LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಬೆಂಗಳೂರಿನ ಉದ್ಯಮಿ

ಬೆಂಗಳೂರು: ಉದ್ಯಮಿಯೊಬ್ಬರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಉದ್ಯಮಿ ಕಲಾಲ್ ದತ್ತ(40) ನಿನ್ನೆ(ಜನವರಿ 06) ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದು, ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಸದ್ಯಕ್ಕೆ ಸ್ಥಳಕ್ಕೆ ಹುಳಿಮಾವು ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಹಾಗೇ ಡೆತ್ ನೋಟ್ ನಲ್ಲಿ ಪತ್ನಿಗೆ ಕ್ಷಮೆ ಕೇಳಿದ್ದಾರೆ. ಇನ್ನು ಈ ಸಂಬಂಧ ಮೃತ ಕಲಾಲ್ ದತ್ತ ಸಜಿನಿ, ತಮ್ಮ ಪತಿಯ ಬ್ಯುಸಿನೆಸ್​ ಪಾರ್ಟನರ್​​ ವಿರುದ್ಧ ದೂರು ದಾಖಲಿಸಿದ್ದಾರೆ.

2016 ರಿಂದ ಮೃತ ಕಲಾಲ್ ದತ್ತ ಹಾಗೂ ಎಜಿ ಮರಿಸ್ವಾಮಿ ಎನ್ನುವರು ಸೇರಿಕೊಂಡು ಸಾಯಿ ಫೆಸಿಲಿಟಿ ಸರ್ವೀಸಸ್ ಕಂಪನಿ ನಡೆಸುತ್ತಿದ್ದರು. ಈ ವೇಳೆ ಮರಿಸ್ವಾಮಿ ಸುಮಾರು ನಾಲ್ಕು ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಮೃತ ಉದ್ಯಮಿ ಕಲಾಲ್ ದತ್ತ ಪತ್ನಿ ಸಜಿನಿ ಅವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಹುಳಿಮಾವು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST