LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆ

2027ರ ಜನವರಿ 8ಕ್ಕೆ ಗ್ರ್ಯಾಂಡ್ ರಿಲೀಸ್


‘ಹನು-ಮಾನ್’ ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಕ್ರಿಯೇಟಿವ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಅವರ ‘ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್’  ಅಡಿಯಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಪೌರಾಣಿಕ ದೃಶ್ಯ ವೈಭವದ ಚಿತ್ರ ‘ಮಹಾಕಾಳಿ’ಯ ಮೊದಲ ಅಧಿಕೃತ ಗ್ಲಿಂಪ್ಸ್ ಬಿಡುಗಡೆಯಾಗಿದೆ. `#ಶುಕ್ರಚಾರ್ಯಸ್ ವಾರ್‌   ಕ್ರೈಂ  ಹೆಸರಿನಲ್ಲಿ ಬಿಡುಗಡೆಯಾಗಿರುವ ಈ 2 ನಿಮಿಷ 55 ಸೆಕೆಂಡುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾ 2027ರ ಜನವರಿ 8ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.ಬಿಡುಗಡೆಯಾಗಿರುವ ಗ್ಲಿಂಪ್ಸ್ ಧರ್ಮ ಮತ್ತು ಅಧರ್ಮದ ನಡುವಿನ ಪ್ರಬಲ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ. ಅಸುರರ ಪರಮಗುರು ಶುಕ್ರಚಾರ್ಯರ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಗುರುತೇ ಸಿಗದಂತಹ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪ್ರಮುಖ ಆಕರ್ಷಣೆಯಾಗಿದೆ. ಅವರ ತೀಕ್ಷ÷್ಣ ನೋಟ, ಮೈನವಿರೇಳಿಸುವ ಸ್ಕಿçÃನ್ ಪ್ರೆಸೆನ್ಸ್ ಮತ್ತು “ಅಂತ್ಯ ಆರಂಭವಾಗುತ್ತದೆ” ಎಂಬ ಸಂದೇಶ ಇಡೀ ಜಗತ್ತಿನ ಭವಿಷ್ಯವನ್ನು ನಿರ್ಧರಿಸುವ ದೈವಿಕ ಸಂಘರ್ಷದ ಗಾಂಭೀರ್ಯವನ್ನು ಎತ್ತಿಹಿಡಿದಿದೆ. ಇದರೊಂದಿಗೆ ನಟಿ ಶ್ರಿಯಾ ರೆಡ್ಡಿ ಅವರ ಇರುವಿಕೆಯು ಕಥೆಯ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.ಉನ್ನತ ಗುಣಮಟ್ಟದ ವಿಶ್ಯುವಲ್ ಎಫೆಕ್ಟ್÷್ಸ (ಗಿಈಘಿ), ಅದ್ದೂರಿ ಮೇಕಿಂಗ್ ಮೂಲಕ ‘ಮಹಾಕಾಳಿ’ ಚಿತ್ರವು ಭಾರತೀಯ ಇತಿಹಾಸ ಮತ್ತು ಪುರಾಣಗಳನ್ನು ಅಂತರರಾಷ್ಟಿçÃಯ ಮಟ್ಟದ ದೃಶ್ಯಕಾವ್ಯವನ್ನಾಗಿ ಪರಿವರ್ತಿಸುವ ಸುಳಿವು ನೀಡಿದೆ. ಆರ್.ಕೆ. ದುಗ್ಗಲ್ ಪ್ರಸ್ತುತಿಯಲ್ಲಿ, ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ದು ಗ್ಗಲ್ ಈ ಬೃಹತ್ ಚಿತ್ರವನ್ನು ನಿರ್ಮಿಸುತ್ತಿದ್ದು, ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನ ಮಾಡುತ್ತಿದ್ದಾರೆ.ಚಿತ್ರದಲ್ಲಿ ಭೂಮಿ ಶೆಟ್ಟಿ, ಅಕ್ಷಯ್ ಖನ್ನಾ, ಶ್ರಿಯಾ ರೆಡ್ಡಿ, ರೋಹಿತ್ ಸರಾಫ್ ಅವರೊಂದಿಗೆ ಖುಷ್ಬೂ ಸುಂದರ್, ಸಮುದ್ರಖಣಿ, ರಾಕೇಶ್ ಬೇಡಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಮತ್ತು ಬಬ್ಲೂ ಪೃಥ್ವಿರಾಜ್ ಸೇರಿದಂತೆ ಬಹುಭಾಷೆಯ ದೊಡ್ಡ ತಾರಾಗಣವೇ ನಟಿಸಿದೆ. ತಾಂತ್ರಿಕ ವಿಭಾಗದಲ್ಲಿ ಸ್ಮರಣ್ ಸಾಯಿ ಸಂಗೀತ ನಿರ್ದೇಶನವಿದ್ದು, ಸುರೇಶ್ ರಗಟು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶ್ ಅಭಿನಯದ ಟಾಕ್ಸಿಕ್ ಯಶಸ್ವಿ ಪ್ರದರ್ಶನಚಿಂತಾಮಣಿಯಲ್ಲಿ 1.95 ಲಕ್ಷ ಮತದಾರರ ಮಾಹಿತಿ ಡಿಜಿಟಲೀಕರಣಧೋನಿಗೆ ಶಾಕ್ ಕೊಟ್ಟ CSK: ಶೇ.25 ಪಾಲುದಾರಿಕೆ ಕೇಳಿದ ಕ್ಯಾಪ್ಟನ್ ಕೂಲ್3ನೇ ದಿನ ಮಿಂಚಿದ ಪ್ರಸಿದ್ಧ್, ಸುತಾರ್! ಶ್ರೀಲಂಕಾಗೆ ಮತ್ತೆ ಆಸರೆಯಾಗಿ ನಿಂತ ದಿನುಷಾ: ರೋಚಕ ಘಟ್ಟದತ್ತ 4ನೇ ದಿನ31,436 ಹೆಸರು ಕೈಬಿಟ್ಟು ಕರಡು ಮತದಾರರ ಪಟ್ಟಿ ಪ್ರಕಟಎಸ್ಸೆಲ್ ಗ್ರೂಪ್ ಶತಮಾನೋತ್ಸವ ಜೀ ಕನ್ನಡ ಭಾಗಿ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆಚಾಮರಾಜನಗರ ಜಿಲ್ಲೆಯಲ್ಲಿ 7,91,949 ಮತದಾರರು ಕೋಮಲ್ ಕುಮಾರ್-ಸೋನಾಲ್ ಮೊಂತೆರೊ ಜೋಡಿಯ ಹಾಗೂ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ  ನಟಿಸಿರುವ “ರೋಲೆಕ್ಸ್” ಚಿತ್ರದ ಟೀಸರ್ ಬಿಡುಗಡೆ ಜಾಂಬಿ ರೆಡ್ಡಿ 2 NXT LVL: