LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಪಿಟಿಸಿಎಲ್ ಕಾಯ್ದೆ ವಿರುದ್ಧ ಆದೇಶಗಳನ್ನು ಜಾರಿಮಾಡದಂತೆ ಮನವಿ: ಆನೇಕಲ್ ಕೃಷ್ಣಪ್ಪ

ದೊಡ್ಡಬಳ್ಳಾಪುರ: ಪ್ರಜಾ ವಿಮೋಚನಾ ಚಳವಳಿ ವತಿಯಿಂದ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿರಾಜ್ಯ ಸರ್ಕಾರ ಪಿಟಿಸಿಎಲ್ ಕಾಯ್ದೆಯ 2023ದಲ್ಲಿ ತಿದ್ದುಪಡಿ ಮಾಡಿದ್ದರೂ ಸಹಾ ಉಚ್ಚನ್ಯಾಯಲ ಪಿಟಿಸಿಎಲ್ ಕಾಯ್ದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಹಿರಿಯ ನ್ಯಾಯವಾದಿಗಳ ತಂಡ ರಚಿಸಿ ಸರ್ವೋಚ್ಚ ನ್ಯಾಯಲಯದಲ್ಲಿ ತಡೆಯಾಜ್ಞೆ ಮತ್ತು ಆದೇಶ ಜಾರಗೆ ತರುವ ಕ್ರಮ ವಹಿಸು ವಂತೆ ಒತ್ತಾಯಿಸಿ ಪ್ರತಿಭಟನೆ.

ಮುಖ್ಯವಾಗಿ ಪಿಟಿಸಿಎಲ್ ಕಾಯ್ದೆಯು ತುಳಿತಕ್ಕೆ ಒಳಗಾದ ಜನಾಂಗದ ಅಭಿವೃದ್ದಿ ಮತ್ತು ಉದ್ದಾರಕ್ಕಾಗಿ, ಸರ್ಕಾರ 1978-79ರಲ್ಲಿ ಕಾಯ್ದೆ ಜಾರಿಗೆ ತಂದ ನಂತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಮಾಂಜೂರಾದ ಜಮೀನುಗಳನ್ನು ಪರಬಾರೆ ಮಾಡಲು ಸರ್ಕಾರದ ಪೂರ್ವನುಮತಿ ಕಡ್ಡಾಯ ಎಂಬ ಪರತ್ತು ಇತ್ತು. ಕಾಯ್ದೆ ಉಲ್ಲಂಘಿಸಿ ಭೂಮಿ ಪರಬಾರೆ ಆಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮಂಜೂರುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿಲ್ಲ.

ನೆಕ್ಕಂಟಿ ರಾಮಲಕ್ಷ್ಮೀ ಗಿ/S ಕರ್ನಾಟಕ ಸರ್ಕಾರದ ಪ್ರಕರಣ ಸಂಖ್ಯೆ 139002009 ದಿ: 26-10-2017ರಲ್ಲಿ ಸರ್ವೋಚ್ಚ ನ್ಯಾಯಲಯ ‘ಸಮುಚಿತ ಸಮಯದೊಳಗೆ” ಅರ್ಜಿ ಸಲ್ಲಿಸಬೇಕೆಂದು ಆದೇಶ ಮಾಡಿದ್ದು ನಿರ್ದಿಷ್ಟವಾಗಿ ಇಂತಿಷ್ಟು ವರ್ಷಗಳು ಎಂದು ಹೇಳದಿದ್ದರು.ಈ ಆದೇಶ ದ ನಂತರ ಜಿಲ್ಲಾಧಿಕಾರಿಗಳ ಉಚ್ಚನ್ಯಾಯ ಗಳಲ್ಲಿ ದಾಖಲಿಸಿದ್ದ ಸಾವಿರಾರು ಪ್ರಕರಣ ಗಳು ಕಾಯ್ದೆ ವಿರುದ್ದವಾಗಿ ಆದೇಶ ಗಳಾಗಿರುವುದನ್ನು ಖಂಡಿಸಿ ಕಾಲಮಿತಿ ರದ್ದುಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 2022ರಲ್ಲಿ ರಾಜ್ಯಾದ್ಯಾಂತ ದಲಿತ ಚಳವಳಿಗಾರರು ಹೋರಟಗಳನ್ನು ನಡೆಸಲಾಗಿತ್ತು.

ನಂತರ ಕ್ರಾಂಗೆಸ್ ಪಕ್ಷದ ಸರ್ಕಾರ ರಚನೆ ಯಾಗಿ ಮಾನ್ಯ ಸಿದ್ದಾರಾಮಯ್ಯನವರು ಮುಖ್ಯಮಂತ್ರಿಗಳಾದ ನಂತರ ಕಾಲಮಿತಿ ಇಲ್ಲವೆಂದು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿಯನ್ನು ಮೊದಲ ಸಂಪುಟದ ಸಭೆಯಲ್ಲಿ ಮಂಡಿಸಿ ದಿನಾಂಕ : 27-07-2023ರಲ್ಲಿ ಜಾರಿಗೊಳಿಸಿದರು ಇದರಿಂದ ರಾಜ್ಯದ ಲಕ್ಷಾಂತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಯ ಮಾರ್ಗ ಕಲ್ಪಿಸಿದ್ದು ಸ್ವಾಗತಾರ್ಹ ವಿಷಯವೇ ಆಗಿತ್ತು. ರಾಜ್ಯ ಸರ್ಕಾರ ಪಿಟಿಸಿಎಲ್ ಕಾಯ್ದೆಗೆ ಕಾಲ ಮಿತಿ ಇಲ್ಲ ಎಂದು ತಿದ್ದುಪಡಿ ತಂದಿರುವುದನ್ನು ಮಾನ್ಯ ಉಚ್ಚನ್ಯಾಯಲಯ ಪರಿಗಣಿಸುದ್ದು ಕಾಯ್ದೆ ವಿರಾದ್ಧವಾಗಿ 2024 ನವಂಬರ್ ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಆದೇಶಗಳನ್ನು ಮಾಡಿದ್ದು ಪ್ರತಿದಿನ ಹತ್ತಾರುವ ಕಾರಣ ಗಳನ್ನು ಸರ್ವೋಚ್ಚ ನ್ಯಾಯಲಯದ ನೆಕ್ಕಂಟಿ ರಾಮಲಕ್ಷ್ಮೀ ಗಿ/S ಕರ್ನಾಟಕ ಸರ್ಕಾರದ ತೀರ್ಪಿನ ಆದೇಶ ಉಲ್ಲೇಖಿಸಿ ವಜಾ ಮಾಡಲಾಗುತ್ತಿದೆ.

ಉಚ್ಚನ್ಯಾಯಲಯ ಕಾಯ್ದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ರಾಜ್ಯದ ಲಕ್ಷಾಂತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿಗಳ ಕುಟುಂಭಗಳು ಬೀದಿ ಪಾಲಾಗುವ ಸನ್ನಿವೇಶ ಸೃಷ್ಟಿ ಯಾಗಿರುವುದನ್ನು ಮುಖ್ಯಮಂತ್ರಿಗಳು, ಕಂದಾಯ ಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಹಿರಿಯ ನ್ಯಾಯವಾದಿಗಳ ತಂಡ ರಚಿಸಿ ಶಿಘ್ರವಾಗಿ ಸರ್ವೋಚ್ಚ ನ್ಯಾಯಲಯದಲ್ಲಿ ಮೇಲ್ಮನವಿಯನ್ನು ಸರ್ಕಾರದ ಮೂಲಕ ಹಾಕಲು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಸಂಘಟನೆ ಒತ್ತಾಯಿಸುತ್ತದೆ.

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿಯವರಿಗೆ ಭೂಮಿ ಮಂಜೂರಾದ ಎಲ್ಲಾ ಪಲಾನುಭವಿಗಳ ಕುಟುಂಬಗಳ ಹೊರಾಟಗಾರರು ಸಮಾಜದ ಕಳಕಳಿ ಇರುವವರು ಒಗ್ಗಟ್ಟಾಗಿ ಆಯಾ ಪ್ರದೇಶಗಳಲ್ಲೇ ಹೊರಾಟಗಳನ್ನು ಮಾಡುವುದರ ಮೂಲಕ ಮುಖ್ಯಮಂತ್ರಿಳು, ಕಂದಾಯ ಮಂತ್ರಿಗಳು ಸೇರಿದಂತೆ ಮಿಸಲು ಕ್ಷೇತ್ರಗಳಲ್ಲಿ ಗೆದ್ದಿರುವ ಎಲ್ಲ ಮಂತ್ರಿಗಳು ಶಾಸಕರ ಮೇಲೆ ಒತ್ತಡ ತರುವ ಕಾರ್ಯಕ್ರಮ ಗಳಲ್ಲಿ ನಿರಂತರವಾಗಿ ಬಾಗವಹಿಸಬೇಕೆಂದು ಮನವಿ.

ಉಚ್ಚನ್ಯಾಯಲಯವು ಕಾಯ್ದೆಯನ್ನು ಪರಿಗಣಿಸದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ಸರ್ಕಾರ ಉನ್ನತ ಮಟ್ಟದ ಹಿರಿಯ ವಕೀಲರ ತಂಡ ರಚಿಸಿ ಉಚ್ಚನ್ಯಾಯಲಯ ಮಾಡಿರುವ ಎಲ್ಲಾ ಆದೇಶಗಳಿಗೆ ಸರ್ವೋಚ್ಚ ನ್ಯಾಯಲಯದಲ್ಲಿ ತಡೆಯಾಜ್ಞೆ ಮಾಡಿಸಿ ಕಾಯ್ದೆಯ ಪರವಾಗಿ ಆದೇಶ ಆಗುವ ಬಗ್ಗೆ ಶೀಘ್ರವಾಗಿ ಮಾತ್ರ ಮುಖ್ಯ ಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ದೇವ ರಾಜ್, ಬೆಂಗಳೂರು ವಿಭಾಗದ ಅಧ್ಯಕ್ಷ ಮಾದೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹೆಚ್.ರಾಘವೇಂದ್ರ, ದೊಡ್ಡ ಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಹೆಚ್.ಶಿವ ಕುಮಾರ್, ಪ್ರಧಾನಕಾರ್ಯದರ್ಶಿ ಪುಟ್ಟರಾಜ ಗೌಡ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು