LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಪೊಲೀಸರೊಂದಿಗೆ ಗುಂಡಿನ ಚಕಮಕಿ: 7 ಮಾವೋವಾದಿಗಳ ಹತ್ಯೆ

ಹೈದರಾಬಾದ್: ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಭಾನುವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಹತರಾಗಿದ್ದಾರೆ.

ತೆಲಂಗಾಣ ಪೊಲೀಸರರ ನಕ್ಸಲ್ ವಿರೋಧಿ ಪಡೆಯಾದ ಗ್ರೇಹೌಂಡ್ಸ್ ಮತ್ತು ಅಲ್ಟ್ರಾಗಳ ನಡುವೆ ಎತುರ್ನಗರಂ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ, ಘಟನಾ ಸ್ಥಳದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ 47 ರೈಫಲ್‌ಗಳು ಸೇರಿವೆ.

ಕೊಲ್ಲಲ್ಪಟ್ಟವರಲ್ಲಿ ನಿಷೇಧಿತ ಸಿಪಿಐ-ಮಾವೋವಾದಿಯ ತೆಲಂಗಾಣ ರಾಜ್ಯ ಸಮಿತಿಯ (ಯೆಲ್ಲಾಂಡು ನರಸಂಪೇಟ್) ಕಾರ್ಯದರ್ಶಿ ಕುರ್ಸಮ್ ಮಂಗು ಅಲಿಯಾಸ್ ಭದ್ರು ಸೇರಿದ್ದಾರೆ.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST