LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಫೆ.3ಕ್ಕೆ ಜಿಲ್ಲಾಡಳಿತ ಭವನದ ಮುಂದೆ ಊರುಕೇರಿಯ ನ್ಯಾಯಬದ್ಧ ಹಕ್ಕಿಗಾಗಿ ಪ್ರತಿಭಟನೆ

ದೇವನಹಳ್ಳಿ : ತಾಲೂಕಿನಲ್ಲಿ ಅಧಿಕಾರಿಗಳ ಭೇಜವಾಬ್ದಾರಿ ಯಿಂದ ಬಡಜನರ ಗೋಳು ಕೇಳುವವರಿಲ್ಲದಂತಾಗಿದೆ ಸಣ್ಣಸಣ್ಣ ಜಾಗಗಳನ್ನು ಒತ್ತುವರಿ ಮಾಡಿದ್ದರೂ ಕಂಡು ಕಾಣದಂತಿರುವ ಅಧಿಕಾರಗಳ ಕಣ್ಣು ತೆರೆಸಲು “ಊರುಕೇರಿಯ ನ್ಯಾಯ ಬದ್ಧ ಹಕ್ಕಿಗಾಗಿ ಪ್ರತಿಭಟನೆ”ಯನ್ನು ಹಮ್ಮಿಕೊಂಡಿದ್ದೇವೆ ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಕೀಲರು ಎಂ ನಿಖಿಲ್ ತಿಳಿಸಿದರು.

ಅವರು ಪಟ್ಟಣದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಲೂರು ದುದ್ದನಹಳ್ಳಿ ಡಾ||ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಹಾಗೂ ಕೆ.ಆರ್.ಎಸ್ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇವನಹಳ್ಳಿ ತಾಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದ ನಂತರ ಜಮೀನಿನ ಬೆಲೆ ಗಗನಕ್ಕೇರಿದ್ದು ಕೆಲವು ಪ್ರಭಾವಿಗಳು ಬಡ ಜನರ ಅದೆಷ್ಟೋ ಜಮೀನುಗಳನ್ನು ಇಲ್ಲದ ತಕರಾರು ಸೃಷ್ಠಿಸಿ ಅಧಿಕಾರಗಳ ಮೇಲೆ ಪ್ರಭಾವ ಬೀರಿ ಜಮೀನು ಕಬಳಿಸುತ್ತಿದ್ದಾರೆ ಭ್ರಷ್ಠ ಅಧಿಕಾರಿಗಳ ವಿರುದ್ದ ಫೆ. 3 ಸೋಮವಾರದಂದು ಜಿಲ್ಲಾಡಳಿತ ಭವನದ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಕೆಆರ್‍ಎಸ್ ಪಕ್ಷ ದುಡಿಯುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ವೆಂಕಟೇಶ್‍ಮೂರ್ತಿ ಮಾತನಾಡಿ ಸಾಮಾನ್ಯ ಜನರು ಓಡಾಡುವ ರಸ್ತೆ, ನಕಾಶೆ ದಾರಿ, ಕೇರಿಗಳಿಗೆ ಓಡಾಡಲು ಅವಕಾಶಗಳು ಮಾಡಿಕೊಡದೆ ಪ್ರತಿಯೊಂದು ಹಳ್ಳಿಯಲ್ಲೂ ದೌರ್ಜನ್ಯ ಶೋಷಣೆ ಮಾಡುತ್ತಲೇ ಬರುತ್ತಿದ್ದಾರೆ. ಹಳ್ಳಿಗಳಲ್ಲಿ ಇಂತಹ ಸಮಸ್ಯೆಗಳ ಸಾಗರವೇ ಅಡಗಿದೆ ಇದಕ್ಕೆ ಮುಖ್ಯ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದೆ ಇದಕ್ಕೆ ಅಂತಿಮ ಹಂತವೇ ಹೋರಾಟ ಹಾಗಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ಸ್ಪಂದನೆ ಮಾಡದೇ ಇದ್ದದ್ದರಿಂದ ಬೃಹತ್ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ಡಾ|| ಬಿಆರ್. ಅಂಭೇಡ್ಕರ್ ಯುವಕರ ಸಂಘದ ಡಿ.ಎಂ. ಮಂಜುನಾಥ್ ಮಾತನಾಡಿ ದುದ್ದನಹಳ್ಳಿ ಗ್ರಾಮದಿಂದ ಬೈರದೇನಹಳ್ಳಿವರೆಗೂ ಸರ್ಕಾರಿ ನಕಾಶೆಯಲ್ಲಿ ಇದ್ದಂತಹ ದಾರಿಯನ್ನ ಪ್ರಭಾವಿ ವ್ಯಕ್ತಿಗಳು ಅಕ್ರಮಿಸಿಕೊಂಡಿದ್ದು, ಅದನ್ನು ತೆರವುಗೊಳಿಸಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು, ಸಮುದಾಯ ಭವನ ಶೀತಿಲಗೊಂಡಿದ್ದು ನವೀಕರಣ ಮಾಡಿ, ಸರ್ವೆ ಮಾಡಿ ಭವನಕ್ಕೆÉ್ಕ ಸೂಕ್ತ ಕಾಂಪೌಂಡ್ ಮಾಡಬೇಕು, ಕೊನೆಯ ಬೀದಿ ದೂಳಪ್ಪನವರ ಮನೆಯಿಂದ ಭೈರಪ್ಪನವರ ಮನೆಗೆ ಹೋಗುವ ಬೀದಿ ಹಾಗೂ ಸಂಪಂಗಪ್ಪ ಮನೆಯ ಹಿಂದಿನ ಬೀದಿಯಲ್ಲಿ ಕಾಂಕ್ರೀಟ್ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು, ಹಳೆ ಸೈಟುಗಳಿಂದ ಮತ್ತು ದುದ್ದನಹಳ್ಳಿಯಿಂದ ಬೀರಸಂದ್ರ ಗ್ರಾಮಕ್ಕೆ ಓಡಾಡಲು ದಾರಿ ಇರುವುದಿಲ್ಲ ಸರ್ಕಾರಿ ನಕಾಶೆಯಲ್ಲಿ ದಾರಿ ಇದ್ದು ಕೆಲ ಪ್ರಭಾವಿ ವ್ಯಕ್ತಿಗಳು ದಾರಿಯನ್ನು ಆಕ್ರಮಿಸಿಕೊಂಡು ದಾರಿ ಬಿಡಲು ನಕಾರ ಮಾಡಿ ತೊಂದರೆಯನ್ನು ನೀಡುತ್ತಿದ್ದಾರೆ.

ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತೆರವುಗೊಳಿಸಿ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಅಗ್ರಹಿಸಿದರು.ಇದೇ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ಗೌರವಾಧ್ಯಕ್ಷ ಮಂಜುನಾಥ್. ಡಿ.ಎಂ, ಅಧ್ಯಕ್ಷ ಮನು .ಡಿ.ಎಂ, ಉಪಾಧ್ಯಕ್ಷ ಆರ್ಥಿಕ್.ಟಿ, ಜೈ ಭೀಮ್ ಸಂಘಟನೆಯ ರಾಜ್ಯಾಧ್ಯಕ್ಷ ಪಾಳ್ಯದ ಮುನಿರಾಜು, ಕೆ.ಆರ್.ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೌರವಾಧ್ಯಕ್ಷರು ಟಿ.ಜೆ ವೆಂಕಟೇಶಮೂರ್ತಿ, ಅಧ್ಯಕ್ಷ ಮುನೀಂದ್ರ, ಸದಸ್ಯರು ಶಶಿಕುಮಾರ್, ಮುನಿರಾಜು ಸೇರಿದಂತೆ ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು