LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಪುಷ್ಪ'ನೊಂದಿಗೆ ಹೆಜ್ಜೆ ಹಾಕಿದ ಶ್ರೀಲೀಲಾ

ಚಂದನವನದಲ್ಲಿ 'ಕಿಸ್' ಸಿನಿಮಾ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ನಟಿ ಶ್ರೀಲೀಲಾ ಇದೀಗ ಕನ್ನಡದ ಜೊತೆಗೆ ಟಾಲಿವುಡ್‍ನಲ್ಲಿ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ.ಹೊಸ ಸುದ್ದಿ ಏನೆಂದರೆ 'ಪುಷ್ಪ-2' ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಟಾಲಿವುಡ್‍ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಪುಷ್ಪ-2' ಡಿಸೆಂಬರ್ 5ಕ್ಕೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಸಿನಿಮಾದ ಐಟಂ ಹಾಡೊಂದಕ್ಕೆ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಸಿನಿಮಾದ ಟ್ರೇಲರ್ ನ.17ರಂದು ಬಿಡುಗಡೆಯಾಗುತ್ತಿದೆ.

'ಪುಷ್ಪ' ಸಿನಿಮಾದ ಮೊದಲ ಅಧ್ಯಾಯದಲ್ಲಿ 'ಹೂ ಅಂಟಾವಾ..' ಹಾಡು ಹಿಟ್ ಆಗಿತ್ತು. ಸಮಂತಾ ಹಾಗೂ ಅಲ್ಲು ಅರ್ಜುನ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಡಿಎಸ್‍ಪಿ ಸಂಗೀತ ಮೋಡಿ ಮಾಡಿತ್ತು. ಇದೀಗ 'ಪುಷ್ಪ' ಸೀಕ್ವೆಲ್‍ನಲ್ಲಿ ಡ್ಯಾನ್ಸಿಂಗ್ ಕ್ವೀನ್ ಹೆಜ್ಜೆ ಹಾಕಿದ್ದಾರೆ. ಗಣೇಶ್ ಆಚಾರ್ಯ ನೃತ್ಯನಿರ್ದೇಶನ ಈ ಹಾಡಿಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಫಹಾದ್ ಫಾಸಿಲ್, ಧನಂಜಯ, ಅನಸೂಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST