LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಬಾಶೆಟ್ಟಿಹಳ್ಳಿ ವಿಎಸ್‍ಎಸ್‍ಎನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ `ಕಿಡಿಗೇಡಿಗಳು’ ಪದ ಬಳಕೆಗೆ ಖಂಡನೆ

ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ವಿವಿದೊದ್ದೇಶ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಉಮೇದುವಾರರನ್ನು ಕಿಡಿಗೇಡಿಗಳು ಎಂದು ಕರೆದಿರುವ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯವಾಗಿದ್ದು, ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದ ಇವರು ಸಂಘದ ಏಳಿಗೆಯ ಮನೋಭಾವವಿರುವವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಿಲ್ಲ ಎಂದು ಜನಧ್ವನಿ ವೇದಿಕೆಯ ಸದಸ್ಯರು ದೂರಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜನಧ್ವನಿವೇದಿಕೆಯ ಬಾಶೆಟ್ಟಿಹಳ್ಳಿ ಕೃಷ್ಣ ಮೂರ್ತಿ, ನಾರಾಯಣ ಸ್ವಾಮಿ, ಜ.19 ರಂದು ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆ ನಡೆಯಿತು.ಇಲ್ಲಿ ಚುನಾವಣೆಯು ನಡೆದು 30 ವರ್ಷಗಳು ಆಗಿದೆ, ಈಗಲೂ ಮೂರು ಪಕ್ಷಗಳು ಸೇರಿ ಅಪವಿತ್ರ ಮೈತ್ರಿಯೊಂದಿಗೆ, ರೈತರಿಗೆ ಯಾವುದೇ ಮಾಹಿತಿ ನೀಡದೇ ಅವಿರೋಧ ಆಯ್ಕೆ ಎಂದು ಅವರಿಗೆ ಬೇಕಾದವರನ್ನೇ ಆಯ್ಕೆ ಮಾಡಲು ಹೋರಟಾಗ ಜನಧ್ವನಿ ವೇದಿಕೆಯ ಮುಖಂಡರು ಖಂಡಿಸಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಇದರ ಪರಿಣಾಮ ಚುನಾವಣೆ ನಡೆದು ಎನ್ಡಿಎ ಬೆಂಬಲಿತ ಅಭ್ಯರ್ಥಿಗಳು 9 ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 2 ಸದಸ್ಯರು ಜಯಗಳಿಸಿದ್ದಾರೆ.

ಸಂಘದಲ್ಲಿ ಒಟ್ಟು ಮತದಾರರ ಸಂಖ್ಯೆ 242,ಅಷ್ಟೇ. ಸಂಘಕ್ಕೆ ಆಯ್ಕೆಯಾಗಲು ಹತ್ತಾರು ಲಕ್ಷಗಳು ಖರ್ಚು ಮಾಡಿ ಗೆಲ್ಲುವ ಅವಶ್ಯಕತೆ ಇತ್ತಾ. ಜನಧ್ವನಿ ವೇದಿಕೆಯಿಂದ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ನೀಡಿದ ಎಲ್ಲಾ ಮತಬಾಂಧವರಿಗೂ ತಮ್ಮ ಮೂಲಕ ವಂದನೆಗಳು ಅರ್ಪಿಸುತ್ತೇವೆ. ಈ ಸಮಯದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಪ್ರೇಮ್ ಕುಮಾರ್ ಚುನಾವಣೆ ನಡೆಸಲು ಕಾರಣರಾದವರು ಕಿಡಿಕೇಡಿಗಳು ಎಂದು ಕರೆದಿದ್ದಾರೆ.

ಇದು ಖಂಡನೀಯ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವವನ್ನು ಉಳಿಸುವ , ಗೌರವಿಸುವ ಹಾಗೂ ಘನತೆಯನ್ನು ಹೆಚ್ಚಿಸುತ್ತದೆ.ಆದರೆ ಚುನಾವಣೆಗೆ ಸ್ಪರ್ಧಿಸುವುದು ಮತ್ತು ಮತದಾನ ಮಾಡುವುದನ್ನು ವಿರೋಧಿಸುವ ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದ ಇವರು ಮತ್ತೊಬ್ಬರನ್ನು ಕಿಡಿಗೇಡಿಗಳು ಎನ್ನಲು ಯಾವ ನೈತಿಕತೆ ಇದೆ. ಹಲವಾರು ವರುಷಗಳಿಂದ ಏಳು ಊರಿನ ರೈತರುಗಳಿಗೆ ಮಾಹಿತಿ ನೀಡದೆ ಕತ್ತಲಲ್ಲಿ ಇಟ್ಟು ಸಂಘದ ಸದಸ್ಯತ್ವವನ್ನು ಹೆಚ್ಚು ಮಾಡದೆ ಕೇಲವೇ ಮತದಾರರನ್ನು ಉಳಿಸಿಕೊಂಡು ಅವಿರೋಧವಾಗಿ ಆಯ್ಕೆಯಾಗಲು ಸಂಚು ರೂಪಿಸುತ್ತಿದ್ದರು.

ಇದನ್ನು ಗಮನಿಸಿದ ಜನಧ್ವನಿ ವೇದಿಕೆಯು ಇನ್ನು ಇರುವ ನೂರಾರು ರೈತರನ್ನು ಸಹಕಾರಸಂಘಕ್ಕೆ ಸದಸ್ಯರನ್ನಾಗಿಸಲು ಈ ಚುನಾವಣೆಯ ನಿರ್ಣಯವನ್ನು ತೆಗೆದುಕೊಂಡ ಕಾರಣ ವೇದಿಕೆಯನ್ನು ಕಿಡಿಗೇಡಿಗಳೆಂದು ಸಂಭೋಸಿದ್ದಾರೆ. ಈ ಹಿಂದಿನ ಆಡಳಿತ ಮಂಡಲಿ30 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗಿ ತಮ್ಮ ನಿರ್ದೇಶಕರು ಸಂಘವನ್ನು ಅಭಿವೃದ್ಧಿ ಮಾಡಲು ರೈತರಿಗೆ ಸವಲತ್ತುಗಳನ್ನು ನೀಡಲು ಏನು ಪ್ರಯತ್ನಪಟ್ಟಿದ್ದಾರೆ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ ಎಂದರು.

ಈ ವೇಳೆ ರಾಜ್ಯ ಮತ್ತು ತಾಲೂಕು ವೇದಿಕೆ ಮುಖಂಡರಾದ ರಮೇಶ ಸಂಕ್ರಾಂತಿ, ಮತ್ತು ಕೊನಘಟ್ಟ ಚಂದ್ರಪ್ಪ, ಕೆಸ್ತೂರು ಗಿರೀಶï, ತಿಪ್ಪೂರು ನರಸಿಂಹ ಮೂರ್ತಿ, ಮತ್ತು ರಾಮಮೂರ್ತಿ. ನಾಗದೇನಹಳ್ಳಿ ಚಂದ್ರಣ್ಣ ಏಕಾಶಿಪುರ ರಾಜಣ್ಣ , ಬಾಶೆಟ್ಟಹಳ್ಳಿ ಕೃಷ್ಣ ಮೂರ್ತಿ, ಸದಾನಂದ, ಅರಹಳ್ಳಿ ಗುಡ್ಡದಹಳ್ಳಿ ವೆಂಕಟೇಶ, ಓಬದೇನಹಳ್ಳಿ ರಾಜೇಂದ್ರ ಎಳ್ಳುಪುರ ಮಹೇಶ, ಬೈರಸಂದ್ರ ಗಂಗಾಧರ್, ಜಿಂಕೆಬಚ್ಚಹಳ್ಳಿ ದುರ್ಗೇಶ್ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು