LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಪ್ರಾಂಶುಪಾಲರು, ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದಿದ್ದೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಕೋಚಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ವಿದ್ಯಾರ್ಥಿಯೊಬ್ಬ ನೇರವಾಗಿ ವಿದ್ಯಾಮಂತ್ರಿಗಳಿಗೆ ಕನ್ನಡ ಭಾಷೆ ಮಾತನಾಡಲು ಬರಲ್ಲ ಎಂದು ಹೇಳಿದ್ದು ಸಾಕಷ್ಟು ಸುದ್ದಿಯಾಯಿತು.

ನೀಟ್ ಕೋಚಿಂಗ್ ತರಬೇತಿ ಉದ್ಘಾಟನೆ ನಂತರ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೋರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ವಿದ್ಯಾಮಂತ್ರಿಗಳಿಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಹೇಳಿದನು. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಗರಂ ಆಗಿ, ಯಾರೋ ಅದು ಹಾಗೆ ಹೇಳಿದ್ದು, ಈ ವಿಷಯಾನ ಗಂಭೀರವಾಗಿ ತಗೊಳ್ಬೇಕು, ಯಾರು ಅಂತ ಫೈಂಡ್ ಔಟ್ ಮಾಡಿ ಕ್ರಮ ತಗೊಳ್ಳಿ ಎಂದು ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಹೇಳಿದರು. ಈ ವಿಡಿಯೊ ಸಾಕಷ್ಟು ವೈರಲ್ ಆಗಿ ಶಿಕ್ಷಣ ಸಚಿವರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಪ್ರಶ್ನಿಸಿದಾಗ ಮತ್ತೆ ಗರಂ ಆಗಿಯೇ ಪ್ರತಿಕ್ರಿಯಿಸಿದರು. ನಾನು ಟ್ರೋಲ್ ಗಳನ್ನು ನೋಡಿದೆ, ಟ್ರೋಲ್ ಗಳಿಗೆ ಐ ಡೋಂಟ್ ಕೇರ್, ಟ್ರೋಲ್ ಮಾಡೋರಿಗೆ ಉದ್ಯೋಗ ಇಲ್ಲ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳೋ ಮಧು ಬಂಗಾರಪ್ಪ ನಾನಲ್ಲ, ನಾನೊಬ್ಬ ಶಿಕ್ಷಣ ಸಚಿವ, ಅಲ್ಲಿ ವಿದ್ಯಾರ್ಥಿ ತಪ್ಪು ಮಾತನಾಡಲು ಶಾಲೆಯ ಉಪನ್ಯಾಸಕರು, ಪ್ರಾಂಶುಪಾಲರು ಬಿಡಬಾರದಿತ್ತು ಎಂದರು.

ಪ್ರಾಂಶುಪಾಲರು, ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದಿದ್ದೆ: ನಾನು ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಿ ಎಂದು ಎಲ್ಲಿ ಹೇಳಿದ್ದೆ, ನಾನು ಹೇಳಿರೋದು ಹೆಡ್ ಮಾಸ್ಟರ್, ಬಿಇಒ ಮೇಲೆ, ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು, ವಿದ್ಯಾರ್ಥಿ ಮೇಲೆ ಕ್ರಮ ತಗೊಳ್ಳೋಕೆ ನನಗೇನು ಅಧಿಕಾರ ಇದೆ, ಪ್ರಾಂಶುಪಾಲರು, ಉಪನ್ಯಾಸಕರು ಮಕ್ಕಳನ್ನು ಹತೋಟಿಯಲ್ಲಿಡಬೇಕು, ಅಂದು 640 ಶಾಲೆಗಳು ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. 50 ಸಾವಿರ ಮಕ್ಕಳು ಲೈವ್ ಲ್ಲಿ ನೋಡುತ್ತಿದ್ದರು. ಸರ್ಕಾರದಿಂದ ಮಕ್ಕಳ ಭವಿಷ್ಯಕ್ಕೆ ಮಾಡುತ್ತಿರುವ ಒಂದು ದೊಡ್ಡ ಯೋಜನೆಯದು. ಆ ಯೋಜನೆ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಬದಲು ಯಾರೋ ಒಬ್ಬ ವಿದ್ಯಾರ್ಥಿ ವಿದ್ಯಾ ಮಂತ್ರಿಗೆ ಕನ್ನಡ ಮಾತನಾಡಲು ಬರೋದಿಲ್ಲ ಎಂದು ಹೇಳಿದ್ದನ್ನೇ ಹೈಲೈಟ್ ಮಾಡ್ತೀರ, ನಿಮ್ಮ ಮಕ್ಕಳು ಈ ರೀತಿ ಮಾಡಿದ್ದರೆ ಮನೆಯಲ್ಲಿ ಬುದ್ದಿ ಹೇಳುತ್ತಿರಲಿಲ್ಲವೇ, ನಾನಾದ್ರೆ ನನ್ನ ಮಗನಿಗೆ ಬುದ್ದಿ ಹೇಳುತ್ತಿದ್ದೆ ಎಂದು ಗರಂ ಆದರು.

ಪದೇ ಪದೇ ಈ ರೀತಿ ನನಗೆ ಕನ್ನಡ ಬರೋದಿಲ್ಲ ಎಂದು ಹೇಳೋದನ್ನು ನಿಲ್ಲಿಸಬೇಕು, ನನಗೆ ಸರ್ಕಾರದಲ್ಲಿ ಜವಾಬ್ದಾರಿಯುತ ಶಿಕ್ಷಣ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನೀವು ಪುಕ್ಸಟೆ ಟ್ರೋಲ್ ಮಾಡಿದ್ರೆ ನನಗೇನಾಗ್ಬೇಕಾಗಿದೆ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ ಆಗಿರ್ತಾನೆ, ವಿಪಕ್ಷದವರು ಯಾರು ಏನೇ ಟೀಕೆ ಮಾಡಿದ್ರೂ ಐ ಡೋಂಟ್ ಕೇರ್, ನಿನ್ನೆ ಬಸವರಾಜ ಹೊರಟ್ಟಿಯವರು ನನಗೆ ಫೋನ್ ಮಾಡಿ ಕರೆಕ್ಟ್ ಮಾಡಿದ್ದೀಯ ಮಧು ಎಂದರು. ನಾನು ನನ್ನ ಅಧಿಕಾರವನ್ನು ಇಲ್ಲಿ ಚಲಾಯಿಸಿದ್ದೇನೆ ಎಂದು ಹೇಳಿದರು.

ನಾನು ನನ್ನ ಮಗನನ್ನು ಎಷ್ಟು ಜವಾಬ್ದಾರಿ, ಪ್ರೀತಿಯಿಂದ ನೋಡಿಕೊಳ್ಳುತ್ತೇನೆಯೋ ಅಷ್ಟೇ ಪ್ರೀತಿ, ಕಾಳಜಿಯನ್ನು ಈ ರಾಜ್ಯದ ಮಕ್ಕಳ ಮೇಲೆ ಸಹ ತೋರಿಸುತ್ತೇನೆ. ಅವರನ್ನು ದೇವರ ಸ್ಥಾನದಲ್ಲಿ ನೋಡುತ್ತೇನೆ, ಟ್ರೋಲ್ ಮಾಡಿ ನನ್ನನ್ನು ಬಗ್ಗಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು