಲುಗಳನ್ನು ನೆಟ್ಟಿರುತ್ತೇವೆ, ಗುಂಡುತೋಪು, ಸ್ಮಶಾನ ಜಾಗವನ್ನು ಸ್ಥಳೀಯ ಅಣ್ಣೇಶ್ವರ ಗ್ರಾಪಂ ಕಾಂಪೋಂಡ್ ನಿರ್ಮಿಸಿ ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಈ ಸಮಯದಲ್ಲಿ ತಹಸೀಲ್ದಾರ್ ಶಿವರಾಜ್ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಹಲವಾರು ಭಾರಿ ಬೇಟಿ ನೀಡಿ ಹದ್ದುಗಿಡದಹಳ್ಳ, ಗುಂಡುತೋಪು, ಸ್ಮಶಾನದ ಜಾಗಗಳನ್ನು ಒತ್ತುವರಿ ಮಾಡಿದ್ದು ಅದನ್ನು ತೆರವು ಮಾಡಲು ಗಡಿಗುರ್ತಿಸಲಾಯಿತು, ಕೆಲವು ರೈತರು ಸಾರ್ವಜನಿಕರು ಇದರ ಬಗ್ಗೆ ತಕರಾರು ತೆಗೆದಿದ್ದು ಅದೆಲ್ಲವನ್ನು ಗಮನಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲು ಗಡಿ ಗುರ್ತಿಸಲಾಯಿತು ಎಂದು ಹೇಳಿದರು.

ಇದೇ ವೇಳೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದರಾಮಪ್ಪ, ಭೂತಪಾಸಕರಾದ ಕೃಷ್ಣೇಗೌಡ, ಸೋಮರೆಡ್ಡಿ, ತಾಲೂಕು ಭೂಮಾಪಕರಾದ, ಗಿರೀಶ್, ಶಿವಣ್ಣ, ಸರ್ವೇಯರ್ ಆದ ಮಂಜುನಾಥ್, ಲೋಕೇಶ್, ನಂದೀಶ್, ರಾಜಸ್ವ ನಿರೀಕ್ಷಕ ಮಹೇಶ್ ಆಚಾರ್, ಪಿಡಿಓ ಗಂಗರಾಜು, ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ್ ಆಚಾರ್, ಗ್ರಾಮ ಸಹಾಯಕ ನಾರಾಯಣಸ್ವಾಮಿ, ರೈತರು, ಗ್ರಾಮಸ್ಥರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು