LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಜ 5ರಂದು 22ನೇ ಚಿತ್ರಸಂತೆ: ಈ ಬಾರಿ ಹೆಣ್ಣು ಮಗುವಿಗೆ ಸಮರ್ಪಣೆ

ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿ ಜನವರಿ 5ರಂದು ಕರ್ನಾಟಕ ಚಿತ್ರಕಲಾ ಪರಿಷತ್​​ನಿಂದ 22ನೇ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ಜ.5ರಂದು ಸಿಎಂ ಸಿದ್ದರಾಮಯ್ಯ ಚಿತ್ರಸಂತೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ರವರೆಗೆ ನಡೆಯಲಿರುವ ಚಿತ್ರಸಂತೆಯಲ್ಲಿ 20 ರಾಜ್ಯಗಳ ಕಲಾವಿದರ ಕಲಾಕೃತಿಗಳ ಅನಾವರಣಗೊಳ್ಳಲಿದೆ. ಚಿತ್ರಸಂತೆಯಲ್ಲಿ ಭಾಗವಹಿಸಲು 3,177 ಕಲಾವಿದರಿಂದ ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಹೆಣ್ಣು ಮಗುವಿಗೆ ಚಿತ್ರ ಸಂತೆ ಸಮರ್ಪಣೆ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಚಿತ್ರಸಂತೆ ಈಗಾಗಲೇ ಸಾಕಷ್ಟು ಜನಪ್ರಿಯ ಗಳಿಸಿದೆ. ಸಾಕಷ್ಟು ಕಲಾವಿದರು ಈ ಚಿತ್ರಸಂತೆಗಾಗಿ ಕಾಯುತ್ತಿರುತ್ತಾರೆ. ಇನ್ನು ಪ್ರತಿವರ್ಷ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ನಡೆಯುವುದರಿಂದ ಜನವರಿ 5ರಂದು ಅದಕ್ಕೆ ಮೀಸಲಾಗಿರುತ್ತದೆ. ಪರ್ಯಾಯ ಮಾರ್ಗಗಳನ್ನು ಸಂಚಾರಿ ಪೊಲೀಸರು ಸೂಚಿಸುತ್ತಾರೆ.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್​​ ಶಂಕರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 22ನೇ ವರ್ಷದ ಚಿತ್ರಸಂತೆ ಕಾರ್ಯಕ್ರಮ ಜ. 5ರಂದು ನಡೆಯಲಿದೆ. ಹೆಣ್ಣು ಮಗು ಶೋಷಣೆ ಆಗುತ್ತಿರುವ ಹಿನ್ನೆಲೆ ಈ ಬಾರಿಯ ಚಿತ್ರಸಂತೆಯನ್ನ ಹೆಣ್ಣು ಮಗುವಿಗೆ ಅರ್ಪಿಸಿದ್ದೇವೆ ಎಂದು ಹೇಳಿದ್ದಾರೆ.

ಹೆಣ್ಣು ಗಂಡುಗೆ ಸಮಾನವಾದ ಹಕ್ಕು ಇದೆ. ಈ ಚಿತ್ರಸಂತೆ ಕಾರ್ಯಕ್ರಮದಲ್ಲಿ ಜನವರಿ 4 ರಂದು ಪ್ರಶಸ್ತಿ ನೀಡಲಾಗುತ್ತದೆ. 5 ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತದೆ. ಸಚಿವ ಹೆಚ್.ಕೆ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನವೆಂಬರ್​​ನಲ್ಲೇ ಕರ್ನಾಟಕ ಚಿತ್ರಕಲಾ ಪರಿಷತ್ತು 2025ರ ಚಿತ್ರಸಂತೆಗೆ ಕಲಾವಿದರಿಂದ ಅರ್ಜಿಗಳಿಗೆ ಆಹ್ವಾನಿಸಲಾಗಿತ್ತು. ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಪಂಜಾಬ್, ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಂಡಿದ್ದಾರೆ.

ಇನ್ನು ಚಿತ್ರಸಂತೆ ಹಿನ್ನೆಲೆ ಜನವರಿ 5 ರಂದು ಕಲಾಭಿಮಾನಿಗಳು ಮತ್ತು ಪ್ರಯಾಣಿಕರು ಸುಲಭವಾಗಿ ಸ್ಥಳವನ್ನು ತಲುಪುವ ನಿಟ್ಟಿನಲ್ಲಿ ಕುಮಾರ ಕೃಪಾ ರಸ್ತೆಗೆ ಬಿಎಂಟಿಸಿ ಬಸ್​ಗಳು ಕೂಡ ಸಂಚರಿಸಲಿವೆ. ಪ್ರತಿ 10 ನಿಮಿಷಗಳಿಗೊಮ್ಮೆ ಬಸ್​​ಗಳಿದ್ದು, ಆ ದಿನದಂದು ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಲಿವೆ. 15 ರೂ. ಟಿಕೆಟ್​ ದರದಲ್ಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST