ಖ್ಯಾತ ನಿರ್ಮಾಣ ಸಂಸ್ಥೆ ‘ಲಿಯೋ ವಿಷನ್’ ತನ್ನ ಐದನೇ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ. ಈ ವಿಶೇಷ ಚಿತ್ರದ ಮೂಲಕ ಬಹುಭಾಷಾ ನಟಿ ನಿತ್ಯಾ ಮೆನನ್ ಅವರು ತಮ್ಮ ‘ಕೇಯೂರಿ ಪ್ರೊಡಕ್ಷನ್ಸ್ ಪ್ರೆöÊವೇಟ್ ಲಿಮಿಟೆಡ್’ ಬ್ಯಾನರ್ ಅಡಿಯಲ್ಲಿ ಸಹ- ನಿರ್ಮಾಪಕಿಯಾಗಿ ಕೈಜೋಡಿಸಿದ್ದು, ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.ಫ್ಯಾಂಟಸಿ ಡಾರ್ಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ವಿಶಿಷ್ಟ ಚಿತ್ರದಲ್ಲಿ ನಿತ್ಯಾ ಮೆನನ್ ಅವರೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ‘ಡಿ ಕೆ’ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ದೇಶಕ ವಿಕ್ರಮ್ ಕೆ. ಕುಮಾರ್ ಅವರು ಈ ಯೋಜನೆಗೆ ‘ಕ್ರಿಯೇಟಿವ್ ಪ್ರೊಡ್ಯೂಸರ್’ ಆಗಿ ಜೋಡಿಸಿಕೊಂಡಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.ಚಿತ್ರಕ್ಕೆ ಎ. ಶಕ್ತಿವೇಲ್ ಅವರ ಛಾಯಾಗ್ರಹಣ ಹಾಗೂ ರಿಚರ್ಡ್ ಕೆವಿನ್ ಅವರ ಸಂಕಲನವಿರಲಿದೆ. ಲಿಯೋ ವಿಷನ್ ಸಂಸ್ಥೆಯ ವಿ. ಎಸ್. ರಾಜ್‌ಕುಮಾರ್ ಮತ್ತು ಕೇಯೂರಿ ಪ್ರೊಡಕ್ಷನ್ಸ್ ಸಂಸ್ಥೆಯ ನಿತ್ಯಾ ಮೆನನ್ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅತ್ಯುತ್ತಮ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗುತ್ತಿದೆ.ಲಿಯೋ ವಿಷನ್, ಕೇಯೂರಿ ಪ್ರೊಡಕ್ಷನ್ಸ್, ನಿತ್ಯಾ ಮೆನನ್, ಡಿ ಕೆ ಹಾಗೂ ವಿಕ್ರಮ್ ಕೆ. ಕುಮಾರ್ ಅವರ ಈ ಅಪರೂಪದ ಸಹಯೋಗವು ಪ್ರೇಕ್ಷಕರಿಗೆ ಅದ್ಭುತವಾದ ಅನುಭವವನ್ನು ನೀಡಲಿದೆ. ಈ ಸಿನಿಮಾವು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದ್ದು, ಶೀರ್ಷಿಕೆ ಮತ್ತು ಇತರೆ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.