LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ತುಮಕೂರಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ-೨೦೨೪ ಪ್ರತಿ ಸ್ಪರ್ಧೆಗೆ ಇಬ್ಬರಿಗೆ ಅವಕಾಶ, ನೋಂದಣಿಗೆ ನ.೧೫ ಕೊನೆ ದಿನ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು (ಕೆಯುಡಬ್ಲೂಜೆ) ತುಮಕೂರು ಜಿಲ್ಲಾ ಸಂಘದ ಆತಿಥ್ಯದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ವಾರ್ಷಿಕ -೨೦೨೪ ಕ್ರೀಡಾಕೂಟವನ್ನು ತುಮಕೂರಿನ ಮಹಾತ್ಮಗಾಂದಿ ಕ್ರೀಡಾಂಗಣದಲ್ಲಿ ನ.೨೪ ರಂದು ಭಾನುವಾರ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಸ್ಪರ್ಧೆಯ ಎಲ್ಲಾ ವಿಭಾಗದಲ್ಲಿ (ಇಲ್ಲಿ ನಮೂದಿಸಿದ ಸ್ಪರ್ಧೆಗಳು ಮಾತ್ರ. ಅದರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ಕ್ರೀಡಾಪಟುಗಳಿದ್ದರೆ ಆದ್ಯತೆ ಕೊಡಿ) ಇಬ್ಬರ ಹೆಸರುಗಳನ್ನು ಜಿಲ್ಲಾ ಸಂಘಗಳು ಪಟ್ಟಿ ಮಾಡಿ ರಾಜ್ಯ ಮಟ್ಟದ ಕ್ರೀಡಾಕೂಟದ ಸ್ಪರ್ಧೆಗೆ ದಿನಾಂಕ ೧೫.೧೧.೨೦೨೪ರೊಳಗೆ ರಾಜ್ಯ ಸಂಘದ ವಿಳಾಸಕ್ಕೆ ಕಳುಹಿಸಿಕೊಡಬೇಕು. ಕಬ್ಬಡ್ಡಿಗೆ ಪ್ರತಿ ಜಿಲ್ಲೆಯಿಂದ ಒಂದು ತಂಡವನ್ನು ಮಾತ್ರ ಕಳುಹಿಸಬೇಕು. ತಾವು ಕಳುಹಿಸುವ ಸ್ಪರ್ಧಿಗಳು ಸಂಘದ ಸದಸ್ಯರಾಗಿರಬೇಕು ಮತ್ತು ವಯಸ್ಸಿನ ದಾಖಲೆಗಳನ್ನು (ಆಧಾರ್, ಡಿಎಲ್, ಮಾರ್ಕ್್ಸ ಕಾರ್ಡ್ ಇತ್ಯಾದಿ) ತಪ್ಪದೇ ತರಬೇಕು. ೧)೪೦ ವರ್ಷದೊಳಗೆ, ೨) ೪೦ ವರ್ಷ ಮೇಲ್ಪಟ್ಟು ೫೦ ವರ್ಷದೊಳಗೆ, ೩) ೫೦ ವರ್ಷ ಮೇಲ್ಪಟ್ಟು. ಹೀಗೆ ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳಿವೆ. ೧೦೦ ಮೀಟರ್ ಓಟ, ೨೦೦ ಮೀಟರ್ ಓಟ, ಲಾಂಗ್ ಜಂಪ್, ಶಾಟ್ ಪುಟ್, ಕಬ್ಬಡ್ಡಿ ವಿಭಾಗದಲ್ಲಿ ಸ್ಪರ್ಧೆಗಳಿವೆ. ಪ್ರತಿ ಸ್ಪರ್ಧೆಗೂ ಜಿಲ್ಲೆಯಿಂದ ಒಬ್ಬರನ್ನು ಕಳುಹಿಸಿಕೊಡಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಜಿಲ್ಲಾ ಸಂಘದಿAದಲೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟ ಯಶಸ್ವಿಗೆ ಕೈಜೋಡಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ವಿನಂತಿಸಿದ್ದಾರೆ.
ವಸತಿ ಅಗತ್ಯವಿದ್ದವರು ಮತ್ತು ಹೆಚ್ಚಿನ ಮಾಹಿತಿಗಾಗಿ ತುಮಕೂರು ಜಿಲ್ಲಾ ಸಂಘವನ್ನು ಸಂಪರ್ಕಿಸಬಹುದು. ಚಿ.ನೀ.ಪುರುಷೋತ್ತಮ, ಅಧ್ಯಕ್ಷರು- ೯೮೮೦೭೪೨೬೮೦, ಟಿ.ಇ.ರಘುರಾಮ್, ಪ್ರಧಾನ ಕಾರ್ಯದರ್ಶಿ -೯೫೩೮೭೪೪೬೫೬, ಸತೀಶ್ ಹಾರೊಗೆರೆ-ಕ್ರೀಡಾ ಸಂಚಾಲಕ - ೮೯೭೦೭೦೫೧೯೬, ಯಶ್ ಪದ್ಮನಾಬ್- ೮೯೭೧೧೧೪೧೪೮

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು