LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ನಾಡಿನ ಕಲೆ, ಸಂಸ್ಕøತಿ, ಜನಜೀವನದ ಬಗ್ಗೆ ಅರಿವು ಮೂಡಿಸುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ: ಡಾ: ಬಾಲಗುರುಮೂರ್ತಿ

ಹೊಸಕೋಟೆ: ನಾಡಿನ ಕಲೆ, ಸಂಸ್ಕøತಿ, ಜನಜೀವನದ ಬಗ್ಗೆ ಅರಿವು ಮೂಡಿಸುವಲ್ಲಿ ನಾಟಕಗಳು ಸಹಕಾರಿಯಾಗಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಡಾ: ಬಾಲಗುರುಮೂರ್ತಿ ಹೇಳಿದರು.ಅವರು ಸಮೀಪದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಜನಪದರುಸಾಂಸ್ಕøತಿಕ ವೇದಿಕೆ ವತಿಯಿಂದ 84ನೇ ರಂಗಮಾಲಿಕೆ ಅಭಿಯಾನದಡಿ ಏರ್ಪಡಿಸಿದ್ದ ರಂಗಾಯಣ ತಂಡದ ಕಲಾವಿದರ ಅಭಿನಯದ “ಗೋರ್‍ಮಾಟಿ” ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರಕಾರದ ವಿವಿಧ ಯೋಜನೆಗಳಿಂದ ಅಲೆಮಾರಿಗಳ ಅಭಿವೃದ್ಧಿ ಸಾಧ್ಯವಾಗಿದ್ದು ಅವರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಅಲೆಮಾರಿ ಜನಾಂಗಗಳ ಕುರಿತು ಆಳವಾಡಿ ಅಧ್ಯಯನ ನಡೆಸಿರುವ ಇವರು, ಬುಡ್ಗಜಂಗಮ ಸಮಾಜವನ್ನು ಪ್ರಕಟವಾಗಿರುವ “ಬುಡ್ಗನಾದ” ನಾಟಕದ ಲೇಖಕರೂ ಆದ ಇವರು ಮುಂದುವರೆದು ಮಾತನಾಡಿ ಇವರ ಸಮೃದ್ಧ ಸಾಂಸ್ಕøತಿಕ ಪರಂಪತೆಯು ಜಗತ್ತಿಗೆ ಅನಾವರಣಗೊಳ್ಳಬೇಕಾದ ಅಗತ್ಯವಿದೆ ಎಂದರು.

ಈ ದಿಶೆಯಲ್ಲಿ ಇಂತಹ ನಾಟಕ ಪ್ರದರ್ಶನಗಳು ಸಮುದಾಯದಲ್ಲಿ ಇಂತಹ ಜನಾಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಜನಪದರು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ಕಾಟಂನಲ್ಲೂರ್ ಮಾತನಾಡಿ ಬಂಜಾರ ಪಂಡಗದ ಸೂಕ್ಷ್ಮಾತಿಸೂಕ್ಷ್ಮ ಬದುಕಿನ ವಿವರಗಳನ್ನುನಾಟಕವಾಗಿಸಿ “ಗೋರ್ ಮಾಟಿ” ಶಿರೋನಾಮೆಯಲ್ಲಿ ಡಾ: ಶಿರಗಾನಹಳ್ಳಿ ಶಾಂತನಾಯಕ್ ರಚಿಸಿರುವ ಮತ್ತು ನಿರ್ದೇಶಕ ಬಸವಲಿಂಗಯಯನವರ ಶ್ರಮ ಅಭಿನಂದನಾರ್ಹ ಎಂದರು.

ನಾಟಕದ ಕಥಾ ವಸ್ತುವು ಅನೇಕ ಕನ್ನಡ ಲೇಖಕರ ಬರಹಗಳ ಆಧಾರವಾಗಿದ್ದು ಅವರಲ್ಲಿ ಲಮಾಣಿ ಲೇಖಕರೇ ಇರುವುದು ಒಂದು ಹೆಗ್ಗಳಿಕೆ ಎಂದು ತಿಳಿಸಿದರು. ವೇದಿಕೆಯು ಕಳೆದ 7 ವರ್ಷಗಳಿಂದ ನಿರಂತರವಾಗಿ ಪ್ರತಿ ತಿಂಗಳ ಎರಡನೇ ಶನಿವಾರಗಳಂದು ರಾಜ್ಯದ ಖ್ಯಾತ ರಂಗತಂಡಗಳ ಕಲಾವಿದರಿಂದ ಸಾಮಾಜಿಕ ಜಾಗೃತಿ ಮೂಡಿಸುವಂತಹ ವಿಭಿನ್ನವಾದ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಂಜಾರ ಸಮುದಾಯದ ಉಡುಗೆಯಲ್ಲಿ ಮಹಿಳೆಯರ ನೃತ್ಯಗಳು, ಸಾಂಸ್ಕøತಿಕ ಇತಿಹಾಸವನ್ನು ಪ್ರತಿಬಿಂಬಿಸುವ ದೃಶ್ಯ, ಹಾಡು, ಹಸೆ, ವಿವಾಹ, ಪ್ರಸವದಂತಹ ಅಲೆಮಾರಿ ಜನರ ಕಷ್ಟ ಸುಖಗಳನ್ನು ಹಲವಾರು ಆಯಾಮಗಳಲ್ಲಿ ಪ್ರಸ್ತುತಪಡಿಸಿದ್ದು ಸಭಿಕರ ಮನಸೂರೆಗೊಂಡವು.ತಮಟೆ, ಡೋಲು, ನಗಾರಿ ವಾದ್ಯಗಳ ಮೇಳ ಹಲವಾರು ದೃಶ್ಯಗಳಲ್ಲಿ ಪ್ರೇಕ್ಷಕರು ಸ್ವತಃ ತಾವೇ ಎದ್ದು ಕುಣಿಯಲು ಪ್ರೇರೇಪಿಸಿತು. ಉತ್ತಮವಾದ ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ರಂಗಪರಿಕರಗಳು, ವಿಶೇಷವಾಗಿ ಲಂಬಾಣಿ ಹೆಂಗೆಳೆಯರ ವೇಷಭೂಷಣಗಳು. ದೃಶ್ಯಗಳನ್ನು ವರ್ಣರಂಜಿತಗೊಳಿಸಿತು.

ನಾಟಕವನ್ನು ವೀಕ್ಷಿಸಿದ ಪ್ರಾಯೋಜಕರು, ಸಮಾಜ ಸೇವಕರಾದ ವಳಗೆರೆಪುರದ ವಿ.ಎನ್. ವೆಂಕಟೇಶ್ ರವರು ನಾಟಕದ ನಿರ್ದೇಶಕರನ್ನು, ನಟರನ್ನು, ತಾಂತ್ರಿಕ ವರ್ಗದವರನ್ನು ಅಭಿನಂದಿಸಿದರು.ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ನಾಟಕದಬಗ್ಗೆ ಮತ್ತಷ್ಟು ಪ್ರಯೋಗಗಳನ್ನು ನಡೆಸಿ ಸೂತ್ರದಾರರಿಂದ ಸ್ಪಷ್ಟ ನುಡಿಗಳಿಂದ ಹಲವು ಅಂಶಗಳನ್ನು ಪ್ರದರ್ಶಿಸಿದ್ದಲ್ಲಿ ಇನ್ನೂ ಹೆಚ್ಚುಪರಿಣಾಮಕಾರಿಯಾಗಲಿತ್ತು ಎಂದು ಅನಿಸಿಕೆ  ವ್ಯಕ್ತಪಡಿಸಿದರು. ಜನಪದರು ಸಾಂಸ್ಕøತಿಕ ವೇದಿಕೆಯ ಪದಾಧಿಕಾರಿಗಳಾದ ದೊಡ್ಡಬನ ಹಳ್ಳಿ ಸಿದ್ಧೇಶ್ವರ, ಎಂ.ಸುರೇಶ್, ಚಲಪತಿ, ಶಿವಕುಮಾರ್ ಇನ್ನಿತರರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು