LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಪಾರ್ಟಿಗಳಿಗೆ ಕಾಡು ಪ್ರಾಣಿಗಳ ಸಪ್ಲೈ ಮಾಡುತ್ತಿದ್ದವರ  ಬಂಧನ

ನೆಲಮಂಗಲ: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳ ವಿಶೇಷ ಕಾರ್ಯಚರಣೆ ಮಾಡಿ ನೆಲಮಂಗಲದ ಶಾರ್ಪ್ ಶೂಟರ್​​ ಶ್ರೀನಿವಾಸ್(46), ಹನುಮಂತರಾಜು (44), ಮತ್ತು ರಾಮನಗರದ ಮುನಿರಾಜು(38) ಬಂಧಿತರು.

ಅರಣ್ಯಾಧಿಕಾರಿಗಳನ್ನು ಕಂಡು ಥಾರ್ ಜೀಪ್​​ನಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದರು. 6 ಕಿ. ಮೀ ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಆರೋಪಿಗಳನ್ನು ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಬಂಧಿಸಲಾಗಿದೆ.

ಸದ್ಯ ಬಂಧಿತರಿಂದ 2 ಜಿಂಕೆ, 2 ಕಾಡು ಹಂದಿ, 1 ಗನ್, ಏರ್ ಗನ್, 11 ಜೀವಂತ ಗುಂಡು, 2 ಚಾಕು, ಕೊಡಲಿ, ಮಚ್ಚು, 3 ಮೊಬೈಲ್ ಜಪ್ತಿ ಮಾಡಲಾಗಿದೆ. ಹೈ ಫ್ಲ್ಯಾಶ್ ಲೈಟ್‍ಗಳನ್ನ ಬಳಸಿ ಆರೋಪಿಗಳು ಬೇಟೆಯಾಡುತ್ತಿದ್ದರು. ಎರಡು ತಿಂಗಳ ಸತತ ಪ್ರಯತ್ನದಿಂದ ಆರೋಪಿಗಳು ಬಲೆಗೆ ಬಿದಿದ್ದಾರೆ.

ಬೆಂಗಳೂರು ಅರಣ್ಯ ಸಂಚಾರಿ ದಳದ ಡಿಸಿಎಫ್ ಸುನಿತಾ ಬಾಯಿ, ಎಸಿಎಫ್ ಸರಿತಾ ಮಾರ್ಗದರ್ಶನ, ಆರ್​ಎಫ್ಒ ರಮೇಶ್, ಸಿದ್ದರಾಜು, ಅಮೃತ್ ದೇಸಾಯಿ, ರಾಜು, ಆಶಾ, ಚೇಸಿಂಗ್ ಮಾಡಿದ ಚಾಲಕ ಸುರೇಶ್​ ನೇತೃತ್ವದ ತಂಡದ ವಿಶೇಷ ಕಾರ್ಯಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST