LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chamarajanagara

ನಗರದ ಸ್ವಚ್ಚತೆಗಾಗಿ ಸ್ವಚ್ಚತಾ ಪ್ರಜ್ಞೆ ನಮ್ಮೆಲ್ಲರಲ್ಲೂ ಮೂಡಬೇಕು: ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ನಗರ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ನಮ್ಮ ಮನೆ, ನಮ್ಮ ಬೀದಿ, ನಮ್ಮ ನಗರ ಎನ್ನುವ ಸಾಮೂಹಿಕ ಸ್ವಚ್ಚತಾ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಆಗಮಾತ್ರ ನಗರ, ಪಟ್ಟಣಗಳು ಸ್ವಚ್ಚ, ಸುಂದರ ನಗರಗಳಾಗಲು ಸಾಧ್ಯವಾಗಲಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರಸಭಾ ವ್ಯಾಪ್ತಿಯ ರಾಮಸಮುದ್ರದ 29 ವಾರ್ಡ್‍ನಸುಬೇದಾರ್ ಕಟ್ಟೆ ಬಳಿ ಇಂದು ಸ್ವಚ್ಚ ಸರ್ವೇಕ್ಷಣ್-2024ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಳ್ಳ ಲಾಗಿದ್ದ ‘ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಮಾಡಿಕೊಡಲು
ಹಸಿಕಸ, ಒಣಕಸದ ಡಸ್ಟ್ ಬಿನ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರ, ಪಟ್ಟಣಗಳು ಸ್ವಚ್ಚತೆಯಿಂದ ಕೂಡಿರಲು ಅಲ್ಲಿನ ನಾಗರಿಕರಾದ ನಾವೆಲ್ಲರೂ ಸ್ವಚ್ಚತಾ ನಿಯಮಗಳನ್ನು ಪಾಲಿಸಬೇಕು. ಸ್ವಚ್ಚತೆಯ ಅರಿವು ಪ್ರತಿಯೊಬ್ಬರಲ್ಲೂ ಬರಬೇಕು.ಅದರಲ್ಲೂ ಮಹಿಳೆಯರು ಸ್ವಚ್ಚತೆ ಬಗ್ಗೆ ಹೆಚ್ಚು ಜಾಗೃತರಾಗ ಬೇಕು. ನಮ್ಮ ನೆರೆಜಿಲ್ಲೆ ಮೈಸೂರು ಸ್ವಚ್ಚತೆಗೆ ಹೆಸರು ಮಾಡಿದೆ. ಅದೇ ಮಾದರಿಯಲ್ಲಿ ನಾವು ಸಹ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಮಹಿಳೆಯರು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚತೆಗೆ ಮುಂದಾಗಬೇಕು. ಪರಿಸರ ಸ್ವಚ್ಚತೆಯಿಂದ ಸಾಂಕ್ರಾಮಿಕ ರೋಗಗಳ ತಡೆ ಸಾಧ್ಯವಾಗಲಿದೆ.

ಬಯಲು ಶೌಚಮುಕ್ತ ನಗರವಾಗಲು ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳಬೇಕು. ನಗರದ ಸ್ವಚ್ಚತೆ ಕಾಪಾಡುವುದು ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ನಗರಸಭಾ ಅಧ್ಯಕ್ಷರಾದ ಎಸ್. ಸುರೇಶ್ ಅವರು ಮಾತನಾಡಿ ಸ್ವಚ್ಚಭಾರತ್ ಅಭಿಯಾನದಡಿ ಮನೆಮನೆ ಕಸ ಸಂಗ್ರಹಣೆ
ಗಾಗಿ ಹಸಿಕಸ, ಒಣಕಸದ ತ್ಯಾಜ್ಯ ವಿಂಗಡಣೆ ಮಾಡಿಕೊಡಲುಡಸ್ಟ್‍ಬಿನ್ ವಿತರಣಾ ಕಾರ್ಯಕ್ರಮವನ್ನು 29ನೇ ವಾರ್ಡ್‍ನಿಂದ ಹಮ್ಮಿಕೊಳ್ಳಲಾಗಿದ್ದು, ನಗರವಾಸಿಗಳು ಸ್ವಚ್ಚತೆಗೆ ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು.

ನಗರಸಭಾ ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಚಾಮರಾಜನಗರ ನಗರಸಭಾ ವ್ಯಾಪ್ತಿಯ 31 ವಾರ್ಡ್‍ಗಳಿಂದ 20 ಟನ್ ಕಸಸಂಗ್ರಹವಾಗುತ್ತಿದ್ದು, ಪ್ರತಿ ಮನೆಮನೆಗಳಲ್ಲಿನ ಮೂಲತ್ಯಾಜ್ಯನಿರ್ವಹಣೆಗಾಗಿ ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿಮನೆಬಾಗಿಲಿಗೆ ಬರುವ ನಗರಸಭೆಯ ಕಸಸಂಗ್ರಹಣೆಯ ವಾಹನಕ್ಕೆ ನೀಡಬೇಕು. ಇದಕ್ಕಾಗಿ ಹಸಿರು ಬಣ್ಣದ ಹಸಿಕಸ ಡಬ್ಬಿ ಹಾಗೂ ನೀಲಿ ಬಣ್ಣದ ಒಣಕಸ ಡಬ್ಬವನ್ನು ಇಂದು ಸಾಂಕೇತಿಕವಾಗಿ ವಿತರಿಸಲಾಗುತ್ತಿದೆ. ನಗರದ ಸ್ವಚ್ಚತೆಗೆ ನಾಗರಿಕರು ಕೈಜೋಡಿಸುವಂತೆ ಮನವಿ ಮಾಡಿದರು.

ನಗರಸಭಾ ಉಪಾಧ್ಯಕ್ಷರಾದ ಮಮತ, 29ನೇ ವಾರ್ಡ್ ಸದಸ್ಯರಾದ ಎಂ.ವಿ. ಸುಧಾ ಅವರು ಮೂಲತ್ಯಾಜ್ಯ ನಿರ್ವಹಣೆಗಾಗಿ ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ ನೀಡುವುದರ ಉಪಯೋಗಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇದೇ ವೇಳೆ ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ ನೀಡುವ ಹಸಿರು ಹಾಗೂ ನೀಲಿ ಬಣ್ಣದ ಒಣಕಸ ಡಬ್ಬವನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.ನಗರಸಭೆಯ ಯೋಜನಾಧಿಕಾರಿ ವೆಂಕಟ್‍ನಾಯಕ್, ಸಹಾಯಕ ಕಾರ್ಯಪಾಲಕ ಪರಿಸರ ಅಭಿಯಂತರರಾದ ರೂಪ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸುಷ್ಮಾ, ನಾರಾಯಣ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು