LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನಾಳೆ ತೆರೆಗೆ `ಸಂತೋಷ ಸಂಗೀತ'

ಪ್ರೀತಿ, ಬದ್ಧತೆ, ಮತ್ತು ಜೀವನದ ಆವಶ್ಯಕ ನೈತಿಕತೆಗಳ ಹೃದಯಸ್ಪರ್ಶಿ ಕಥೆಯ "ಸಂತೋಷ ಸಂಗೀತ" ಚಿತ್ರ ಈ ವಾರ ನವೆಂಬರ್ ೮ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಪ್ರೀತಿಯು ತನ್ನ ನಿಜವಾದ ಬಣ್ಣಗಳಲ್ಲಿ ಎತ್ತಿ ಹಿಡಿಯಲ್ಪಟ್ಟಿದೆ. ಚಿತ್ರವು ಪ್ರೀತಿಯ ಶ್ರೇಷ್ಠತೆ, ಬದ್ಧತೆ ಹಾಗೂ ಸಂಬAಧಗಳ ಮೌಲ್ಯವನ್ನು ಶ್ರದ್ಧೆಯಿಂದ ತೋರಿಸುತ್ತದೆ.
ಸಂತೋಷ ಸಂಗೀತ ಚಿತ್ರದಲ್ಲಿ ನಿರ್ಧಾರಗಳ ಪರಿಣಾಮವನ್ನು ಹತ್ತಿರದಿಂದ ನೋಡುತ್ತೇವೆ. ಅಹಂ ಮತ್ತು ಸ್ವಾರ್ಥದ ತಪುö್ಪ ನಿರ್ಧಾರಗಳು, ಪ್ರೀತಿಯ ನಾಜೂಕು ಸಂಬAಧವನ್ನು ಹೇಗೆ ಹಾಳು ಮಾಡುತ್ತವೆ ಮತ್ತು ವ್ಯಕ್ತಿಯ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ ಎಂಬುದನ್ನು ಇದು ಮನೋವಿಚಾರಶೀಲ ರೀತಿಯಲ್ಲಿ ತೋರಿಸುತ್ತದೆ.
ಈ ಚಿತ್ರವು ಪ್ರೀತಿಯು ತಾತ್ಕಾಲಿಕ ನಿರ್ಧಾರಗಳ ಸುಳಿಯಲ್ಲಿ ಸಿಕ್ಕಿದಾಗ ಅದನ್ನು ಎದುರಿಸುವ ಬಗೆ ಮತ್ತು ಬದ್ಧತೆಯ ಪ್ರಾಮುಖ್ಯತೆಯ ಬಗ್ಗೆ ಒಂದು ದೀಪ್ತಿಕಾರ ಸಂದೇಶವನ್ನು ಹೊಂದಿದೆ. ಪ್ರೀತಿ ಮತ್ತು ಸಂಬAಧದ ನಡುವಣ ಎಚ್ಚರಿಕೆಯ ಅಂಶಗಳು ಪ್ರೀತಿಯ ನಿಜವಾದ ಮೌಲ್ಯವನ್ನು ತೋರಿಸುತ್ತವೆ. ಸತ್ಕಥೆ, ಗಟ್ಟಿಯಾದ ಸಂಭಾಷಣೆ ಮತ್ತು ಜೀವನಕ್ಕೆ ಪಾಠ ನೀಡುವ ಕಥಾಹಂದರ ಎಲ್ಲವನ್ನೂ ಇದು ಒಳಗೊಂಡಿದೆ ಎಂದು ನಿರ್ದೇಶಕ ಸಿದ್ದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ನಾಯಕ - ನಾಯಕಿಯಾಗಿ ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಟಿಸಿದ್ದಾರೆ. ನಕ್ಷತ್ರ, ದೊಡ್ಡಣ್ಣ, ಅವಿನಾಶ್, ಲಯಕೋಕಿಲ, ಮಡೆನೂರ್ ಮನು, ಮಿಮಿಕ್ರಿ ಗೋಪಿ, ವಾಣಿ, ಸೀತಾ ಕೋಟೆ, ಸೂರ್ಯ ಕಿರಣ್, ಅಮಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿರ್ದಶಕ ಸಿದ್ದು ಅವರೆ "ಸಂತೋಷ ಸಂಗೀತ" ಚಿತ್ರಕ್ಕೆ ಕಥೆ ಬರೆಯುವುದರೊಂದಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ವಿನಯ್ ಯದುನಂದನ್ ಸಂಕಲನ, ವಿಕ್ರಮ್, ಚೇತನ್ ಸಾಹಸ ನಿರ್ದೇಶನ ಹಾಗೂ ಹರಿಕೃಷ್ಣ, ಸತೀಶ್ ಕೃಷ್ಣ ಶೆಟ್ಟಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು