ಬಾಲಿವುಡ್ ನಟಿ ನೋರಾ ಫತೇಹಿ ವಿರುದ್ಧ ವಿಮಾನಯಾನ ಕಂಪನಿ ಡ್ಯೂನ್ಸ್ ಏವಿಯೇಷನ್ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ. ತಮ್ಮ ಚಾರ್ಟರ್ಡ್ ವಿಮಾನದ ಬಗ್ಗೆ ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಕಂಪನಿ ಆರೋಪಿಸಿದೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಂಬೈ-ಜೈಪುರ ಪ್ರಯಾಣದ ವೇಳೆ ನೋರಾ ಫತೇಹಿ ಸೆಸ್ನಾ ಸೈಟೇಶನ್ ಸಿಜೆ2 ವಿಮಾನದೊಳಗೆ ವಿಡಿಯೋ ರೆಕಾರ್ಡ್ ಮಾಡಿದ್ದರು. ಈ ವಿಡಿಯೋಗಳಲ್ಲಿ ವಿಮಾನವನ್ನು `ಲೆಗೊ ವಿಮಾನ’ (ಆಟಿಕೆಯಂತಿರುವ ವಿಮಾನ) ಎಂದು ಕರೆದಿದ್ದರು.ಈ ವಿಡಿಯೋಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ನೋರಾಗೆ ಸಾಮಾಜಿಕ ಮಾಧ್ಯಮದಲ್ಲಿ ಕೋಟ್ಯಂತರ ಅನುಯಾಯಿಗಳಿರುವುದರಿಂದ ಅವರ ಕಾಮೆಂಟ್‌ಗಳು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿವೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ.ಈ ಪೋಸ್ಟ್ಗಳಿಂದ ಬುಕಿಂಗ್‌ಗಳು ರದ್ದಾಗಿದ್ದು, ಒಟ್ಟಾರೆ ಬುಕಿಂಗ್‌ನಲ್ಲಿ ಶೇಕಡಾ 15ರಿಂದ 20ರಷ್ಟು ಕುಸಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಕಂಪನಿಯನಷ್ಟವಾಗಿದೆ ಎಂದು ಆರೋಪಿಸಲಾಗಿದೆ.