LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ದರೋಡೆ ಪ್ರಕರಣ: ಶೀಘ್ರ ಆರೋಪಿಗಳ ಬಂಧನ

ಬೆಂಗಳೂರು: ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ ಮತ್ತು ಬೀದರ್ ಎಟಿಎಂ ದರೋಡೆ ಪ್ರಕರಣದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದು, ಶೀಘ್ರವೇ ಆರೋಪಿಗಳ ಬಂಧನ ಮಾಡೋದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಗಳೂರು ಮತ್ತು ಬೀದರ್ ಎರಡೂ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನ ಬಂಧನ ಮಾಡ್ತೀವಿ. ಮಂಗಳೂರು ಕೇಸ್‍ನಲ್ಲಿ ಎರಡು ಕಾರು ಬಂದಿರೋ ಮಾಹಿತಿ ಇದೆ. ಎರಡು ಕೇಸ್ ನಲ್ಲಿ ನಿಖರ ಮಾಹಿತಿಗಳನ್ನ ಪೊಲೀಸರು ಕಲೆ ಹಾಕಿದ್ದಾರೆ. ಈಗಾಗಲೇ 4-5 ಟೀಂಗಳನ್ನ ವಿವಿಧ ರಾಜ್ಯಗಳಿಗೆ ಕಳಿಸಲಾಗಿದೆ. ಎರಡು ಪ್ರಕರಣದಲ್ಲಿ ಬೇರೆ ರಾಜ್ಯದವರು ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.

ಯಾರು ಏನು? ಎಲ್ಲಿಯವರು ಅಂತ ತನಿಖೆಯಿಂದ ಗೊತ್ತಾಗಲಿದೆ ಎಂದರು.ಈಗಾಗಲೇ ಗೃಹ ಇಲಾಖೆಯಿಂದ ಬ್ಯಾಂಕ್ ಮತ್ತು ATM ಗಳಿಗೆ ಯಾವ ರೀತಿ ಭದ್ರತೆ ಇರಬೇಕು ಅಂತ ರೂಲ್ಸ್ ಕೊಟ್ಡಿದ್ದೇವೆ. ಎಲ್ಲಾ ATM, ಬ್ಯಾಂಕ್ ಗಳಿಗೆ ಸೂಚನೆ ಹೋಗುತ್ತದೆ.ATMಗೆ ಹಣ ಹಾಕೋಕೆ ಬ್ಯಾಂಕ್ ನವರು ಕಾಂಟ್ರಾಕ್ಟ್ ಅವರಿಗೆ ಕೊಟ್ಟಿರುತ್ತಾರೆ. ಂಖಿಒಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಕಾರ್ಡ್ ಇರಬೇಕು ಅಂತ ನಿಯಮ ಈಗಾಗಲೇ ಇದೆ.

ಬೀದರ್ ಘಟನೆ ಆದಾಗ ಆರ್ಮ್ ಗಾರ್ಡ್ ಇರಲಿಲ್ಲ. ಹೀಗಾಗಿ ಘಟನೆ ಆಗಿದೆ. ಮಂಗಳೂರು ಬ್ಯಾಂಕ್ ದರೋಡೆಯಾದಾಗಲು ಕೂಡಾ ಗಾರ್ಡ್ ಇರಲಿಲ್ಲ ಅಂತ ಮಾಹಿತಿ ಇದೆ. ಹೀಗಾಗಿ ಇಲಾಖೆ ಕೊಟ್ಟ ರೂಲ್ಸ್‍ಗಳು ಲ್ಯಾಪ್ಸ್ ಆಗಬಾರದು. ಇಂತಹ ಅವಕಾಶಗಳಿಗೆ ಅಕ್ರಮ ಮಾಡೋರು ಕಾಯ್ತಾ ಇರುತ್ತಾರೆ. ಹೀಗಾಗಿ ಬ್ಯಾಂಕ್‍ನವರು ನಮ್ಮ ಜೊತೆ ಸಹಕಾರ ಕೊಡಬೇಕು ಅಂತ ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು